Advertisement

Vidhyarthi Vidyarthiniyare Trailer: ಟ್ರೇಲರ್‌ನಲ್ಲಿ ಟೀನೇಜ್‌ ಸ್ಟೋರಿ

05:50 PM May 15, 2024 | Team Udayavani |

ಚಂದನ್‌ ಶೆಟ್ಟಿ ನಾಯಕರಾಗಿರುವ “ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಅದು ಸೈಡ್‌-ಎ. ಮುಂದೆ ಸೈಡ್‌ ಬಿ ಟ್ರೇಲರ್‌ ಬರಲಿದೆ.

Advertisement

ಟ್ರೇಲರ್‌ನಲ್ಲಿ ಟೀನೇಜ್‌ ಸ್ಟೋರಿಯ ಕಂಪು, ಹದಿಹರೆಯದ ಮನಸುಗಳ ನಾನಾ ಮಗ್ಗುಲುಗಳನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ.

“ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಟೈಟಲ್‌ ಹೇಳುವಂತೆ, “ಇದು ಯೂತ್‌ ಸಬ್ಜೆಕ್ಟ್ ಸಿನಿಮಾ. ಕಾಲೇಜ್‌ ಹುಡುಗ, ಹುಡುಗಿಯರ, ಹದಿ ಹರೆಯದ ಹುಚ್ಚು ಮನಸ್ಸಿನ ಹೊಯ್ದಾಟವನ್ನು ಇಲ್ಲಿ ತೆರೆದಿಡಲಾಗಿದೆ. ಆದರೆ, ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟು ಮಾಡಿದ ಸಿನಿಮಾ. ಹೊಡೆದಾಟ, ಬಡಿದಾಟ, ರ್ಯಾಗಿಂಗ್‌, ಬಿಸಿ ರಕ್ತದ ಹುಡುಗರ ಪುಂಡಾಟಿಕೆ ಸೇರಿದಂತೆ ಇಲ್ಲಿ ಎಲ್ಲವೂ ಇದೆ. ಅದರ ಜೊತೆ ಜೊತೆಗೇ ಶೈಕ್ಷಣಿಕ ಪರಿಸರದ ಕ್ರೌರ್ಯದ ಮುಖವೊಂದನ್ನು ಬಯಲಾಗಿಸುವ ಪ್ರಯತ್ನವೂ ಟ್ರೇಲರ್‌ನಲ್ಲಿದೆ.

ಮೋಜು ಮಸ್ತಿಯಲ್ಲಿ ಮೈಮರೆತ ಮನಸ್ಥಿತಿಗಳ ಸುತ್ತವೂ ಕಥೆ ಸಾಗುವ ಸೂಚನೆ ನೀಡಲಾಗಿದೆ. ಅರುಣ್‌ ಅಮುಕ್ತ ಈ ಚಿತ್ರದ ನಿರ್ದೇಶಕರು. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್‌ ಜಿ ಕಶ್ಯಪ್‌ ಕಾರ್ಯಕಾರಿ ನಿರ್ಮಾಪಕರು.

ಚಿತ್ರಕ್ಕೆ ಕುಮಾರ್‌ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ, ಪವನ್‌ ಗೌಡ ಸಂಕಲನ, ಟೈಗರ್‌ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next