Advertisement
ಇದು ಭಾರತ, ನೇಪಾಲ ಹಾಗೂ ಪಾಕಿಸ್ಥಾನ ಮೂಲದ ರಣಹದ್ದಾಗಿದ್ದು, “ಜಿಪ್ಸ್ ಇಂಡಿಕಸ್’ ಇದರ ವೈಜ್ಞಾನಿಕ ಹೆಸರು. 6.5ರಿಂದ 7.8 ಅಡಿ ಗಾತ್ರದ್ದಾಗಿದ್ದು, ರೆಕ್ಕೆ ಬಡಿಯದೇ ಆಕಾಶದಲ್ಲಿ ತಾಸು ಗಟ್ಟಲೆ ಹಾರಾಡಬಲ್ಲದು. ಇದರ ದೃಷ್ಟಿ ಮಾನವನಿಗಿಂದ 8 ಪಟ್ಟು ಸೂಕ್ಷ್ಮ.
ಇವು 12 ಕಿ.ಮೀ.ಗಿಂತಲೂ ಎತ್ತರಕ್ಕೆ ಹಾರುತ್ತವೆ. ತಾಸಿಗೆ 80 ಕಿ.ಮೀ. ವೇಗದಲ್ಲಿ ಸಾವಿರಾರು ಕಿ.ಮೀ. ಸುತ್ತಳತೆಯಲ್ಲಿ ಗಸ್ತು ಗಂಟೆಗೆ 120 ಕಿ.ಮೀ. ವೇಗದಲ್ಲಿ ನೆಲಕ್ಕಿಳಿಯುತ್ತವೆ. ಇವು ಬೆಟ್ಟಗುಡ್ಡಗಳ ಎತ್ತರದ ಸುರಕ್ಷಿತ ಬಂಡೆಗಳ ಮೇಲೆ ಹಾಗೂ ಮರದಲ್ಲಿ ಗೂಡು ನಿರ್ಮಿಸುತ್ತವೆ.
Related Articles
Advertisement
ಗಜೇಂದ್ರಗಡ ಸೇರಿ ಸುತ್ತಲಿನ ಬೆಟ್ಟಗಳಲ್ಲಿ ಬಹು ವರ್ಷಗಳ ಬಳಿಕ ರಣಹದ್ದು ಕಂಡು ಬಂದಿರುವುದು ಸಂತಸ ತಂದಿದೆ. ಅಳಿವಿನ ಅಂಚಿನಲ್ಲಿರುವ ಭಾರತೀಯ ಮೂಲದ ರಣಹದ್ದು ಸಂತತಿ ಉಳಿವಿಗೆ ನಮ್ಮೆಲ್ಲರ ಸಹಕಾರ ಮುಖ್ಯವಾಗಿದೆ.-ಮಂಜುನಾಥ ಎಸ್. ನಾಯಕ್,
ಜೀವ ವೈವಿಧ್ಯ ಸಂಶೋಧಕರು.