Advertisement

ಗ್ರಾಹಕರ ಅಭಿರುಚಿಗೆ ತಕ್ಕಂತೆ ಗಣಪತಿ ಸಿದ್ಧ

01:21 PM Aug 31, 2019 | Suhan S |

ಕುದೂರು: ಗಣೇಶನ ಹಬ್ಬ ಹತ್ತಿರವಾಗುತ್ತಿದ್ದಂತೆ ಗಣೇಶನ ಮೂರ್ತಿಗಳನ್ನು ವಿವಿಧ ರೂಪಗಳಲ್ಲಿ ನೋಡಲು ಗ್ರಾಹಕರು ಬಯಸುತ್ತಾರೆ. ಅದೇ ರೀತಿ ಕಲಾವಿದರು ಕೂಡ ಗ್ರಾಹಕರ ಆಕರ್ಷಣೆಗೆ ವಿವಿಧ ರೀತಿಯ ಗಣೇಶ ಮೂರ್ತಿಗಳು ಸಿದ್ಧವಾಗಿವೆ.

Advertisement

ಸೋಲೂರು ಹೋಬಳಿಯ ಬಾಣವಾಡಿ ಗ್ರಾಮದಲ್ಲಿ ಬಸವರಾಜು ಕುಟುಂಬದವರು ಸುಮಾರು 35 ವರ್ಷಗಳಿಂದ ಪರಿಸರ ಗಣೇಶ ಮೂರ್ತಿಗಳನ್ನು ಮಾಡುವುದರಲ್ಲಿ ಎತ್ತಿದಕೈ. ಬಸವರಾಜು ಅವರ ಪುತ್ರ ಪ್ರಭುದೇವ್‌ ಅವರು ವಿವಿಧ ರೀತಿಯ ಗಣೇಶನ ಮೂರ್ತಿಗಳನ್ನು ಮಾಡುವುದರಲ್ಲಿ ನಿಸ್ಸಿಮರಾಗಿದ್ದಾರೆ. ಹಲವು ವರ್ಷಗಳಿಂದಲೂ ಬಸವರಾಜು ಕುಟುಂಬದವರು ಮಾಡುವ ಗಣೇಶ ಮೂರ್ತಿಗಳನ್ನು ಖರೀದಿಸಲು ಬೆಂಗಳೂರು, ತುಮಕೂರು, ಮೈಸೂರು, ಗೌರಿಬಿದನೂರು, ಹಾಸನ, ಚಿತ್ರದುರ್ಗ, ತಮಿಳುನಾಡಿನಿಂದ ಗ್ರಾಹಕರು ಆಗಮಿಸಿ ಕೊಂಡುಕೊಂಡು ಹೋಗುತ್ತಾರೆ.

ಪರಿಸರ ಸ್ನೇಹಿ ಗಣೇಶ: ಬಸವರಾಜು ಕುಟುಂಬದವರು ಜೇಡಿಮಣ್ಣಿನಿಂದಲೇ ಗಣೇಶನ ಮೂರ್ತಿಗಳನ್ನು ಮಾಡುವುದನ್ನು ಕರಗತ ಮಾಡಿಕೊಂಡು ಬಂದಿದ್ದಾರೆ. ಯಾವುದೇ ರಾಸಾಯನಿಕ ಬಣ್ಣವನ್ನು ಬಳಸದೇ ಪರಿಸರಕ್ಕೆ ಹಾನಿಯಾಗುವ ವಾಟರ್‌ ಪೇಂಟ್ಬಳಿದು ಗಣೇಶನ ವಿಗ್ರಹಕ್ಕೆ ಅಂದ ಹೆಚ್ಚಿಸುತ್ತಾರೆ. ಬೇರೆ ಕಡೆಯಿಂದ ಲೋಡ್‌ ಗಟ್ಟಲೆ ಜೋಡಿ ಮಣ್ಣನ್ನು ತಂದು ಸಂಪ್ರದಾಯಕವಾಗಿ ಪೂಜೆ ಸಲ್ಲಿಸಿ ಪ್ರಾರಂಭಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಇಟ್ಟಿಗೆ ಕಾರ್ಖಾನೆಯ ಮಾಲೀಕರು ಕೆರೆಯಿಂದ ಮಣ್ಣನ್ನು ಎತ್ತುತ್ತಿರುವುದರಿಂದ ಜೇಡಿ ಮಣ್ಣು ಇಲ್ಲದೇ ಕುಣಿಗಲ್ ಕಡೆಯಿಂದ ತಂದು ನಂತರ ಅದೇ ದಿನದಂದು ವಿಘ್ನ ವಿನಾಯಕನ ಸಣ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುತ್ತಾರೆ.

ವಿಭಿನ್ನವಾದ ಗಣಪ ತಯಾರಿ: ಪಂಚಮುಖೀ ಗಣೇಶ, ದರ್ಬಾರ್‌ ಗಣೇಶ, ಹಂಸ, ಬಸವಣ್ಣ, ಕೃಷ್ಣವತಾರ, ಲಕ್ಷ್ಮೀನರಸಿಂಹ ಗಣೇಶ, ಗರುಡ ವಾಹನ ಗಣಪ, ವೆಂಕಟೇಶ್ವರ ಗಣಪ, ಕುದರೆ ಮೇಲೆ ಕುಳಿತ ಗಣಪ, ಆಂಜನೇಯ ಗಣಪ, ನವಿಲ ಮೇಲೆ ಕುಳಿತ ಗಣಪ, ನಾಗರ ಹೆಡೆ ಗಣಪ ಹೀಗೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ರೀತಿಯ ಗಣಪತಿ ಮೂರ್ತಿಗಳನ್ನು ಬಸವರಾಜು ಮತ್ತು ಪ್ರಭುದೇವ್‌ ಅವರು ತಯಾರಿಸಿದ್ದಾರೆ.

Advertisement

ಸುಮಾರು ನೂರು ರೂ. ನಿಂದ 50 ಸಾವಿರ ರೂ. ಬೆಲೆ ಬಾಳುವ ಗಣಪನನ್ನು ತಯಾರಿಸುತ್ತಾರೆ. ಮೂರ್ತಿ ತಯಾರಿಕೆಗೆ ಬಸವರಾಜು ಅವರಿಗೆ ಕುಟುಂಬದ ಸದಸ್ಯರು ಕೈ ಜೋಡಿಸುತ್ತಾರೆ. ಅದರಿಂದ ಹೆಚ್ಚು ಗಣಪನ ಮೂರ್ತಿಗಳನ್ನು ಮಾಡಲು ಸಾಧ್ಯವಾಗುತ್ತದೆ. ಅರ್ಧ ಅಡಿ, ಒಂದು ಅಡಿ, ಒಂದೂವರೆ ಅಡಿ, ಎರಡು ಅಡಿ ಗಣಪನ ಮೂರ್ತಿಯನ್ನು ಅಚ್ಚುಗಳ ಮೂಲಕವೇ ತಯಾರಿಸುತ್ತಾರೆ. ಎತ್ತರದ ಗಣೇಶನ ಮೂರ್ತಿಗಳನ್ನು ಕೈಯಿಂದ ಮಾಡುವಲ್ಲಿ ಬಸವರಾಜು ನಿಸ್ಸಿಮರಾಗಿದ್ದಾರೆ.

 

● ಕೆ.ಎಸ್‌.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next