Advertisement

ಉ.ಪ್ರ. ರೈತರ ಹತ್ಯೆಗೆ ಆಕ್ರೋಶ

03:15 PM Oct 14, 2021 | Team Udayavani |

ಗಜೇಂದ್ರಗಡ: ಉತ್ತರ ಪ್ರದೇಶದಲಖೀಂಪುರದಲ್ಲಿ ರೈತರ ಮೇಲಿನ ದಾಳಿಖಂಡಿಸಿ ಮತ್ತು ರೈತ ಹುತಾತ್ಮ ದಿನಪ್ರಯುಕ್ತ ಪಟ್ಟಣದಲ್ಲಿ ಸಂಯುಕ್ತಹೋರಾಟ ಸಮಿತಿಯಿಂದ ಕಾಲಕಾಲೇಶ್ವರವೃತ್ತದಲ್ಲಿ ಪಂಜಿನ ಮೆರವಣಿಗೆ ಮೂಲಕಪ್ರತಿಭಟನೆ ನಡೆಸಲಾಯಿತು.

Advertisement

ಈ ವೇಳೆ ಸಿಪಿಐಎಂ ಜಿಲ್ಲಾಕಾರ್ಯದರ್ಶಿ ಮಹೇಶ ಪತ್ತಾರಮಾತನಾಡಿ, ದೇಶದಲ್ಲಿ ಅರಾಜಕತೆಸೃಷ್ಟಿಯಾಗಿದೆ. ದೇಶವನ್ನಾಳುವಸರ್ಕಾರವೇ ದೇಶದ ಪ್ರಜೆಗಳಮೇಲೆ ಹಲ್ಲೆಯಂತಹ ಕೃತ್ಯಗಳನ್ನುನಡೆಸುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಗೆಮಾರಕವಾಗಿದೆ. ದೇಶದಲ್ಲಿ ಹಿಟ್ಲರ್‌ಸರ್ಕಾರ ಅಧಿಕಾರ ನಡೆಸುತ್ತಿದೆ.

ಹೀಗಾಗಿ, ಅನ್ನದಾತರಿಗೆ ರಕ್ಷಣೆಇಲ್ಲದಂತಾಗಿದೆ. ಇದು ಕೇವಲ ನಾಲ್ವರುರೈತರ ಕೊಲೆ ಅಲ್ಲ. ರೈತ ಸಮುದಾಯದಕೊಲೆಯಾಗಿದೆ ಎಂದು ಕಿಡಿಕಾರಿದರು.ಉತ್ತರ ಪ್ರದೇಶದಲ್ಲಿನ ಜನಪ್ರತಿನಿ ಗಳೆ ಇಂತಹ ಕೃತ್ಯಗಳಿಗೆ ಇಳಿದಿರುವುದುಜನಸಾಮಾನ್ಯರ ಬದುಕು ಇನ್ನಷ್ಟುಕಷ್ಟಕರವಾಗಿದೆ.

ಕೃಷಿ ಕರಾಳ ಕಾಯ್ದೆಗಳನ್ನುವಿರೋ ಸಿ 10 ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಕರೆದುಮಾತನಾಡಿಸುವ ಕನಿಷ್ಟ ಸೌಜನ್ಯವೂಕೇಂದ್ರ ಸರ್ಕಾರಕ್ಕೆ ಇಲ್ಲ. ಅನ್ನದಾತನಬೆಂಬಲಕ್ಕೆ ಪಕ್ಷ ನಿಂತಿದೆ. ಕೇಂದ್ರ ಸರ್ಕಾರರೈತರನ್ನು ಕೊಲೆ ಮಾಡಿರುವ ಮಿಶ್ರಾನನ್ನುಬಂ ಧಿಸಿ, ರೈತರ ಮೇಲಿನ ದೌರ್ಜನ್ಯನಿಲ್ಲಿಸಲಿ. ಅನ್ನ ಹಾಕುವ ರೈತರನ್ನೇಕೊಲ್ಲುವ ಮನಸ್ಥಿತಿಗೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಐಎಂ ಮುಖಂಡ ಎಂ.ಎಸ್‌.ಹಡಪದ ಮಾತನಾಡಿ, ಉತ್ತರಪ್ರದೇಶದಲ್ಲಿಅ ಧಿಕಾರ ನಡೆಸುತ್ತಿರುವ ಯೋಗಿಆ ತ್ಯನಾಥ ಸರ್ಕಾರ ರೈತರಿಗೆ ಭದ್ರತೆನೀಡುವುದನ್ನು ಬಿಟ್ಟು, ಹತ್ಯೆ, ಹಲ್ಲೆನಡೆಸಲು ಪ್ರಚೋದಿಸುತ್ತಿರುವುದುಖಂಡನೀಯ. ಕೃತ್ಯಕ್ಕೆ ಕಾರಣರಾದವರನ್ನುಕೂಡಲೇ ಬಂಧಿಸಬೇಕು.

Advertisement

ಅವರ ಮೇಲೆಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.ಜೊತೆಗೆ ಘಟನೆಗೆ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹ ಖಾತೆ ರಾಜ್ಯಸಚಿವ ಅಜಯ್‌ ಮಿಶ್ರಾ ಮತ್ತು ಅಲ್ಲಿನಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ಪಡೆಯಲು ರಾಷ್ಟ್ರಪತಿಗಳು ಮುಂದಾಗಬೇಕೆಂದುಒತ್ತಾಯಿಸಿದರು. ಮಾರುತಿ ಚಿಟಗಿ,ಮೆಹಬೂಬ ಹವಾಲ್ದಾರ್‌, ಬಾಲುರಾಠೊಡ, ಪೀರು ರಾಠೊಡ,ಬಸವರಾಜ ಹೊಸಮನಿ, ರವೀಂದ್ರಹೊನವಾಡ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next