Advertisement

ಗಾಲೆ ಟೆಸ್ಟ್‌: ಆಸ್ಟ್ರೇಲಿಯದ ಮೊದಲ ಇನ್ನಿಂಗ್ಸ್‌ ಮೊತ್ತಕ್ಕೆ ಲಂಕಾ ದಿಟ್ಟ ಉತ್ತರ

11:01 PM Jul 09, 2022 | Team Udayavani |

ಗಾಲೆ: ಗಾಲೆ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯದ 364 ರನ್ನುಗಳ ಮೊದಲ ಇನ್ನಿಂಗ್ಸ್‌ ಮೊತ್ತಕ್ಕೆ ಆತಿಥೇಯ ಶ್ರೀಲಂಕಾ ದಿಟ್ಟ ಉತ್ತರ ನೀಡಿದೆ.

Advertisement

2 ವಿಕೆಟ್‌ ನಷ್ಟಕ್ಕೆ 184 ರನ್‌ ಮಾಡಿ ದ್ವಿತೀಯ ದಿನದಾಟ ಮುಗಿಸಿದೆ. ಮೊದಲ ಟೆಸ್ಟ್‌ ಆಡುತ್ತಿರುವ ಎಡಗೈ ಸ್ಪಿನ್ನರ್‌ ಪ್ರಭಾತ್‌ ಜಯಸೂರ್ಯ 118 ರನ್‌ ವೆಚ್ಚದಲ್ಲಿ 6 ವಿಕೆಟ್‌ ಉರುಳಿಸಿ ಕಾಂಗರೂ ಪಡೆಯನ್ನು ಕಾಡಿದರು. 109 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದು ಕೊಂಡಿದ್ದ ಸ್ಟೀವನ್‌ ಸ್ಮಿತ್‌ 145ರ ತನಕ ಸಾಗಿ ಅಜೇಯರಾಗಿ ಉಳಿದರು (272 ಎಸೆತ, 16 ಬೌಂಡರಿ).

ಶ್ರೀಲಂಕಾ ಪರ ದಿಮುತ್‌ ಕರುಣಾರತ್ನೆ 86 ರನ್‌ ಹೊಡೆದರು (165 ಎಸೆತ, 10 ಬೌಂಡರಿ). ಕುಸಲ್‌ ಮೆಂಡಿಸ್‌ 84 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next