ಸ್ಟೇಟ್‌ಬ್ಯಾಂಕ್ ಕ್ರೀಡಾಕೂಟಗಳು ಸಂಘಟನೆಗೆ ಪೂರಕವಾಗಿದೆ. ದೈಹಿಕ ಕ್ಷಮತೆ, ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿ ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.
ನೆಹರೂ ಮೈದಾನದಲ್ಲಿ ಶನಿವಾರ ಆರಂಭಗೊಂಡ ಮರಾಠಾಸ್ ಪ್ರೀಮಿಯರ್ ಲೀಗ್ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಮರಾಠ ಸಮುದಾಯದ ಕೇವಲ 6 ಮಂದಿ ಯುವಕರು ಒಗ್ಗೂಡಿ ಆಯೋಜಿಸಿರುವ ಈ ಕ್ರೀಡಾಕೂಟ ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಕಡಿಮೆಯಾಗದಂತೆ ವ್ಯವಸ್ಥಾಬದ್ಧವಾಗಿದೆ. ಇಂತಹ ಕ್ರೀಡಾ ಕೂಟದಲ್ಲಿ ಯುವಕರು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.
ಶಾಸಕ ಜೆ.ಆರ್. ಲೋಬೋ, ಸಿಂಡಿಕೇಟ್ ಮಾಜಿ ಸದಸ್ಯ ಶ್ರೀಕರ ಪ್ರಭು, ರಾಯ್ ಕನ್‌ಸ್ಟ್ರಕ್ಷನ್‌ನ ರಾಯ್ ಕ್ಯಾಸ್ಟಲಿನೋ, ಮಾಜಿ ಮೇಯರ್ ಮಹಾಬಲ ಮಾರ್ಲ, ಬಿಜೆಪಿ ಮುಖಂಡ ರವೀಂದ್ರ ಶೆಟ್ಟಿ ಉಳಿದೊಟ್ಟು, ಆರ್ಯ ಯಾನೆ ಮರಾಠ ಸಮಾಜ ಸಂಘದ ಅಧ್ಯಕ್ಷ ದೇವೊಜಿರಾವ್ ಯಾದವ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ದಿನಕರ್ ಶೆಟ್ಟಿ, ಸಂಘಟಕರಾದ ಸಚಿನ್ ಮೊರಾಯ್, ಪ್ರದೀಪ್‌ಚಂದ್ರ ಜಾದವ್, ಧರ್ಮರಾಜ್ ಜಾಧವ್, ದೀಪಕ್ ಚಂದ್ರಮನ್, ರಾಜ್ ಕುಮಾರ್ ಲಾಡ್, ಯತೀಶ್ ವಿ. ರಾವ್ ಲಾಡ್ ಉಪಸ್ಥಿತರಿದ್ದರು.
6 ತಂಡಗಳು ಭಾಗಿ
ಲೀಗ್ ಪಂದ್ಯಾಟದಲ್ಲಿ ಛತ್ರಪತಿ ವಾರಿಯರ್, ಗ್ರೇಟ್ ಮರಾಠಾಸ್, ಮರಾಠ ಜಾಧವಾಸ್, ಕೆಕೆಎಂಪಿ, ಆರ್ಯನ್ ರೈಸಿಂಗ್ ಸ್ಟಾರ್, ಕಾಸರಗೋಡು ಮರಾಠ ಟೈಗರ್ ತಂಡಗಳು ಭಾಗವಹಿಸಿದ್ದವು. ರವಿವಾರ ಸಂಜೆ ಅಂತಿಮ ಪಂದ್ಯಾಟ ನಡೆಯಲಿದೆ. ಬಳಿಕ ಸಮಾರೋಪ ಸಮಾರಂಭ ಜರಗಲಿದೆ.