Advertisement

ಗಜೇಂದ್ರಗಡ: ವೀರಾಪುರದಲ್ಲಿ ಅಭಿವೃದ್ಧಿ ಮರೀಚಿಕೆ

06:01 PM Oct 28, 2024 | Team Udayavani |

ಉದಯವಾಣಿ ಸಮಾಚಾರ
ಗಜೇಂದ್ರಗಡ: ಮರೀಚಿಕೆಯಾದ ಸ್ವಚ್ಛತೆ, ಎಲ್ಲೆಂದರಲ್ಲಿ ಚರಂಡಿ ನೀರಿನದ್ದೇ ಕಾರುಬಾರು. ಸಾಂಕ್ರಾಮಿಕ ರೋಗ ಭೀತಿಯಲ್ಲಿ ಅವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿರುವ ಗ್ರಾಮಸ್ಥರು. ಇದು ಗಜೇಂದ್ರಗಡ ತಾಲೂಕಿನ ರಾಮಾಪುರ ಗ್ರಾಪಂ ವ್ಯಾಪ್ತಿಯ ವೀರಾಪುರ ಗ್ರಾಮದ ಅವಸ್ಥೆ. ಗ್ರಾಮದ ಬಹುತೇಕ ವಾರ್ಡ್‌ಗಳಲ್ಲಿ ಮೂಲ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ಗ್ರಾಮ ಪ್ರವೇಶಿ ಸುವ ಮುಖ್ಯ ರಸ್ತೆಯೇ ಚರಂಡಿ ನೀರಿನಿಂದ ಆವೃತ ವಾಗಿ ರೋಗ-ರುಜಿನುಗಳ ತಾಣವಾಗಿದೆ. ಗ್ರಾಮದ ನಿವಾಸಿಗಳು ಇದೇ ರಸ್ತೆಯಲ್ಲಿ ನಿತ್ಯ ಮೂಗು ಮುಚ್ಚಿಕೊಂಡೇ ಸಂಚರಿಸುವ ದುಸ್ಥಿತಿ ಬಂದಿದ್ದರೂ ಸಂಬಂಧ ಪಟ್ಟ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ
ಇದಕ್ಕೂ ನಮಗೂ ಏನೂ ಸಂಬಂಧವಿಲ್ಲ ಎಂಬಂತೆ ಇದ್ದಾರೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸ್ವಚ್ಛ ಭಾರತದ ಕನಸು ನುಚ್ಚು ನೂರು: ಮಹಾತ್ಮ ಗಾಂಧೀಜಿಯವರ ಸುಂದರ ಮತ್ತು ಸ್ವತ್ಛ ಭಾರತದ ಕನಸು ಸಾಕಾರಗೊಳಿಸಿ ಆ ಮೂಲಕ ನಾಗರಿಕರಿಗೆ ನೆಮ್ಮದಿಯಿಂದ ಬದುಕು ಸಾಗಿಸಬೇಕೆಂದು ಸರ್ಕಾರ ಪ್ರತಿ ವರ್ಷ ಸ್ವಚ್ಛ ಭಾರತ ಅಭಿಯಾನದಡಿ ಲಕ್ಷಾಂತರ ಅನುದಾನ ಬಿಡುಗಡೆಗೊಳಿಸುತ್ತದೆ. ಆದರೆ ವ್ಯವಸ್ಥೆಯ ಲೋಪದಿಂದ ಸರ್ಕಾರದ ಕನಸು ನುಚ್ಚು ನೂರಾಗುತ್ತಿದೆ ಎನ್ನುವುದಕ್ಕೆ ವೀರಾಪುರ ಗ್ರಾಮ ನಿದರ್ಶನವಾಗಿದೆ.

1500ಕ್ಕೂ ಹೆಚ್ಚು ಜನಸಂಖ್ಯೆವುಳ್ಳ ವೀರಾಪುರ ಗ್ರಾಮದಲ್ಲಿ ಇಬ್ಬರು ಜನಪ್ರತಿನಿಧಿಗಳಿದ್ದಾರೆ. ಅದರಲ್ಲಿ ಒಬ್ಬರು ಗ್ರಾಪಂ ಉಪಾಧ್ಯಕ್ಷರಾಗಿದ್ದರೂ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಈ ಕುರಿತು ಹಲವಾರು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸುತ್ತಾರೆ ಗ್ರಾಮಸ್ಥರು. ಇನ್ನಾದರೂ ಅಧಿಕಾರಿಗಳು ಇತ್ತ ಗಮನ ಹರಿಸಿ ಗ್ರಾಮದಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಮುಕ್ತಿ ನೀಡುವಲ್ಲಿ ಮುಂದಾಗುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಸೇರಿ ಹಲವಾರು ಸಮಸ್ಯೆಗೆ ಕೂಡಲೇ ಸ್ಪಂದಿಸಿ ಎಂದು ಗ್ರಾಪಂ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ. ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ಅಧಿಕಾರಿಗಳು ನೀಡಿದ್ದಾರೆ.
ಮುತ್ತವ್ವ ಗುಡದೂರ,
ಗ್ರಾಪಂ ಉಪಾಧ್ಯಕ್ಷೆ, ರಾಮಾಪುರ

ವೀರಾಪುರದಲ್ಲಿ ನಿರ್ಮಿಸಿರುವ ಚರಂಡಿಗಳು ಅವೈಜ್ಞಾನಿಕವಾಗಿವೆ. ಹೀಗಾಗಿ ಚರಂಡಿ ನೀರು ರಸ್ತೆ ಮೇಲೆ ಹರಿದು ರೋಗ-ರುಜಿನುಗಳು ಉತ್ಪತ್ತಿಯಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಭೀತಿ ಇದೆ. ಕ್ರಮಕ್ಕೆ ಮುಂದಾಗುವಂತೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ರವಿ ಮಾದರ, ವೀರಾಪುರ ಗ್ರಾಮಸ್ಥ

Advertisement

■ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next