Advertisement

ಗಾಂಚಲಿಗೆ 25 ರ ಖುಷಿ

05:47 AM Dec 30, 2018 | |

ಹೊಸಬರ ಸಿನಿಮಾ ಓಡೋದು ಕಷ್ಟ ಎಂಬ ಸಮಯದಲ್ಲಿ ಸಿನಿಮಾ 25 ದಿನ ಓಡಿದರೆ ಯಾರು ತಾನೇ ಖುಷಿಯಾಗಿರಲ್ಲ ಹೇಳಿ. ಸಹಜವಾಗಿಯೇ ಖುಷಿಯಾಗಿರುತ್ತಾರೆ. ಈಗ “ಗಾಂಚಲಿ’ ತಂಡ ಕೂಡಾ ಅದೇ ಖುಷಿಯಲ್ಲಿದೆ. “ಗಾಂಚಲಿ’ ಎಂಬ ಸಿನಿಮಾವೊಂದು ಬಿಡುಗಡೆಯಾಗಿರುವುದು ನಿಮಗೆ ಗೊತ್ತಿರಬಹುದು. ಪಕ್ಕಾ ಯೂತ್‌ಫ‌ುಲ್‌ ಸಿನಿಮಾವಾಗಿದ್ದ ಈ ಚಿತ್ರ ಈಗ 25 ದಿನ ಪೂರೈಸಿದೆ.

Advertisement

ಮೊದಲ ಪ್ರಯತ್ನವೇ 25 ದಿನ ಓಡಿದ ಖುಷಿಯಲ್ಲಿ ಇಡೀ ಚಿತ್ರತಂಡ ತೇಲಾಡುತ್ತಿದೆ. ಈ ಚಿತ್ರದಲ್ಲಿ ಆದರ್ಶ್‌ ನಾಯಕರಾಗಿ ನಟಿಸಿದ್ದಾರೆ. ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಒಂದಷ್ಟು ಅವಕಾಶಗಳು ಕೂಡಾ ಹುಡುಕಿಕೊಂಡು ಬರುತ್ತಿವೆಯಂತೆ.

ಅಂದಹಾಗೆ, ಚಿತ್ರ 25 ದಿನ ಪೂರೈಸಿದ ಖುಷಿಯಲ್ಲಿ ಚಿತ್ರದ ನಿರ್ಮಾಪಕರು ನಾಯಕನಿಗೆ ಬೈಕ್‌ವೊಂದನ್ನು ಗಿಫ್ಟ್ ಆಗಿ ನೀಡಿದ್ದಾರಂತೆ. ಈ ಚಿತ್ರ ಜೈ ಮಾರುತಿ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗಿದೆ. ಚಿತ್ರದಲ್ಲಿ ಪ್ರಕೃತಿ ಹಾಗೂ ಅಖೀಲಾ ನಟಿಸಿದ್ದಾರೆ. ಚಿತ್ರಕ್ಕೆ ಚಂದನ್‌ ಶೆಟ್ಟಿ ಸಂಗೀತವಿದೆ. ಶರತ್‌ ಲೋಹಿತಾಶ್ವ, ಲೋಕಿ, ವರ್ಧನ್‌ ತೀರ್ಥಹಳ್ಳಿ, ರಕ್ಷಯ್‌, ರಾಜು ತಾಳಿಕೋಟೆ, ಉಮೇಶ್‌ ಮುಂತಾದವರು ನಟಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next