Advertisement

ಮೊದಲ ಚಿತ್ರದ ಖುಷಿಯಲ್ಲಿ ಗಾನವಿ

11:14 AM Feb 15, 2022 | Team Udayavani |

ಟಿ. ಎನ್‌ ಸೀತಾರಾಮ್‌ ಅವರ “ಮಗಳು ಜಾನಕಿ’ ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾದ ನಟಿ ಗಾನವಿ ಲಕ್ಷ್ಮಣ್‌. ಆ ನಂತರ ರಿಷಭ್‌ ಶೆಟ್ಟಿ ಅಭಿನಯದ “ಹೀರೋ’ ಸಿನಿಮಾದ ಮೂಲಕ ಹೀರೋಯಿನ್‌ ಆಗಿ ಬೆಳ್ಳಿತೆರೆಗೂ ಪರಿಚಯವಾದ ನಟಿ. ಈಗ ಗಾನವಿ ತಮ್ಮ ಎರಡನೇ ಸಿನಿಮಾ “ಭಾವಚಿತ್ರ’ದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ, ಗಾನವಿ ಅವರ ಪ್ರಕಾರ, “ಭಾವಚಿತ್ರ’ ಅವರ ಮೊದಲ ಸಿನಿಮಾವಂತೆ!

Advertisement

ಹೌದು, “ಮಗಳು ಜಾನಕಿ’ ಧಾರಾವಾಹಿ ನಡೆಯುತ್ತಿರುವಾಗಲೇ ಗಾನವಿ ಒಪ್ಪಿಕೊಂಡು ಅಭಿನಯಿಸಿದ ಮೊದಲ ಸಿನಿಮಾ “ಭಾವಚಿತ್ರ’. ಆದರೆ ಕೋವಿಡ್‌ ಲಾಕ್‌ಡೌನ್‌ ಮತ್ತಿತರ ಕಾರಣಗಳಿಂದ ಈ ಸಿನಿಮಾ ಬಿಡುಗಡೆಯಾಗುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಂಡಿತು. ಈ ನಡುವೆ ಎರಡನೇ ಸಿನಿಮಾ “ಹೀರೋ’ದಲ್ಲಿ ಅಭಿನಯಿಸುವ ಅವಕಾಶ ಗಾನವಿ ಅವರಿಗೆ ಸಿಕ್ಕಿತು. ಆದರೆ, ಎರಡನೇ ಸಿನಿಮಾ “ಹೀರೋ’ ಮೊದಲ ಸಿನಿಮಾ “ಭಾವಚಿತ್ರ’ಕ್ಕಿಂತ ಮೊದಲೇ ಬಿಡುಗಡೆಯಾಯಿತು. ಹೀಗಾಗಿ ಅಭಿನಯಿಸಿದ ಮೊದಲ ಸಿನಿಮಾ “ಭಾವಚಿತ್ರ’ ಬಿಡುಗಡೆಯಾದ ಮೊದಲ ಸಿನಿಮಾ “ಹೀರೋ’ ಎನ್ನುವುದು ಗಾನವಿ ಮಾತು.

ಇದನ್ನೂ ಓದಿ:ವಿಂಡೀಸ್ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದ ವಾಷಿಂಗ್ಟನ್: ಬದಲಿಯಾಗಿ ಕುಲದೀಪ್ ಆಯ್ಕೆ

ಅಂದಹಾಗೆ, ಇದೇ ಫೆ. 18ಕ್ಕೆ ಗಾನವಿ ಅಭಿನಯದ “ಭಾವಚಿತ್ರ’ ಸಿನಿಮಾ ತೆರೆಗೆ ಬರುತ್ತಿದೆ. ಇತ್ತೀಚೆಗಷ್ಟೇ “ಭಾವಚಿತ್ರ’ ಸಿನಿಮಾದ ಬಗ್ಗೆ ಮಾತನಾಡಲು ಚಿತ್ರತಂಡದ ಜೊತೆ ಮಾಧ್ಯಮಗಳ ಮುಂದೆ ಬಂದಿದ್ದ ಗಾನವಿ ಈ ವಿಷಯ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next