Advertisement

ಶರಣರ ಚಿಂತನೆಗಳೇ ಸಂವಿಧಾನ ಬೇರು

09:34 AM Jan 31, 2019 | |

ಗದಗ: 12ನೇ ಶತಮಾನದಲ್ಲಿ ಬಸವಾದಿ ಶರಣರು ಪ್ರತಿಪಾದಿಸಿದ ಅಂಶಗಳೇ ಭಾರತ ಸಂವಿಧಾನದ ತಾಯಿ ಬೇರುಗಳು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಂವಿಧಾನದ ಮೂಲ ಆಶಯವಾಗಿದೆ ಎಂದು ಭೈರನಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.

Advertisement

ಲಿಂಗಾಯತ ಪ್ರಗತಿಶೀಲ ಸಂಘದಿಂದ ನಗರದ ಎಡೆಯೂರು ಜ.ತೋಂಟದಾರ್ಯ ಮಠದಲ್ಲಿ ನಡೆದ 2417ನೇ ಶಿವಾನುಭವದಲ್ಲಿ ಅವರು ಮಾತನಾಡಿದರು. ಸಂವಿಧಾನ ಜಾರಿಗೆ ಬಂದು 70 ವರ್ಷಗಳಾದರೂ ದೇಶದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಅಸಮಾನತೆ, ತಾರತಮ್ಯಗಳು ನಿವಾರಣೆಯಾಗಿಲ್ಲ.

ಪ್ರಜಾಪ್ರಭುತ್ವ ಕಲ್ಪನೆ ಸಾಕಾರಗೊಳ್ಳಲು ಸರ್ವರೂ ಕಾಯಕ, ದಾಸೋಹದಂತಹ ವಿಚಾರಗಳನ್ನು ಆಚರಣೆಗೆ ತರಬೇಕು. ಪ್ರಜ್ಞಾಪೂರ್ವಕ ಅರಿವಿನೊಂದಿಗೆ ಬದುಕಿದಾಗ ಮಾತ್ರ ಸಕಲರು ಸಂತೋಷದಿಂದ ಬಾಳಲು ಸಾಧ್ಯವಾಗುತ್ತದೆ. ಸಂವಿಧಾನದ ಬಗೆಗೆ ಯುವಪೀಳಿಗೆಯನ್ನು ಜಾಗೃತಿಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಹೇಳಿದರು.

‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ವಿಷಯವಾಗಿ ಕೆ.ಎಸ್‌.ಎಸ್‌. ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ| ಡಿ.ಬಿ.ಗವಾನಿ ಉಪನ್ಯಾಸ ನೀಡಿ, ಸಮಾನತೆ, ಸೋದರತೆ ಮತ್ತು ಮಾನವೀಯತೆ, ಭಾತೃತ್ವ ಭಾವನೆಯೊಂದಿಗೆ ದೇಶದ ಎಲ್ಲ ವರ್ಗದ ಜನ ಐಕ್ಯತೆ ಸಾಧಿಸಬೇಕು. ಭಾರತದ ಸಂವಿಧಾನ ವಿಶ್ವಮಾನ್ಯತೆ ಹೊಂದಿದೆ. ಸ್ವಾತಂತ್ರ್ಯ, ಸಮಾನತೆ, ಭಾತೃತ್ವ, ಸಮಾಜವಾದಿ ಮತ್ತು ಜಾತ್ಯತೀತ ಭಾವನೆಗಳನ್ನು ಮೂಡಿಸಿ ಭವ್ಯ ಭಾರತವನ್ನು ಕಟ್ಟುವ ಆಶಯವನ್ನು ಸಂವಿಧಾನ ಹೊಂದಿದೆ ಎಂದರು.

ಗಣರಾಜ್ಯೋತ್ಸವದ ಅಂಗವಾಗಿ ಬಸವೇಶ್ವರ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಜೆ.ಸಿ. ಪ್ರೌಢಶಾಲೆ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತಗಾಯನ ಹಾಗೂ ನೃತ್ಯ ಕಾರ್ಯಕ್ರಮಗಳು ಜರುಗಿದವು.

Advertisement

ಸಾವಿತ್ರಿ ಲಮಾಣಿ ಅವರಿಂದ ಜನಪದ ಸಂಗೀತ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ತೋಂಟದ ಸಿದ್ಧಲಿಂಗ ಶ್ರೀಗಳ ಭಾವಚಿತ್ರ ಅನಾವರಣ ಮಾಡಲಾಯಿತು. ದಾನಪ್ಪ ತಡಸದ, ಹಬೀಬ, ವಿವೇಕಾನಂದಗೌಡ ಪಾಟೀಲ, ಜಿ.ಪಿ. ಕಟ್ಟಿಮನಿ, ಎಸ್‌.ಯು. ಸಜ್ಜನಶೆಟ್ಟರ, ಅನ್ನಪೂರ್ಣಕ್ಕ ಬಡಿಗಣ್ಣವರ, ಶಿವಕುಮಾರ ರಾಮನಕೊಪ್ಪ, ಮಂಜುನಾಥ ಅಸುಂಡಿ, ವಿಜಯಕುಮಾರ ಹಿರೇಮಠ, ಶರಣಬಸಪ್ಪ ಅಂಗಡಿ, ಶಿವನಗೌಡ ಗೌಡರ, ಮಲ್ಲಿಕಾರ್ಜುನ ಐಲಿ ಇದ್ದರು. ಶೇಖಣ್ಣ ಕವಳಿಕಾಯಿ ಸ್ವಾಗತಿಸಿದರು. ಮಂಜುಳಾ ಹಾಸಲಕರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next