Advertisement

ಪಿಒಪಿ ಗಣೇಶ ಮೂರ್ತಿ ಸಂಪೂರ್ಣ ನಿಷೇಧ: ಕಾಸೆ 

04:06 PM Sep 08, 2018 | Team Udayavani |

ಜಮಖಂಡಿ: ಪಿಒಪಿ ಗಣಪತಿ ಮೂರ್ತಿಗಳ ಮಾರಾಟವನ್ನು ಜಿಲ್ಲಾಡಳಿತ ಕಡ್ಡಾಯವಾಗಿ ನಿಷೇಧಿಸಿದ್ದು, ವ್ಯಾಪಾರಸ್ಥರು ಪ್ರಸಕ್ತ ವರ್ಷ ಮಣ್ಣಿನ ಗಣಪತಿ ಮಾರಾಟ ಮಾಡಿ, ಪರಿಸರ ಮಾಲಿನ್ಯ ಕಡಿಮೆ ಮಾಡಬೇಕು ಎಂದು ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ಹೇಳಿದರು.

Advertisement

ಸ್ಥಳೀಯ ನಗರಸಭೆ ಕಾರ್ಯಾಲಯದ ಸಭಾಭವನದಲ್ಲಿ ನಡೆದ ಜಮಖಂಡಿ ಗಣಪತಿ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಕಡ್ಡಾಯವಾಗಿ ಪಿಒಪಿಯಿಂದ ನಿರ್ಮಿತ ಗಣಪತಿಯನ್ನು ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಿದ್ದು, ಕಾನೂನು ಉಲ್ಲಂಘಿಸಿ ನಗರದಲ್ಲಿ ಯಾರಾದರೂ ಪಿಒಪಿ ಗಣಪತಿ ಮಾರಾಟ ಮಾಡಿದ್ದಲ್ಲಿ, ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಿ, ಜೈಲು ಶಿಕ್ಷೆಗೆ ಶಿಫಾರಸ್ಸು ಮಾಡಲಾಗುವುದು ಎಂದರು.

ಗಣಪತಿ ವ್ಯಾಪಾರಸ್ಥರಾದ ಉದಯ ಕುಲಕರ್ಣಿ, ಬಸವರಾಜ ಕುಂಬಾರ, ಶಿವಮೂರ್ತಿ ಸುತಾರ, ಶಿವಾಜಿ ಜಾಧವ, ಸಚಿನ ಅಸುಗಡೆ, ಸುರೇಶ ಸೋನಾವಣೆ, ಲಕ್ಷ್ಮೀಕಾಂತ ಸೋನಿ, ಸುನೀಲ ಕೋಲ್ಲಾಪುರ, ಶಶಿಕಾಂತ ಸೋನಾವಣೆ, ಸಚಿನ್‌ ಆಲಬಾಳ, ಸಚೀನ ಚೋಪಡೆ ಸಹಿತ ಹಲವರು ಇದ್ದರು.

ಭಕ್ತರಿಗೆ ಗಣಪತಿ ಬೇಕು
ನಗರದ ಮನೆ-ಮನೆಯಲ್ಲಿ ಪ್ರತಿಷ್ಠಾಪನೆಗೆ ಅಂದಾಜು 8 ಸಾವಿರ ಗಣೇಶ ವಿಗ್ರಹಗಳು ಅವಶ್ಯಕತೆಯಿದೆ. ಪಿಒಪಿ ಗಣೇಶ ವಿಗ್ರಹ ನಿಷೇಧಗೊಳಿಸಿರುವ ಜಿಲ್ಲಾಡಳಿತ, ಭಕ್ತರ ಭಕ್ತಿಯ ಮನಸ್ಸಿಗೆ ಘಾಸಿ ಮಾಡಿದೆ. ಪರಿಸರ ಮಾಲಿನ್ಯ ನೆಪದಲ್ಲಿ ಪರಂಪರೆಯ ಪೂಜೆ, ಪುರಸ್ಕಾರಗಳಿಗೆ ಕಂಟಕ ಬಂದಿದೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಗೊಂಡು ಅವಶ್ಯಕತೆಯಿರುವ ಜೇಡಿಮಣ್ಣು ಪೂರೈಸುವ ಮೂಲಕ ಪಿಒಪಿ ಗಣೇಶ ವಿಗ್ರಹಗಳನ್ನು ನಿಷೇಧಿಸಲಿ. ಒಟ್ಟಿನಲ್ಲಿ ಭಕ್ತರ ಪೂಜೆಗೆ ಗಣಪತಿ ವಿಗ್ರಹ ಬೇಕೆಬೇಕು.
ಭಕ್ತರು, ವ್ಯಾಪಾರಸ್ಥರು, ಜಮಖಂಡಿ

Advertisement

Udayavani is now on Telegram. Click here to join our channel and stay updated with the latest news.

Next