Advertisement

ಗಾದೆ ಪುರಾಣ

06:51 PM Sep 11, 2019 | mahesh |

ಕೊಡಲಿ ಪೆಟ್ಟಿಗೆ ಮೊದಲು ಬಲಿಯಾಗುವುದು ಗಟ್ಟಿಮರವೇ

Advertisement

ಬಳ್ಳಿಯಂಥ ದುರ್ಬಲ ಕಾಂಡದ ಸಸ್ಯಗಳು ಗಾಳಿಮಳೆಗಳಿಗೆ ಬಾಗುತ್ತವೆ. ಅಂದರೆ, ಬಾಹ್ಯ ಪರಿಸ್ಥಿತಿಗೆ ಹೊಂದಿಕೊಳ್ಳುತ್ತವೆ. ಇದಕ್ಕೆ ವಿರುದ್ದವಾಗಿ ಗಟ್ಟಿ ಮರಗಳು ಗಾಳಿಮಳೆಗೆ ಹೆದರುವುದಿಲ್ಲ, ಬಾಗುವುದಿಲ್ಲ.ಇಂತಹ ಮರಗಳು ಮಾನವರಿಗೆ ಹೆಚ್ಚು ಉಪಯುಕ್ತವಾದ್ದರಿಂದ ಅವು ಕೊಡಲಿ ಪೆಟ್ಟಿಗೆ ಮೊದಲು ಜೀವ ಕಳೆದುಕೊಳ್ಳುತ್ತವೆ.

ಮಚ್ಚು ಹಿಡಿದವನ ಮುಂದೆ ಸೂಜಿ ಹಿಡಿದು ನಿಂತಂತೆ

ಮನುಷ್ಯರಲ್ಲಿ ಬಡವರು, ಶ್ರೀಮಂತರು ಇರುವ ಹಾಗೆಯೇ, ಜಗತ್ತಿನ ದೇಶಗಳಲ್ಲಿ ಕೆಲವು ದೊಡ್ಡದು ಮತ್ತೆ ಕೆಲವು ಚಿಕ್ಕವು ಇರುತ್ತವೆ. ದೊಡ್ಡ, ಬಲಿಷ್ಠ ದೇಶಗಳು ಮಚ್ಚು ಹಿಡಿಯುವವರಂತೆ. ಆರ್ಥಿಕವಾಗಿ ಹಿಂದುಳಿದ ಸಣ್ಣ ಪುಟ್ಟ ದೇಶಗಳು ಸೂಜಿ ಹಿಡಿಯುವರಂತೆ ಕಾಣುತ್ತವೆ. ಅಂದರೆ, ಅಸಮರ ನಡುವೆ ಹೋರಾಟ ಸರಿಯಲ್ಲ ಎಂದು ಸೂಚಿಸುತ್ತದೆ ಈ ಗಾದೆ.

ಕೆಸರಮೇಲೆ ಕಲ್ಲು ಹಾಕಿ
ಸ್ನೇಹ,ಸ್ಪರ್ಧೆ, ಹೋರಾಟದಂತಹ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬರುವುದಕ್ಕೆ ಮೊದಲು ಸ್ವಲ್ಪ ಯೋಚಿಸಬೇಕು. ತನ್ನಲ್ಲಿರುವ ವಿಶ್ವಾಸವನ್ನು ಉತ್ಪ್ರೇಕ್ಷೆ ಮಾಡಿಕೊಂಡು ಹುಚ್ಚು ಸಾಹಸಕ್ಕೆ ಕೈ ಹಾಕುವುದು ತನ್ನ ಕಾಲ ಮೇಲೆ ತಾನೇ ಕಲ್ಲುಹಾಕಿಕೊಂಡ ಹಾಗೆ ಎನ್ನುತ್ತದೆ ಈ ಗಾದೆ.

Advertisement

ಮಾತು ಮನೆ ಕೆಡಿಸಿತು ತೂತು ಒಲೆ ಕಡಿಸಿತು
ಹರಿತವಾದ ಚಾಕುವಿನಿಂದಾದ ಗಾಯ ಮಾಯುತ್ತದೆ. ಆದರೆ, ಮಾತಿನಿಂದಾದ ಗಾಯ ಸುಲಭವಾಗಿ ಮಾಯುವುದಿಲ್ಲ ಎನ್ನುವುದು ಅನುಭವೋಕ್ತಿ.ಅಧಿಕಾರ ಮದದಿಂದ ಹಣದ ಬಲದಿಂದ ನಾಲಿಗೆಯ ಮೇಲೆ ಹಿಡಿತ ಕಳೆದುಕೊಂಡು ದೌರ್ಜನ್ಯ ಮಾಡುವವರಿಗೆ ಈ ಗಾದೆ ಮಾತು ಅನ್ವಯವಾಗುತ್ತದೆ. ನಿಷ್ಠುರವಾಗಿ ಸತ್ಯವನ್ನು ನುಡಿಯುವವರ ನಾಲಿಗೆಯೂ ಹರಿತವೇ, ಆದರೆ ಅದು ಹಾನಿಮಾಡುವುದಿಲ್ಲ.

ಸಂಗ್ರಹ- ವಿವರಣೆ: ಸಂಪಟೂರು ವಿಶ್ವನಾಥ್‌

Advertisement

Udayavani is now on Telegram. Click here to join our channel and stay updated with the latest news.

Next