Advertisement
ಇಂತಹ ಅಪರೂಪದ ದೇವಾಲಯಕ್ಕೆ ಸಾಕ್ಷಿಯಾಗಿರುವುದು ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಡಾ| ಕೆ.ಎಸ್.ಶರ್ಮಾ ಅವರ ವಿಶ್ವಶ್ರಮ ಚೇತನ ಆವರಣ. ಕಾರ್ಮಿಕ ಹೋರಾಟದ ನೆಲದಲ್ಲಿ ಗಣಪ ನೆಲೆಸಿದ್ದರೂ ಇಡೀ ದೇವಾಲಯವು ಬೇಂದ್ರೆಯವರು ಗಣಪನನ್ನು ಕಂಡ ಸಾಹಿತ್ಯವನ್ನು ತೆರೆದಿಡುತ್ತದೆ. ಎಲ್ಲಿಯೂ ಕಾಣ ಸಿಗದ ಬಲು ಅಪರೂಪದ ಛಾಯಾಚಿತ್ರಗಳು ಇಲ್ಲಿವೆ. ಉತ್ಸಾಹದ ಚಿಲುಮೆಯನ್ನುಕ್ಕಿಸುವ, ಸಮಾಜದ ಅಂಕು ಡೊಂಕುಗಳನ್ನು ಅಣುಕಿಸುವ, ಅನ್ನ, ಕಾರ್ಮಿಕ, ಪ್ರೀತಿ-ಪ್ರೇಮ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲಂತಹ ಕವನಗಳನ್ನು ರಚಿಸಿದ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಸಾಹಿತ್ಯವನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸ ಈ ಆವರಣದಲ್ಲಿ ನಡೆಯುತ್ತಿದ್ದು, ಇದರೊಂದಿಗೆ ಇದೀಗ ಬೇಂದ್ರೆಯವರು ಕಂಡ ಬೆನಕನು ಕೂಡ ಇಲ್ಲಿ ನೆಲೆಸಿದ್ದಾನೆ.
Related Articles
Advertisement
ಬೇಂದ್ರೆಯಿದ್ದರೆ ಮಾತ್ರ ಬೆನಕ: ಎರಡು ದಶಕದ ಹಿಂದೆ ಕಾರ್ಮಿಕರ ಹೋರಾಟದಲ್ಲಿದ್ದ ಮುಖಂಡನೊಬ್ಬ ತಮ್ಮೂರಿನ ದೇವಸ್ಥಾನಕ್ಕಾಗಿ ಡಾ| ಕೆ.ಎಸ್.ಶರ್ಮಾ ಅವರ ಸಹೋದರಿ ಸುಲೋಚನಾ ಪೋತ್ನಿಸ್ ಅವರ ಬಳಿ ಒಂದು ಗಣೇಶ ಮೂರ್ತಿಗೆ ಬೇಡಿಕೆಯಿಟ್ಟಿದ್ದರು. ಅದರಂತೆ ಒಂದು ಮೂರ್ತಿ ಮಾಡಿಸಿ ಕೊಡಬೇಕು ಎನ್ನುವಾಗ ಮುಖಂಡ ಫೆಡರೇಶನ್ ವಿರೋಧಿ ಕಾರ್ಯ ಮಾಡಿದ್ದರಿಂದ ಮೂರ್ತಿ ನೀಡಲಿಲ್ಲ. ಹೀಗಾಗಿಯೇ ಈ ಗಣೇಶ ಆವರಣದಲ್ಲಿ ಉಳಿದು ಬಿಟ್ಟ. ಶರ್ಮಾ ಅವರ ಇಬ್ಬರು ಸಹೋದರಿಯರು ಹಾಗೂ ಸಮುದಾಯ ಈ ದೇವಾಲಯ ನಿರ್ಮಾಣಕ್ಕೆ ಒತ್ತಡ ಹೇರಿತು. ಬೇಂದ್ರೆ ಗುರುಗಳ ಸಾಹಿತ್ಯವೇ ಪಾರಮ್ಯವಾಗಿದ್ದರೆ ಮಾತ್ರ ಅವಕಾಶ ನೀಡುವ ಒಪ್ಪಂದ ಹಾಗೂ ಸ್ವಂತಿಕೆ ಬದಲು ಸಮಾಜದ ಸ್ವತ್ತಾಗಬೇಕೆನ್ನುವ ಉದ್ದೇಶ ದಿಂದ ದಾನಿಗಳ ನೆರವಿನಿಂದ ನಿರ್ಮಾಣಕ್ಕೆ ಒಪ್ಪಿದ ಪರಿಣಾಮ ವಿದ್ಯಾ ವಿನಾಯಕ ನೆಲೆ ನಿಂತಿದ್ದಾನೆ.
ಏಳು ಸ್ಮಾರಕಗಳ ತಾಣ: ಡಾ| ಕೆ.ಎಸ್.ಶರ್ಮಾ ಅವರು ಪ್ರತಿಯೊಂದು ಕೇಂದ್ರಗಳ ಮೂಲಕ ತಮ್ಮ ಗುರುಗಳ ಸಾಹಿತ್ಯವನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸದಲ್ಲಿ ತೊಡಗಿದ್ದಾರೆ. ಬೇಂದ್ರ ಕಂಡ ಬೆನಕನ ದೇವಾಲದ ಜತೆಗೆ ಬೇಂದ್ರೆ ಪ್ರತಿಮೆ, ಬೇಂದ್ರೆ ಸಂಶೋಧನಾ ಕೇಂದ್ರ, ಬೇಂದ್ರೆ ಸಂಗೀತ ಅಕಾಡೆಮಿ, ಔದುಂಬರದತ್ತ ಚೈತನ್ಯ, ಬೇಂದ್ರೆ ಭೂ ವನ, ರಸಋಷಿ ಅಂಬಿಕಾತನಯದತ್ತ ಮಹಾಕಾವ್ಯ ಕಲಾದರ್ಶನ ಕೇಂದ್ರಗಳಿವೆ. ಇವುಗಳ ಮೂಲಕ ಬೇಂದ್ರೆ ಅವರ ಸಾಹಿತ್ಯ ದರ್ಶನದ ಕಾರ್ಯ ಎಗ್ಗಿಲ್ಲದೆ ಸಾಗುತ್ತಿದೆ.
ವರಕವಿ ದ.ರಾ.ಬೇಂದ್ರೆಯವರ ವಂಶ ಪರಂಪರಾಗತವಾಗಿ ಗಣೇಶನ ಉಪಾಸನೆಯಲ್ಲಿರುವ ಇತಿಹಾಸವಿದೆ. ಹೀಗಾಗಿಯೇ ಅವರು ಬೆನಕನ ಮೇಲೆ ಅತ್ಯದ್ಭುತ ಕವನಗಳನ್ನು ರಚಿಸಿದ್ದಾರೆ. ಈ ದೇವಾಲಯದ ಮೂಲಕ ಬೇಂದ್ರೆಯವರ ಬೆನಕ ಜನರಿಗೆ ತಲುಪಬೇಕು ಎಂಬುದು ನನ್ನ ಉದ್ದೇಶ. ಆಸ್ತಿಕರಿಗೆ ದೇವಾಲಯ ಜತೆಗೆ ಸಾಹಿತ್ಯಾಸಕ್ತರಿಗೂ ಇದು ಬೇಂದ್ರೆ ಸಾಹಿತ್ಯ ಮಂದಿರ. ಇದೊಂದು ವಿಶೇಷ ಹಾಗೂ ವಿನೂತನ ಪ್ರಯತ್ನವಾಗಿದೆ. –ಡಾ|ಕೆ.ಎಸ್.ಶರ್ಮಾ, ಹಿರಿಯ ಕಾರ್ಮಿಕ ಹೋರಾಟಗಾರರು.
ಈ ದೇವಾಲಯ ನಿರ್ಮಾಣಕ್ಕೆ ಸಹೋದರ ಶರ್ಮಾ ಅವರೊಂದಿಗೆ ಗುದ್ದಾಡಿದ್ದು ಅಷ್ಟಿಷ್ಟಲ್ಲ. ಅವರು ಹಾಕಿದ ಕರಾರಿನಂತೆ ನಿರ್ಮಿಸಲಾಗಿದೆ. ಅವರು ಸೂಚಿಸಿದ ಹೆಸರನ್ನೇ ಇಡಲಾಗಿದೆ. ಸಂಪೂರ್ಣ ದಾನಿಗಳ ನೆರವಿನಿಂದ ನಿರ್ಮಿಸಲಾಗಿದೆ. ಇಷ್ಟಾರ್ಥಗಳನ್ನು ಪಡೆದವರೇ ದೇವರಿಗೆ ಬೇಕಾದ ಸಾಮಾಗ್ರಿಗಳನ್ನು ದೇಣಿಗೆ ಕೊಡುತ್ತಿದ್ದಾರೆ. ದೇವಾಲಯದಿಂದ ದೊರೆಯುವ ಎಲ್ಲಾ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಲಾಗುತ್ತದೆ. –ಸುಮಿತ್ರಾ ಪೋತ್ನಿಸ್, ಡಾ| ಕೆ.ಎಸ್.ಶರ್ಮಾ ಸಹೋದರಿ
–ಹೇಮರಡ್ಡಿ ಸೈದಾಪುರ