Advertisement

ಧನಂಜಯ ದಾಳಿಗೆ ಸಡ್ಡು ಹೊಡೆದ ಟೇಲರ್‌

11:50 PM Aug 14, 2019 | Team Udayavani |

ಗಾಲೆ: ಶ್ರೀಲಂಕಾ- ನ್ಯೂಜಿಲ್ಯಾಂಡ್‌ ನಡುವಿನ ಗಾಲೆ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಲೆಗ್‌ಸ್ಪಿನ್ನರ್‌ ಅಖೀಲ ಧನಂಜಯ ಮತ್ತು ಅನುಭವಿ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ ಅಮೋಘ ಪ್ರದರ್ಶನ ನೀಡಿದ್ದಾರೆ. ಮಳೆಯಿಂದಾಗಿ 68 ಓವರ್‌ಗಳಿಗೆ ದಿನದಾಟ ಕೊನೆ ಗೊಂಡಾಗ ನ್ಯೂಜಿಲ್ಯಾಂಡ್‌ 5 ವಿಕೆಟ್‌ ಉರುಳಿಸಿಕೊಂಡು 203 ರನ್‌ ಮಾಡಿತ್ತು.

Advertisement

ಪ್ರವಾಸಿಗರ ಐದೂ ವಿಕೆಟ್‌ಗಳನ್ನು ಅಖೀಲ ಧನಂಜಯ 57 ರನ್‌ ವೆಚ್ಚದಲ್ಲಿ ಉರುಳಿಸಿದರು. ಕೇವಲ 6ನೇ ಟೆಸ್ಟ್‌ ಆಡುತ್ತಿರುವ ಅವರು ಇನ್ನಿಂಗ್ಸ್‌ ಒಂದರಲ್ಲಿ 4ನೇ ಸಲ 5 ಪ್ಲಸ್‌ ವಿಕೆಟ್‌ ಕಿತ್ತ ಸಾಧನೆಗೈದರು. ಇವರ ದಾಳಿಗೆ ತಡೆಯೊಡ್ಡಿ ನಿಂತದ್ದು ರಾಸ್‌ ಟೇಲರ್‌ ಹೆಗ್ಗಳಿಕೆ. ಟೇಲರ್‌ 86 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ (131 ಎಸೆತ, 6 ಬೌಂಡರಿ).

ಕಿವೀಸ್‌ ಆರಂಭ ಉತ್ತಮವಾಗಿತ್ತು. ಜೀತ್‌ ರಾವಲ್‌ (33)-ಟಾಮ್‌ ಲ್ಯಾಥಂ (30) 26.3 ಓವರ್‌ ನಿಭಾ ಯಿಸಿ ಮೊದಲ ವಿಕೆಟಿಗೆ 64 ರನ್‌ ಒಟ್ಟುಗೂಡಿಸಿದರು. ಆದರೆ ನಾಯಕ ಕೇನ್‌ ವಿಲಿಯಮ್ಸನ್‌ ಖಾತೆ ತೆರೆಯದೆ ವಾಪಸಾದರು. ಹೀಗಾಗಿ 7 ರನ್‌ ಅಂತರದಲ್ಲಿ ನ್ಯೂಜಿಲ್ಯಾಂಡಿನ 3 ವಿಕೆಟ್‌ ಉರುಳಿತು.

4ನೇ ವಿಕೆಟಿಗೆ ಜತೆಗೂಡಿದ ರಾಸ್‌ ಟೇಲರ್‌ ಮತ್ತು ಹೆನ್ರಿ ನಿಕೋಲ್ಸ್‌ (42) 28 ಓವರ್‌ ನಿಭಾಯಿಸಿ ಭರ್ತಿ 100 ರನ್‌ ಪೇರಿಸುವುದರೊಂದಿಗೆ ಕಿವೀಸ್‌ ಭಾರೀ ಕುಸಿತದಿಂದ ಪಾರಾಯಿತು. ಬಳಿಕ ನಿಕೋಲ್ಸ್‌ ಮತ್ತು ಕೀಪರ್‌ ವಾಟಿÉಂಗ್‌ (1) ವಿಕೆಟ್‌ಗಳನ್ನು 8 ರನ್‌ ಅಂತರದಲ್ಲಿ ಕಿತ್ತ ಧನಂಜಯ ಮತ್ತೆ ಪ್ರವಾಸಿಗರಿಗೆ ಕಂಟಕವಾಗಿ ಕಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next