Advertisement
ಅಲ್ಲೇ ಪಕ್ಕದಲ್ಲಿದ್ದ ಪೀಸಾ ದೇವಾಲಯದಲ್ಲಿ ದೇವತೆಯ ಮೂರ್ತಿಯ ಎದುರು ಒಂದು ಕಂಚಿನ ದೀಪವನ್ನು ಉದ್ದನೆ ಸರಪಳಿಗೆ ನೇತಾಡಿಸಿದ್ದರು. ದೀಪದ ಸರಪಳಿಯನ್ನು ಒಂದು ಬದಿಗೆ ಎಳೆದು ದೀಪ ಹೊತ್ತಿಸಿ ಬಿಡುವುದು ವಾಡಿಕೆಯಾಗಿತ್ತು. ಆಗ ಆ ಸರಪಳಿ ಸುಮಾರು ಹೊತ್ತು ಅತ್ತಿತ್ತ ಆಂದೋಲಿಸುತ್ತ ಕೊನೆಗೆ ನಡುಬಿಂದುವಿಗೆ ಬಂದು ತಟಸ್ಥವಾಗುತ್ತಿತ್ತು. ದಿನವೂ ಈ ಆಟ ನೋಡಲು ನಿಲ್ಲುತ್ತಿದ್ದ ಗೆಲಿಲಿಯೋ ಅತ್ತ ತುದಿಯಿಂದ ಇತ್ತ ತುದಿವರೆಗೆ ಓಲಾಡಲು ದೀಪ ತೆಗೆದುಕೊಳ್ಳುವ ಸಮಯವೆಷ್ಟು ಎನ್ನುವುದನ್ನು ನಾಡಿ ಹಿಡಿದು ಲೆಕ್ಕ ಹಾಕುತ್ತಿದ್ದ. ಪ್ರತಿ ಓಲಾಟವೂ ಹಿಂದಿನ ಓಲಾಟದಿಂದ ಎಷ್ಟು ಕಡಿಮೆಯಾಗುತ್ತಿದೆ, ಯಾವ ದರದಲ್ಲಿ ಅದರ ಆಂದೋಲನ ತಗ್ಗುತ್ತಿದೆ ಎನ್ನುವುದನ್ನು ಕೆಲವೇ ದಿನಗಳಲ್ಲಿ ಕರಾರುವಾಕ್ಕಾಗಿ ಲೆಕ್ಕ ಹಾಕಲು ಅವನಿಗೆ ಸಾಧ್ಯವಾಯಿತು. ಇದರಿಂದ ಗಣಿತದಲ್ಲಿ ಆಸಕ್ತಿ ಹುಟ್ಟಿತು. ಗಣಿತವನ್ನು ಕಲಿತರೆ ಈ ಜಗತ್ತಿನ ಎಲ್ಲ ರಹಸ್ಯಗಳನ್ನೂ ಅರಿಯಬಹುದು ಎನ್ನಿಸಿತು. ಅಪ್ಪನನ್ನು ಒಪ್ಪಿಸಿ, ವೈದ್ಯಶಾಸ್ತ್ರಕ್ಕೆ ಶರಣು ಹೊಡೆದು ಗಣಿತದ ತರಗತಿಗಳಿಗೆ ಸೇರಿಕೊಂಡ.
Advertisement
ಅರಿವಿನ ದೀಪ
09:53 AM Feb 05, 2020 | mahesh |
Advertisement
Udayavani is now on Telegram. Click here to join our channel and stay updated with the latest news.