Advertisement
ಕೈಕುಂಜೆಯಲ್ಲಿರುವ ತಾಲೂಕು ಸಾಹಿತ್ಯ ಪರಿಷತ್‌ನ 8 ಸೆಂಟ್ಸ್ ಜಾಗದಲ್ಲಿ ಜಿ ಪ್ಲಸ್ ವನ್ ಮಾದರಿಯ ಕಟ್ಟಡ ನಿರ್ಮಾಣವಾಗುತ್ತಿದ್ದು, ತಲಾ 2 ಸಾವಿರ ಚದರ ಅಡಿ ವಿಸ್ತೀರ್ಣದಂತೆ ಒಟ್ಟು 4 ಸಾವಿರ ಚ.ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಾಣವಾಗಿ ಶೇ. 90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಕಟ್ಟಡಕ್ಕೆ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದಿಂದ 10 ಲಕ್ಷ ರೂ. ಮಂಜೂರಾಗಿದ್ದು, ಒಂದು ವೇಳೆ ಕಟ್ಟಡ ಪೂರ್ಣಗೊಂಡರೆ ಪ್ರಾಧಿಕಾರದ ಅನುದಾನ ಸಿಗದು ಎಂದು ಪ್ರಾಧಿಕಾರದ ಅಧಿಕಾರಿಗಳು ಹೇಳುತ್ತಿದ್ದಾರೆ.
Related Articles
Advertisement
ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಪದಾಧಿಕಾರಿಗಳ ಅಧಿಕಾರಾವಧಿಯು ಮಾ. 2ಕ್ಕೆ ಮುಕ್ತಾಯಗೊಳ್ಳುತ್ತಿದ್ದು, ಹೀಗಾಗಿ ಅದಕ್ಕಿಂತ ಮೊದಲು ತಮ್ಮ ಅವಧಿಯಲ್ಲೇ ಕಟ್ಟಡವನ್ನು ಉದ್ಘಾಟನೆಗೊಳಿಸಬೇಕು ಎಂದು ಹಾಲಿ ಪದಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಕೊರೊನಾ ಸಂಕಷ್ಟದ ಸ್ಥಿತಿಯಿಂದ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವುದಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ನಡುವೆ ಪ್ರಾಧಿಕಾರದಿಂದ ಮಂಜೂರಾಗಿರುವ 10 ಲಕ್ಷ ರೂ. ಅನುದಾನ ಬಾರದೇ ಇದ್ದು, ಮತ್ತೂಂದೆಡೆ ಕಾಮಗಾರಿ ಪೂರ್ಣ ಗೊಳಿಸಿದರೆ ಅನುದಾನ ಸಿಗದು ಎಂದು ಹೇಳುತ್ತಿರುವುದು ಪರಿಷತ್ತಿನ ಹಾಲಿ ಆಡಳಿತ ಮಂಡಳಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಾಮಗಾರಿ ಪೂರ್ಣಗೊಳ್ಳುವ ಮುನ್ನ ಅನುದಾನ ತಮ್ಮ ಕೈ ಸೇರಬಹುದು ಎಂದು ಈಗಾಗಲೇ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗಿದೆ.
ಕಟ್ಟಡದ ಉದ್ಘಾಟನೆ ಫೆ. 20ಕ್ಕೆ ದಿನಾಂಕ ನಿಗದಿಯಾಗಿದ್ದು, 21ಕ್ಕೆ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ಆದರೆ ಕಟ್ಟಡಕ್ಕೆ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾಗಿರುವ 10 ಲಕ್ಷ ರೂ. ಅನುದಾನ ಇನ್ನೂ ಬಂದಿಲ್ಲ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರು ಅದರ ಹಿಂದೆ ಓಡಾಟ ನಡೆಸುತ್ತಿದ್ದಾರೆ. ಶೀಘ್ರ ಅನುದಾನ ಬರುವ ನಿರೀಕ್ಷೆ ಇದೆ. -ಕೆ. ಮೋಹನ್ ರಾವ್, ಅಧ್ಯಕ್ಷರು, ಕಸಾಪ, ಬಂಟ್ವಾಳ ತಾಲೂಕು.
ವಿಶೇಷ ವರದಿ