Advertisement

ಜನವರಿ 9ರಂದು ಕೇಂದ್ರ ಸಚಿವ ಗಡ್ಕರಿ ಮಂಗಳೂರಿಗೆ

02:33 AM Dec 06, 2021 | Team Udayavani |

ಮಂಗಳೂರು: ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಅವರು ಜ. 9ರಂದು ಮಂಗಳೂರಿಗೆ ಆಗಮಿಸಲಿದ್ದು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

Advertisement

ರಾ.ಹೆ. 169ರಲ್ಲಿ ಬಹುನಿರೀಕ್ಷಿತ ಬಿಕರ್ನಕಟ್ಟೆ – ಸಾಣೂರು (ಕಾರ್ಕಳ) ಚತುಷ್ಪಥ ಯೋಜನೆ, ರಾ.ಹೆ. 75ರಲ್ಲಿ ಕಲ್ಲಡ್ಕ ಚತುಷ್ಪಥ ಫ್ಲೈ ಓವರ್‌ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ಇದೇ ಸಂದರ್ಭದಲ್ಲಿ ಅಡ್ಡಹೊಳೆ-ಪೆರಿಯಶಾಂತಿ ಹಾಗೂ ಪೆರಿಯಶಾಂತಿ-ಬಂಟ್ವಾಳ ಕ್ರಾಸ್‌ ನಡುವಣ ಎರಡು ಪ್ಯಾಕೇಜ್‌ನ ಕಾಮಗಾರಿಗೆ ಸಚಿವರು ಮರುಚಾಲನೆ ನೀಡುವರು ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ತಿಳಿಸಿದ್ದಾರೆ.

ನ. 16ರಂದು ನಿಗದಿಯಾಗಿದ್ದ ಈ ಕಾರ್ಯಕ್ರಮವನ್ನು ವಿಧಾನ ಪರಿಷತ್‌ ಚುನಾವಣೆ ಘೋಷಣೆಯಾದ ಕಾರಣದಿಂದ ಮುಂದೂಡಲಾಗಿತ್ತು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next