Advertisement

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಸ್ಯಾಮ್ ಸಂಗ್ ಗ್ಯಾಲಕ್ಸಿ S10 Lite: ಕೈಗೆಟುಕವ ಬೆಲೆ !

10:02 AM Jan 13, 2020 | Mithun PG |

ನವದೆಹಲಿ: ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಲೈಟ್ ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದು ಫೆಬ್ರವರಿ ಮೊದಲ ವಾರದಲ್ಲಿ ಗ್ರಾಹಕರ ಕೈಸೇರಲಿದೆ. ಫ್ಲಿಫ್ ಕಾರ್ಟ್ ನಲ್ಲಿ ಜನವರಿ 23 ರಿಂದ ಆರ್ಡರ್ ಮಾಡಬಹುದಾಗಿದೆ. ಇದರ ಆರಂಭಿಕ ಬೆಲೆ 39,999 ರೂ ಗಳು.

Advertisement

ಈ ಬೆಲೆಗೆ ಚೈನಾ ಕಂಪೆನಿ ಒನ್ ಪ್ಲಸ್ ಕೂಡ ಲಭ್ಯವಿರಲಿದ್ದು ಮಾರುಕಟ್ಟೆ ಸಮರ ಆರಂಭವಾಗಿಲಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಗ್ಯಾಲಕ್ಸಿ S10 ಲೈಟ್ 48 ಎಂಪಿ ಪ್ರಮುಖ ಕ್ಯಾಮಾರವನ್ನು ಒಳಗೊಂಡಿದ್ದು,  12 ಎಂಪಿ ಅಲ್ಟ್ರಾ ವೈಡ್ ಮತ್ತು 5 ಎಂಪಿ ಮ್ಯಾಕ್ರೋ ಸೆನ್ಸಾರ್ ಅನ್ನು ಓಐಎಸ್ (ಆಪ್ಟಿಕಲ್ ಇಮೇಜ್ ಸ್ಟೆಬಲೈಶೇಷನ್)   ನೊಂದಿಗೆ ಒಳಗೊಂಡಿದೆ. 32 ಎಂಪಿ ಸೆಲ್ಫಿ ಕ್ಯಾಮಾರವನ್ನು ಹೊಂದಿದೆ.

ಈ ಡಿವೈಸ್ 6.7 ಇಂಜಿನ್ ಡಿಸ್ ಪ್ಲೇ ಹೊಂದಿದ್ದು , ಫುಲ್ ಹೆಚ್ ಡಿ ಪ್ಲಸ್ ರೆಸಲ್ಯೂಸನ್, 4,500mAh ಬ್ಯಾಟರಿ ಸಾಮಾರ್ಥ್ಯ ಹೊಂದಿದೆ. ಇದರಲ್ಲಿ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯಿದ್ದು , ಸ್ಯಾಮ್ ಸಂಗ್ Pay  ಇನ್ ಬಿಲ್ಟ್ ಸೌಲಭ್ಯವಿದೆ.

ಗ್ಯಾಲಕ್ಸಿ ಎಸ್ 10 ಲೈಟ್ ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್ ಹೊಂದಿದ್ದು , 8GB+128GB RAM ಮತ್ತು ಸ್ಟೋರೇಜ್ ಕಾನ್ಫಿಗರೇಷನ್ ಹೊಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next