ಕೊಲಂಬೋ : ಆತಿಥೇಯ ಶ್ರೀಲಂಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂದು ಗುರುವಾರದ ಎರಡನೇ ದಿನದಾಟದಲ್ಲಿ ಪ್ರವಾಸಿ ಭಾರತ ತಂಡ 600 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿದೆ.
ಇದಕ್ಕೆ ಉತ್ತರವಾಗಿ ತನ್ನ ಪ್ರಥಮ ಇನ್ನಿಂಗ್ಸ್ ಆಟ ಆರಂಭಿಸಿದ ಲಂಕಾ ತಂಡ ದಿನದಾದ ಅಂತ್ಯಕ್ಕೆ ಐದು ವಿಕೆಟ್ ಕಳೆದುಕೊಂಡು 154 ರನ್ ಗಳಿಸಿ ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ. ಈಗಿನ್ನು ಅದು ಭಾರತಕ್ಕಿಂತ 446 ರನ್ ಹಿಂದಿದೆ.
ಅತ್ಯಮೂಲ್ಯ 64 ರನ್‌ಗಳಿಸಿ ಲಂಕೆಗೆ ಆಪತ್ ಬಾಂಧವನಾಗಿದ್ದ ಉಪುಲ್ ತರಂಗ ರನ್ ಔಟ್ ಆಗಿ ನಿರಾಶೆ ಉಂಟುಮಾಡಿದರು.
ಭಾರತದ ಮೊದಲ ಇನ್ನಿಂಗ್ಸ್ 600 ರನ್‌ಗಳ ಬೃಹತ್ ಮೊತ್ತಕ್ಕೆ ಕಾರಣರಾದವರೆಂದರೆ ಶಿಖರ್ ಧವನ್ 190, ಚೇತೇಶ್ವರ ಪೂಜಾರ 153, ಅಜಿಂಕ್ಯ ರಹಾಣೆ 57, ರವಿಚಂದ್ರನ್ ಅಶ್ವಿನ್ 47, ಹಾರ್ದಿಕ್ ಪಾಂಡ್ಯ 50, ರವೀಂದ್ರ ಜಡೇಜ 15, ರವಿಚಂದ್ರನ್ ಅಶ್ವಿನ್ 47, ಮೊಹಮ್ಮದ್ ಶಮೀ 30, ಉಮೇಶ್ ಯಾದವ 11.
ಲಂಕೆಯ ಮೊದಲ ಇನ್ನಿಂಗ್ಸ್ ಆಟದಲ್ಲಿ ಆಘಾತ ನೀಡಿದ ಭಾರತೀಯ ಬೌಲರ್‌ಗಳಲ್ಲಿ ಶಮೀ 30 ರನ್‌ಗೆ 2 ವಿಕೆಟ್, ಉಮೇಶ್ ಯಾದವ್ 50 ರನ್‌ಗೆ 1 ಮತ್ತು ರವಿಚಂದ್ರನ್ ಅಶ್ವಿನ್ 49 ರನ್‌ಗೆ 1 ವಿಕೆಟ್ ಕಿತ್ತರು.