Advertisement

Galle Test Match: ಶ್ರೀಲಂಕಾ ಸರದಿಯಲ್ಲಿ ಮತ್ತಿಬ್ಬರ ಶತಕ

11:19 PM Apr 17, 2023 | Team Udayavani |

ಗಾಲೆ: ಶ್ರೀಲಂಕಾ ಸರದಿಯಲ್ಲಿ ಮತ್ತಬ್ಬರ ಶತಕ ದಾಖಲಾಗಿದೆ. ಐರ್ಲೆಂಡ್‌ ಎದುರಿನ ಟೆಸ್ಟ್‌ ಪಂದ್ಯದ ದ್ವಿತೀಯ ದಿನದಾಟದಲ್ಲಿ ದಿನೇಶ್‌ ಚಂಡಿಮಾಲ್‌ ಮತ್ತು ಸದೀರ ಸಮರವಿಕ್ರಮ ಸೆಂಚುರಿ ಬಾರಿಸಿದ್ದಾರೆ. ಒಟ್ಟು ನಾಲ್ವರ ಶತಕ ಸಾಹಸದಿಂದ ಲಂಕಾ 6 ವಿಕೆಟಿಗೆ 591 ರನ್‌ ಪೇರಿಸಿ ಡಿಕ್ಲೇರ್‌ ಮಾಡಿದೆ.

Advertisement

ಜವಾಬಿತ್ತ ಐರ್ಲೆಂಡ್‌ ಬ್ಯಾಟಿಂಗ್‌ನಲ್ಲೂ ವಿಫ‌ಲವಾಗಿದ್ದು, 117 ರನ್‌ ಗಳಿಸುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡಿದೆ. ದೊಡ್ಡ ಸೋಲಿಗೆ ತುತ್ತಾಗುವುದು ಖಾತ್ರಿಯಾಗಿದೆ.

ದಿನೇಶ್‌ ಚಂಡಿಮಾಲ್‌ 102 ರನ್‌ (155 ಎಸೆತ, 12 ಬೌಂಡರಿ), ಸಮರವಿಕ್ರಮ 104 ರನ್‌ (114 ಎಸೆತ, 14 ಬೌಂಡರಿ) ಹೊಡೆದರು. ಇಬ್ಬರದೂ ಅಜೇಯ ಇನ್ನಿಂಗ್ಸ್‌ ಆಗಿತ್ತು. ಮುರಿಯದ 7ನೇ ವಿಕೆಟಿಗೆ ಇವರಿಂದ 183 ರನ್‌ ಒಟ್ಟುಗೂಡಿತು. ಐರ್ಲೆಂಡ್‌ ಪತನದಲ್ಲಿ ಎಡಗೈ ಸ್ಪಿನ್ನರ್‌ ಪ್ರಭಾತ್‌ ಜಯಸೂರ್ಯ ಪಾತ್ರ ನಿರ್ಣಾಯಕವಾಗಿತ್ತು. ಅವರು 42 ರನ್‌ ನೀಡಿ 5 ವಿಕೆಟ್‌ ಉಡಾಯಿಸಿದರು.

ಟೆಸ್ಟ್‌ ಪಂದ್ಯದ ಮೊದಲ ದಿನ ನಾಯಕ ದಿಮುತ್‌ ಕರುಣಾರತ್ನೆ (179) ಮತ್ತು ಕುಸಲ್‌ ಮೆಂಡಿಸ್‌ (140) ಸೆಂಚುರಿ ಬಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next