Advertisement

ಷರತ್ತು ಹಿಂಪಡೆಯದಿದ್ದರೆ ಪ್ರತಿಭಟನೆ: ಖಾನಪ್ಪನವರ

02:11 PM Sep 07, 2021 | Team Udayavani |

ಗದಗ: ಕೋವಿಡ್‌ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶಮೂರ್ತಿಗಳ ಪ್ರತಿಷ್ಠಾಪನೆಯನ್ನು5 ದಿನಗಳಿಗೆಮಿತಿಗೊಳಿಸಿ ರಾಜ್ಯ ಸರಕಾರದ ವಿಧಿಸಿರುವ ಷರತ್ತನ್ನುತಕ್ಷಣ ಹಿಂಪಡೆಯಬೇಕು.

Advertisement

ಈ ವಿಚಾರದಲ್ಲಿ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ನಾಯಕರು ಮಧ್ಯಪ್ರವೇಶಿಸಬೇಕು. ಇಲ್ಲದಿದ್ದರೆ ಸಂಘ ಪರಿವಾರಮತ್ತು ಬಿಜೆಪಿ ಸ್ಥಳೀಯ ನಾಯಕರ ಮನೆ ಮುಂದೆ ಪ್ರತಿಭಟಿಸುವುದಾಗಿ ಶ್ರೀರಾಮ ಸೇನೆ ವಿಭಾಗೀಯ ಸಂಚಾಲಕ ರಾಜೂ ಖಾನಪ್ಪನವರ ಎಚ್ಚರಿಕೆ ನೀಡಿದರು.ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರಕಾರದಲ್ಲಿಕೋವಿಡ್‌ ನೆಪದಲ್ಲಿ ಹಿಂದೂ ಸಂಪ್ರದಾಯ,ಆಚರಣೆಗಳನ್ನು ಹತ್ತಿಕ್ಕುವ ಪ್ರಯತ್ನಗÙು ನ ‌ಡೆಯುತ್ತಿವೆ.ಕಳೆದ ವರ್ಷ ಬಿ.ಎಸ್‌.ಯಡಿಯೂರಪ್ಪ ಅವರ ಅವಧಿಯಲ್ಲಿ ಕೋವಿಡ್‌ ಮಧ್ಯೆಯೂ 5, 9, ಹಾಗೂ 11ನೇದಿನದಂದು ಗಣೇಶ ವಿಸರ್ಜಿಸಲಾಯಿತು.

ಕಳೆದವರ್ಷಕ್ಕಿಂತ ಕೋವಿಡ್‌ ತೀವ್ರತೆ ಕಡಿಮೆಯಾಗಿ¨ªರ ‌ ೂಸರಕಾರ ಅವೈಜ್ಞಾನಿಕ ಷರತ್ತು ‌ ವಿಧಿಸಿ ಗೂಂದಲ ಮೂಡಿಸುತ್ತಿದೆ ಎಂದು ಆರೋಪಿಸಿದರು. ಕಳೆದ ಬಾರಿ ಸಚಿವ ಆರ್‌.ಅಶೋಕ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗಣೇಶಚತುರ್ಥಿ ಆಚರಣೆ ಬಗ್ಗೆ ಜಿಲ್ಲಾಧಿಕಾರಿಗಳು,‌ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿಗಳು ಸ್ಥಳೀಯ ಮುಖಂಡರಜತೆ ಚರ್ಚಿಸಿ,ಸೂಕ್ತ ನಿರ್ಧಾರಕೈಗೊಳ್ಳಲಾಗುವುದೆಂದುಭರವಸೆ ನೀಡಿದ್ದರು. ಆದರೆ ಸ್ಥಳೀಯವಾಗಿ ಆ ರೀತಿಯಪ್ರಯತ್ನಗಳೇ ನಡೆದಿಲ್ಲ ಎಂದು ಕಿಡಿಕಾರಿದರು.

ಸಾರ್ವಜನಿಕ ಗಣೇಶೋತ್ಸವ ಮಹಾ ಮಂಡಳಅಧ್ಯಕ್ಷ ಕಿಶನ್‌ ಮೇರವಾಡೆ ಮಾತನಾಡಿ, ಪ್ರತಿವರ್ಷದಂತೆ ಈ ಬಾರಿಯೂ ಪರಿಸರ ಸ್ನೇಹಿಮಣ್ಣಿನ ಗಣೇಶ ಮೂರ್ತಿಗಳನ್ನು ಉಚಿತವಾಗಿವಿತರಿಸಲಾಗುತ್ತದೆ. ಆಸಕ್ತರು ಸಂಪರ್ಕಿಸಬಹುದುಎಂದರು. ರಾಜಣ್ಣ ಮಲ್ಲಾಡದ, ಮಹಾಂತೇಶಪಾಟೀಲ, ಕಿರಣ ಹಿರೇಮಠ, ವಿಶ್ವನಾಥ ಶೀರಿ,ವೀರೇಶ ನಾಲವಾಡ, ಈಶ್ವರ ಕಾಟವಾಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next