ಪೀಠದ ಜ| ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Advertisement
ಮುಳಗುಂದ ನಾಕಾದಲ್ಲಿರುವ ರೇಣುಕ ಮಂದಿರದಲ್ಲಿ ಜ| ಪಂಚಾಚಾರ್ಯ ಸೇವಾ ಸಂಘದಿಂದ ಏರ್ಪಡಿಸಿದ್ದ ರೇಣುಕಾಚಾರ್ಯಜಯಂತಿ ಹಾಗೂ ರಥೋತ್ಸವ ಮತ್ತು ಶ್ರೀ ರೇಣುಕ ದರ್ಶನ ಪ್ರವಚನ ಮಂಗಲೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಧರ್ಮೋದ್ಧಾರಕ್ಕಾಗಿ ಜ| ರೇಣುಕಾಚಾರ್ಯರು ವೀರಶೈವ ಧರ್ಮವನ್ನು ಗಟ್ಟಿಗೊಳಿಸಿದರು. ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಬಿತ್ತಿದವರು ಎಂದರು.
Related Articles
Advertisement
ಪಂಚಾಕ್ಷರ ಶಿವಾಚಾರ್ಯ ಅಟ್ನೂರ ಶ್ರೀಗಳು ಮಾತನಾಡಿ, ಗುರುವಿನಿಂದ ಇಷ್ಟಲಿಂಗ ಪಡೆದುಕೊಂಡು ಗುರು ಬೋಧಿಸಿದ ಶಿವಪಂಚಾಕ್ಷರಿ ಮಹಾಮಂತ್ರ ಜಪಿಸಿದರೆ ವೀರಶೈವರಾದವರಿಗೆ ಮೋಕ್ಷ ಹೊಂದಲು ಸಾಧ್ಯವಾಗುವುದು. ಅವರ ಧರ್ಮ ಅವರವರಿಗೆ ಶ್ರೇಷ್ಠ. ಸರ್ವರೂ ಸಮನ್ವಯತೆಯಿಂದ ಬಾಳಬೇಕು ಎಂದರು.
ನರೇಗಲ್ಲನ ಮಲ್ಲಿಕಾರ್ಜುನ ಶಿವಾಚಾರ್ಯ ಹಿರೇಮಠ ಅವರು ಶ್ರೀ ರೇಣುಕ ದರ್ಶನ ಪ್ರವಚನವನ್ನು ಮಂಗಲ ಮಾಡಿದರು. ರೇಣುಕ ಮಂದಿರದ ಉತ್ತರಾಧಿಕಾರಿ ಚಂದ್ರಶೇಖರ ದೇವರು ನೇತೃತ್ವ ವಹಿಸಿದ್ದರು. ಮಲ್ಲಿಕಾರ್ಜುನ ಹಿರೇಮಠ ಗವಾಯಿಗಳು ಭಕ್ತಿ ಸಂಗೀತ ಸುಧೆ ಹರಿಸಿದರು. ಪ್ರೊ| ಗುರುಪಾದಯ್ಯ ಸಾಲಿಮಠ ರಚಿಸಿದ ಬಾಳಿಗೆ ಬೆಳಕು ಭಾಗ- 8 ಕೃತಿಯನ್ನು ಉಜ್ಜಯಿನಿ ಜಗದ್ಗುರುಗಳು ಬಿಡುಗಡೆಗೊಳಿಸಿದರು. ಸುರೇಶ ಅಬ್ಬಿಗೇರಿ ವೇದಿಕೆಯಲ್ಲಿದ್ದರು. ಪ್ರಾರಂಭದಲ್ಲಿ ಗುರುಸಿದ್ದಯ್ಯ ಹಿರೇಮಠ ವೇದಘೋಷ ಮಾಡಿದರು. ಚಂದ್ರು ಬಾಳಿಹಳ್ಳಿಮಠ ಸ್ವಾಗತಿಸಿದರು. ವಿ.ಕೆ. ಗುರುಮಠ ನಿರೂಪಿಸಿದರು.