Advertisement

ಹದ್ದಿಗೆ ಆಟ, ವಿಜ್ಞಾನಿಗಳಿಗೆ ಸಂಕಟ

10:04 AM Oct 28, 2019 | sudhir |

ನೊವೊಸಿಬಿಸ್ಕ್(ರಷ್ಯಾ): ಜಿಪಿಎಸ್‌ ಮೂಲಕ ವಲಸೆ ಹದ್ದುಗಳನ್ನು ಟ್ರ್ಯಾಕ್‌ ಮಾಡುತ್ತಿದ್ದ ರಷ್ಯಾದ ವಿಜ್ಞಾನಿಗಳು ಈಗ ದಿವಾಳಿಯಂಚಿಗೆ ತಲುಪಿದ್ದಾರೆ. ಹದ್ದುಗಳಿಗೂ ದಿವಾಳಿಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ?
ಖಂಡಿತಾ ಸಂಬಂಧ ಇದೆ. ಟ್ರ್ಯಾಕಿಂಗ್‌ಗೆ ಒಳಗಾಗುತ್ತಿದ್ದ ಹದ್ದುವೊಂದು ನೇರವಾಗಿ ರಷ್ಯಾದಿಂದ ಇರಾನ್‌ಗೆ ಹಾರಿದ್ದೇ ಈ ಎಲ್ಲ ಸಂಕ ಷ್ಟಕ್ಕೂ ಕಾರಣ. ವಿಜ್ಞಾನಿಗಳು ಸುಮಾರು 13 ಹದ್ದುಗಳನ್ನು ಟ್ರ್ಯಾಕ್‌ ಮಾಡುತ್ತಿದ್ದರು. ಅವು ಗಳ ಚಲನವಲನಗಳು ಗೊತ್ತಾಗಲೆಂದು ಜಿಪಿಎಸ್‌ ಕೂಡ ಅಳವಡಿಸಿದ್ದರು.

Advertisement

ಹದ್ದುಗಳು ಎಲ್ಲಿಗೆ ಹೋದರೂ ಅಲ್ಲಿಂದ ವಿಜ್ಞಾನಿಗಳಿಗೆ ಸಂದೇಶ ಬರುತ್ತಿದ್ದವು. ಆದರೆ, ಮಿನ್‌ ಎಂಬ ಹೆಸರಿನ ಒಂದು ಹದ್ದು ಕಜಕಿಸ್ಥಾನದಿಂದ ಏಕಾಏಕಿ 48,000 ಕಿ.ಮೀ. ದೂರ ಹಾರುತ್ತಾ ಇರಾನ್‌ ತಲುಪಿದೆ. ಅದು ಕಜಕಿಸ್ಥಾನದಲ್ಲಿದ್ದಾಗ ಮೊಬೈಲ್‌ ನೆಟ್‌ವರ್ಕ್‌ ಸಿಗದ ಕಾರಣ, ಅಲ್ಲಿಂದ ಬರಬೇಕಿದ್ದ ಎಲ್ಲ ಸಂದೇಶಗಳೂ ರವಾನೆಯಾಗದೇ ಉಳಿದಿದ್ದವು. ಹದ್ದು ಇರಾನ್‌ ತಲುಪಿದೊಡನೆ ಒಮ್ಮೆಗೇ ಸಂದೇಶಗಳ ಮಹಾಪೂರವೇ ಹರಿದುಬಂದಿದೆ. ಇರಾನ್‌ನಲ್ಲಿ ಒಂದು ಎಸ್ಸೆಮ್ಮೆಸ್‌ಗೆ 54.28 ರೂ. ಶುಲ್ಕವಿದ್ದು, ಎಸ್‌ಎಂಎಸ್‌ ಪ್ರಸರಣದಾರರು ಡೇಟಾ ರೋಮಿಂಗ್‌ ಶುಲ್ಕವೆಂದು ವಿಜ್ಞಾನಿಗಳಿಗೆ ಭಾರೀ ಮೊತ್ತದ ಬಿಲ್‌ ಕಳುಹಿಸಿಕೊಟ್ಟಿದ್ದಾರೆ.

ಈ ಶುಲ್ಕ ನೋಡಿ ವಿಜ್ಞಾನಿಗಳು ಹೌಹಾರಿದ್ದಾರೆ. ಅವರು ಹದ್ದುಗಳ ಫೋನ್‌ ಬಜೆಟ್‌ಗೆಂದು ಮೀಸಲಿಟ್ಟ ಒಟ್ಟು ಮೊತ್ತವನ್ನೂ ಈ ಶುಲ್ಕ ಮೀರಿಹೋಗಿದೆ. ಕೊನೆಗೆ ಸಾಮಾಜಿಕ ಜಾಲತಾಣಗಳಲ್ಲಿ “ಟಾಪ್‌ ಅಪ್‌ ದಿ ಈಗಲ್ಸ್‌ ಮೊಬೈಲ್‌’ ಎಂಬ ಹೆಸರಲ್ಲಿ ಕ್ರೌಡ್‌ ಫ‌ಂಡಿಂಗ್‌ ಮಾಡಿ ಹಣ ಸಂಗ್ರಹ ಆರಂಭಿಸಿದ್ದಾರೆ. ಈ ವಿಚಾರ ತಿಳಿದ ರಷ್ಯಾದ ಮೊಬೈಲ್‌ ಆಪರೇಟರ್‌ ಮೆಗಾಫೋನ್‌ ಈಗ ವಿಜ್ಞಾನಿಗಳಿಗೆ ವಿನಾಯ್ತಿ ನೀಡಲು ಮುಂದೆ ಬಂದಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next