Advertisement

Gadaga: ವಿಶ್ವೇಶ್ವರಯ್ಯ ನಮಗೆಲ್ಲ ಆದರ್ಶಪ್ರಾಯರು: ಶ್ರೀ ಶಾಂತಲಿಂಗ ಸ್ವಾಮಿ

05:54 PM Sep 16, 2023 | Team Udayavani |

ನರಗುಂದ: ಕನ್ನಡ ಸಾಹಿತ್ಯ ಪರಿಷತ್‌ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಸರ್‌ ಎಂ.ವಿಶ್ವೇಶ್ವರಯ್ಯನವರು ಕನ್ನಡ
ನಾಡು-ನೆಲ-ಜಲದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ನೀರಾವರಿ ಕ್ರಾಂತಿಗೆ ಮುನ್ನುಡಿ ಬರೆದ ಅಣೆಕಟ್ಟುಗಳ ನಿರ್ಮಾತೃರು ಎಂದು ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮಿಗಳು ಹೇಳಿದರು.

Advertisement

ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು  ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚೆಂಬೆಳಕು ಚೆಲ್ಲಿದವರು ವಿಶೇಷ ಉಪನ್ಯಾಸ ಮಾಲಿಕೆ-30ರ ಸಮಾರಂಭದಲ್ಲಿ ಅಭಿಯಂತರರ ದಿನಾಚರಣೆ
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್‌ ಮೇಧಾವಿ, ಅಮರ ವಾಸ್ತು ಶಿಲ್ಪಿ ಸರ್‌
ಎಂ.ವಿಶ್ವೇಶ್ವರಯ್ಯನವರು ನಮಗೆಲ್ಲ ಆದರ್ಶಪ್ರಾಯರು. 102 ವರ್ಷಗಳ ಕಾಲ ಬದುಕಿದ ಅವರು ಕರ್ಮಯೋಗಿಯಂತೆ ಈ ನಾಡಿನ ನೆಲ-ಜಲದ ಸಂರಕ್ಷಣೆಗಾಗಿ ತಮ್ಮ ಜೀವನವನ್ನು ಸವೆಸಿದ್ದಾರೆ. ಆ  ಮೂಲಕ ವಿಶ್ವೇಶ್ವರಯ್ಯನವರು ಜಗತøಸಿದ್ಧ
ದಂತ ಕತೆಯಾದರು ಎಂದು ಹೇಳಿದರು.

ಶ್ರೀಮಠದಿಂದ ಸತ್ಕಾರ ಸ್ವೀಕರಿಸಿದ ಜಿಪಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎನ್‌.ವೈ.ಬೇವಿನಗಿಡದ ಅವರು ಮಾತನಾಡಿ, ಬರಡಾಗಿದ್ದ ನಾಡು ಸರ್‌ ಎಂ.ವಿಶ್ವೇಶ್ವರಯ್ಯನವರ ಶ್ರಮದ ಫಲವಾಗಿ ನಾಡು ಬಂಗಾರವಾಯಿತು. ಜಗತ್ತಿನ ಶ್ರೇಷ್ಠ ಅಭಿಯಂತರರಾಗಿದ್ದ ಅವರು ಪ್ರತಿ ನಿಮಿಷ ಮತ್ತು ವಸ್ತುವಿಗೂ ಅಪಾರ ಬೆಲೆ ನೀಡುತ್ತಿದ್ದರು. ಕರುನಾಡಿಗೆ ನೀಡಿದ ಕೊಡುಗೆ ಅಮೋಘವಾದುದು ಎಂದರು.

ಆಧುನಿಕ ಭಾರತ ನಿರ್ಮಾಪಕರಾದ ವಿಶ್ವೇಶ್ವರಯ್ಯನವರು ಅಣೆಕಟ್ಟು, ಉಕ್ಕಿನ ಕಾರ್ಖಾನೆ, ಬ್ಯಾಂಕ್‌ ಹಾಗೂ ಕಾಲೇಜು ಹೀಗೆ ಎಲ್ಲ ರಂಗದಲ್ಲೂ ಅತ್ಯುತ್ತಮ ಸೇವೆ ಸಲ್ಲಿಸಿ ಕರ್ನಾಟಕದ ಕೀರ್ತಿಯನ್ನು ಜಗತ್ತಿಗೆ ಸಾರಿದ ನವಭಾರತದ ಶ್ರೇಷ್ಠ ಅಭಿಯಂತರರು. ಅವರ ಅಗಾಧ ಪರಿಶ್ರಮ, ದೂರದೃಷ್ಟಿತ್ವ ಹಾಗೂ ಪ್ರಾಮಾಣಿಕ ನಿಸ್ವಾರ್ಥ ದುಡಿಮೆ ನಮಗೆ ದಾರಿದೀಪವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜಿಪಂ ಎಇಇ ಎನ್‌.ವೈ.ಬೇವಿನಗಿಡದ, ಅಭಿಂತರರರಾದ ಅನೀಲಕುಮಾರ, ಎಂ.ಡಿ.ಅಗಸಿಮನಿ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು. ವೇದಿಕೆಯಲ್ಲಿ ವಿ.ಕೆ.ಮಾಲಿಪಾಟೀಲ, ಪ್ರೊ. ಆರ್‌.ಬಿ.ಚಿ ನಿವಾಲರ ಉಪಸ್ಥಿತರಿದ್ದರು. ಮಹಾಂತೇಶ ಹಿರೇಮಠ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next