ಬದಿಯಡ್ಕ: ಕೊಲ್ಲಂಗಾನದ ಅನಂತಶ್ರೀಯ 2ನೇ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ, ಗಡಿನಾಡ ಸಾಹಿತ್ಯ ಸಾಮಸ್ಕೃತಿಕ ಅಕಾಡೆಮಿ ಕಾಸರಗೋಡು, ಅನಂತಶ್ರೀ ಟ್ರಸ್ಟ್ ಕೊಲ್ಲಂಗಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಬುದ್ದ ಪೂರ್ಣಿಮೆಯಂದು ಗಡಿನಾಡ ಬೆಳದಿಂಗಳ ಬೆಳಕು ವಿಶೇಷ ಸಾಹಿತ್ಯ ಕಾರ್ಯಕ್ರಮ ಚಂದ್ರೊದಯದಿಂದ ಮರುದಿನ ಬೆಳಿಗ್ಗೆ ಸೂರ್ಯೋದಯದ ವರೆಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಸಂಜೆ 5.30 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸರಕಾರದ ಕರ್ನಾಟಕ ಅರೆಭಾಷೆ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ ಗೌಡ ಉದ್ಘಾಟಿಸುವರು. ಶಾರದಾ ಅನಂತಪದ್ಮನಾಭ ಉಪಾಧ್ಯಾಯ ಅವರು ದೀಪ ಬೆಳಗಿಸುವರು.
ದಕ್ಷಿಣ ಕನ್ನಡ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಮಧುರೈ ಕಾಮರಾಜ ವಿವಿಯ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ, ಸಂಶೋಧಕ ಡಾ.ಹರಿಕೃಷ್ಣ ಭರಣ್ಯ, ಹಿರಿಯ ಸಾಹಿತಿ, ಕಲಾವಿದ ಡಾ.ರಮಾನಂದ ಬನಾರಿ, ಪಾಡಿ ಅರಮನೆಯ ಜಯಸಿಂಹ ವರ್ಮರಾಜ, ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ, ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ, ಖ್ಯಾತ ಚಿತ್ರ ಕಲಾವಿದ ಪಿ.ಎಸ್.ಪುಣಿಚಿತ್ತಾಯ, ಶ್ಯಾಮ್ ಪ್ರಸಾದ್ ಮಾನ್ಯ, ಎಸ್.ಜಗನ್ನಾಥ ಶೆಟ್ಟಿ ಕುಂಬಳೆ, ಅನಂತ ಗಣಪತಿ ಎಸ್, ಜಯದೇವ ಖಂಡಿಗೆ, ಕೃಷ್ಣಮೂರ್ತಿ ಪುದುಕೋಳಿ, ಶಾಂತಾರವಿ ಕುಂಟಿನಿ, ನ್ಯಾಯವಾದಿ ಮುರಳೀಧರ ಬಳ್ಳುಕ್ಕುರಾಯ, ಸುಕುಮಾರ ಆಲಂಪಾಡಿ, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೊಡಿ, ಝಡ್ ಎ.ಕಯ್ಯಾರ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಪ್ರೊ.ಎ.ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತನಾಡುವರು.
ಬಳಿಕ ರಾತ್ರಿ 7.30 ರಿಂದ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಂದ ದಾಸ ಸಂಕೀರ್ತನೆ ನಡೆಯಲಿದೆ. 8 ರಿಂದ ಜೇಜಕುಮಾರಿ ಮತ್ತು ಬಳಗ ಕಾಸರಗೋಡು ಅವರಿಂದ ಯೋಗ ಪ್ರದರ್ಶನ, 9.30 ರಿಂದ ಬಹುಭಾಷಾ ಕವಿಗೋಷ್ಠಿ ಪತ್ರಕರ್ತ, ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಾಳೆ ಮುಂಜಾನೆಯವರೆಗೆ (ಭಾನುವಾರ) ನಡೆಯಲಿದೆ. ಸಾಹಿತಿ ವಸಂತಕುಮಾರ್ ಪೆರ್ಲ ಆಶಯ ಭಾಷಣ ಮಾಡುವರು. ಕನ್ನಡ, ತುಳು, ಹವ್ಯಕ, ಮಲೆಯಾಳ, ಕೊಂಕಣಿ, ಹಿಂದಿ, ಸಂಸ್ಕೃತ, ಉರ್ದು, ರ‍್ಹಾಡ ಮೊದಲಾದ ಭಾಷೆಗಳಲ್ಲಿ ನೂರಾರು ಕವಿಗಳು ಸ್ವರಚಿತ ಕವನಗಳನ್ನು ವಾಚಿಸುವರು. ಈ ಸಂದರ್ಭ ವಿಶೇಷ ಆಹ್ವಾನಿತ ಗಣ್ಯರು ಭಾಗವಹಿಸುವರು.