Advertisement
ಅಪಾಯಕಾರಿ ಕಂಬಿ ಪ್ರಾಣಕ್ಕೆ ಸಂಚಕಾರರಸ್ತೆ ಕಿರಿದಾಗಿದ್ದ ಸಂದರ್ಭದಲ್ಲಿ ಹಾಕಲಾಗಿದ್ದ ಕಂಬಿಗಳನ್ನು ತೆರವುಗೊಳಿಸದೆ ಹಾಗೆಯೇ ಬಿಡಲಾಗಿದ್ದು, ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ. ಈ ಕಂಬಿಗಳಿಗೆ ಹಲವು ಬಾರಿ ದ್ವಿಚಕ್ರ ವಾಹನಗಳು ಡಿಕ್ಕಿಯಾಗಿ ವಾಹನ ಸವಾರರು ಗಾಯಗೊಂಡ ನಿದರ್ಶನಗಳಿವೆ. ಈ ಅಪಾಯಕಾರಿ ರೈಲ್ವೇ ಕಂಬಿಗೆ ಕೆಲ ದಿನಗಳ ಹಿಂದೆ ಪುತ್ತೂರು ಅಂಚೆ ಇಲಾಖೆಯ ನೌಕರ ಕಾಣಿಯೂರಿನ ಚನಿಯ ಯಾನೆ ಸತೀಶ್ ಎಂಬವರ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಪ್ರಾಣ ಕಳೆದುಕೊಂಡಿದ್ದರು. ಕೆಲ ವರ್ಷಗಳ ಹಿಂದೆ ನವವಿವಾಹಿತರೊಬ್ಬರು ಇದೇ ಅಪಾಯಕಾರಿ ಕಂಬಿಗೆ ದ್ವಿಚಕ್ರ ವಾಹನ ಢಿಕ್ಕಿ ಹೊಡೆದು ಪ್ರಾಣ ಕಳೆದುಕೊಂಡಿದ್ದರು. ಹಲವು ವಾಹನ ಸವಾರರು ಇದೇ ಸ್ತಳದಲ್ಲಿ ಅಪಘಾತಕ್ಕೀಡಾಗಿದ್ದಾರೆ.
ರಸ್ತೆ ವಿಸ್ತರಣೆಯಾಗಿದ್ದರೂ ಈ ಹಿಂದೆ ಅಳವಡಿಸಲಾಗಿದ್ದ ಕಂಬಿಯನ್ನು ತೆರವುಗೊಳಿಸದ ಕಾರಣ ಅಪಘಾತಗಳಾಗಿ, ಅಮಾಯಕರ ಜೀವಗಳು ಬಲಿಯಾಗುತ್ತಿವೆ. ರಸ್ತೆ ಅಂಚಿನಲ್ಲೇ ಇರುವ ಈ ಕಂಬಿಗಳನ್ನು ಕೂಡಲೇ ತೆರವುಗೊಳಿಸುವ ಕೆಲಸ ಮಾಡಬೇಕು ಎಂದು ಸವಣೂರು ಗ್ರಾಮ ಪಂಚಾಯತ್‌ನ ಸದಸ್ಯ ಸತೀಶ್ ಗೌಡ ಅಂಗಡಿಮೂಲೆ ಆಗ್ರಹಿಸಿದ್ದಾರೆ. ಇಲಾಖೆ ಗಮನ ಹರಿಸಲಿ
ಇದೇ ರೀತಿ ಬೆದ್ರಾಳ ಎಂಬಲ್ಲಿಯೂ ರಸ್ತೆಯ ಮೇಲ್ಭಾಗದಲ್ಲಿ ರೈಲ್ವೆ ಹಳಿಯಿದೆ. ಅಲ್ಲಿ ರಸ್ತೆ ಅಭಿವೃದ್ಧಿ ಸಂದರ್ಭದಲ್ಲಿ ಹಳೆಯ ಕಂಬಿಗಳನ್ನು ತೆರವುಗೊಳಿಸಿ ನೂತನ ರಸ್ತೆಗೆ ಅನುಗುಣವಾಗಿ ಹೊಸ ಕಂಬಿ ಅಳವಡಿಸಲಾಗಿದೆ. ಆದರೆ ಗಡಿಪಿಲದಲ್ಲಿ ಹಳೆಯ ಕಂಬಿಗಳನ್ನು ತೆರವುಗೊಳಿಸಿಲ್ಲ. ಈ ಕುರಿತು ರೈಲ್ವೇ ಇಲಾಖೆಯವರು ಗಮನ ಹರಿಸಬೇಕು ಎಂದು ಪುತ್ತೂರಿನ ಕ್ಯಾಂಪ್ಕೋ ಉದ್ಯೋಗಿ ವೀರಮಂಗಲದ ರವೀಂದ್ರ ಕೈಲಾಜೆ ಒತ್ತಾಯಿಸಿದ್ದಾರೆ.