Advertisement
ಮೊದಲಿದ್ದ ಹೊಸಪೇಟೆ-ಗದಗ-ಹುಬ್ಬಳ್ಳಿ ಹಾಗೂ ಗದಗ-ಬಾಗಲಕೋಟೆ-ವಿಜಯಪುರ ರೈಲು ಮಾರ್ಗಗಳು ಡಬ್ಲಿಂಗ್ ಹಾಗೂ ವಿದ್ಯುದ್ದೀಕರಣ ಗೊಂಡಿದ್ದು ಬಿಟ್ಟರೆ ಹೊಸ ರೈಲು ಮಾರ್ಗ ಯೋಜನೆ ಗಳು ಗದಗ ಜಿಲ್ಲೆಗೆ ಹಗಲುಗನಸಾಗೇ ಉಳಿದುಬಿಟ್ಟಿದೆ.
Related Articles
Advertisement
ಯೋಜನೆಗೆ ರೈಲ್ವೆ ಬೋರ್ಡ್ ತಡೆ: ಗದಗ ಜಿಲ್ಲೆಯ ಪ್ರಮುಖ ಬೇಡಿಕೆಗಳಾಗಿದ್ದ ಗದಗ-ಮುಂಡರಗಿ- ಹೂವಿನ ಹಡಗಲಿ-ಹರಪನಳ್ಳಿ ಹಾಗೂ ಗದಗ- ವಾಡಿ ಮಾರ್ಗದ ರೈಲು ಯೋಜನೆಗಳಲ್ಲಿ ಗದಗ-ವಾಡಿ ಮಾರ್ಗ ಜಿಲ್ಲೆಯಿಂದ ಕೈತಪ್ಪಿದೆ. ಇನ್ನು ಗದಗ-ಮುಂಡರಗಿ-ಹೂವಿನ ಹಡಗಲಿ-ಹರಪನಳ್ಳಿ ಮಾರ್ಗಕ್ಕೆ ರೈಲು ಅಧಿ ಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. 2014ರಲ್ಲಿ ಅಂದಿನ ರೈಲ್ವೆ ಮಂತ್ರಿ ಸದಾನಂದಗೌಡರು ಮಂಜೂರು ಮಾಡಿದರು. 10-7-2019ರಲ್ಲಿ ಗದಗ- ಮುಂಡರಗಿ-ಹರಪ್ಪನಹಳ್ಳಿ 94 ಕಿ.ಮೀ. ರೈಲು ಮಾರ್ಗದ ಸರ್ವೇ ಮಾಡಲಾಯಿತು. 813 ಕೋಟಿ ರೂ. ಅನುದಾನದ ಅವಶ್ಯಕತೆ ಇರುವ ಕಾರಣ ಅನುದಾನದ ವೆಚ್ಚ ಅಧಿಕವಾದ ಹಿನ್ನೆಲೆಯಲ್ಲಿ ರೈಲ್ವೆ ಬೋರ್ಡ್ ತಡೆ ಹಿಡಿದಿದೆ. 2022ರ ಮಾರ್ಚ್‌ನಲ್ಲಿ ಮುಂಡರಗಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ರೈಲು ಮಾರ್ಗ ಆರಂಭಿಸುವಂತೆ ಪ್ರಧಾನಿಗೆ ಮನವಿ ಪತ್ರ ರವಾನಿಸಿ ಒತ್ತಾಯಿಸಿದೆ.
ಹೊಸ ರೈಲು ಮಾರ್ಗಕ್ಕೆ ಹಸಿರು ನಿಶಾನೆ ವಿಶ್ವಾಸ: ಗದಗ-ಕೋಟುಮುಚಗಿ-ನರೇಗಲ್-ಗಜೇಂದ್ರಗಡ – ಹನುಮಸಾಗರ- ಇಳಕಲ್-ವಾಡಿ ಮಾರ್ಗ ಕೈತಪ್ಪಿದ್ದರಿಂದ ಸಂಸದ ಶಿವಕುಮಾರ ಉದಾಸಿ ಅವರು ಆಸಕ್ತಿಯಿಂದ ಹೊಸ ರೈಲು ಮಾರ್ಗಕ್ಕೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಗದಗ- ಕೋಟುಮುಚಗಿ- ನರೇಗಲ್- ಗಜೇಂದ್ರಗಡ-ಹನುಮಸಾಗರ- ಇಳಕಲ್-ಕೃಷ್ಣಾವರ ರೈಲು ಮಾರ್ಗದ ಸರ್ವೇ ಕಾರ್ಯ ಪೂರ್ಣಗೊಂಡು ರೈಲ್ವೆ ಬೋರ್ಡ್‌ಗೆ ವರದಿ ಸಲ್ಲಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಹಸಿರು ನಿಶಾನೆ ದೊರೆಯುವ ವಿಶ್ವಾಸದಲ್ಲಿದೆ.
ಆಗಬೇಕಾದ ಯೋಜನೆಗಳು: ಹಿಂದಿನ ರೈಲ್ವೆ ಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದಂತೆ ಗದಗ ರೈಲು ನಿಲ್ದಾಣ ವಿಶ್ವ ಮೇಲ್ದರ್ಜೆಗೇರಿಸಬೇಕಿದೆ. ಹುಬ್ಬಳ್ಳಿಯಿಂದ ಗದಗ ಮಾರ್ಗವಾಗಿ ರಾತ್ರಿ ವೇಳೆ ಸೋಲಾಪೂರ, ಹೈದರಾಬಾದ್ ಕಡೆಗೆ ರೈಲು ಓಡಿಸಬೇಕಿದೆ. ಗದಗ-ಬಾಗಲಕೋಟೆ ಮಧ್ಯೆ ಸಾಮಾನ್ಯ ರೈಲುಗಳ ಸಂಖ್ಯೆ ಹೆಚ್ಚಿಸಬೇಕಿದೆ.
ಪೂರ್ಣಗೊಂಡ ಅಭಿವೃದ್ಧಿ ಕಾಮಗಾರಿ: ಗದಗ ಬೈಪಾಸ್ ಗೂಡ್ಸ್ ರೈಲ್ವೆ ನಿಲ್ದಾಣ 80-110 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಕಾರ್ಯಾರಂಭ ಮಾಡಿದೆ. ಗದಗ-ಬದಾಮಿ, ಬಾಗಲಕೋಟೆ-ವಿಜಯಪುರ-ಹೂಟಗಿ 284 ಕಿ.ಮೀ. ವಿದ್ಯುದ್ದೀಕರಣ ಮತ್ತು ಡಬ್ಲಿಂಗ್ 1100 ಕೋಟಿ ರೂ. ಯೋಜನೆಯಾಗಿದ್ದು, ಮೊದಲ ಹಂತದಲ್ಲಿ ಬಿಡುಗಡೆಯಾಗಿದ್ದ 350 ಕೋಟಿ ರೂ. ಕಾಮಗಾರಿಯ ಆಯ್ದ ಭಾಗ ಪೂರ್ಣಗೊಂಡು ಲೋಕಾರ್ಪಣೆಗೊಳ್ಳುವ ಹಂತದಲ್ಲಿದೆ. ಗದಗ-ಹೊಂಬಳ ಮಾರ್ಗದಲ್ಲಿ ರೈಲ್ವೆ ಮೇಲ್ಸೇತುವೆ 2023ರ ಮಾರ್ಚ್‌ನಲ್ಲಿ ಪೂರ್ಣಗೊಂಡು ಲೋಕಾ ರ್ಪಣೆ ಮಾಡುವುದಾಗಿ ರೈಲ್ವೆ ಅಧಿ ಕಾರಿಗಳು ತಿಳಿಸಿದ್ದಾರೆ.
ಗದಗ ರೈಲು ನಿಲ್ದಾಣದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ನೂತನ ವಿದ್ಯುತ್ ಚಾಲಿತ ಎಸ್ಕಲೇಟರ್ ಕಾಮಗಾರಿ, ಉದ್ಯಾನ ಹಾಗೂ ಫುಟ್‌ಪಾತ್ ನವೀಕರಣಗೊಂಡಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಹೊಸಪೇಟೆ-ಕೊಪ್ಪಳ-ಗದಗ- ಹುಬ್ಬಳ್ಳಿ ಡಬ್ಲಿಂಗ್ ಮತ್ತು ವಿದ್ಯುತ್ತೀಕರಣ ಪೂರ್ಣಗೊಂಡು ಚಾಲನೆಯಲ್ಲಿದೆ. ಸ್ಥಗಿತಗೊಂಡಿದ್ದ ಹಳ್ಳಿಗುಡಿ ರೈಲು ನಿಲ್ದಾಣ ನವೀಕರಣಗೊಂಡು ಉದ್ಘಾಟನೆ ಹಂತದಲ್ಲಿದೆ.
ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಗದಗ ಜಿಲ್ಲೆಯ ರೈಲ್ವೆ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಲಾಗಿದ್ದು, ಹಲವು ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡು ಲೋಕಾರ್ಪಣೆಗೊಳ್ಳುವ ಹಂತದಲ್ಲಿವೆ. ಕೆಲವೇ ತಿಂಗಳಲ್ಲಿ ಗದಗ-ಯಲವಿಗಿ ರೈಲು ಮಾರ್ಗಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಚಾಲನೆ ದೊರೆಯಲಿದೆ. ಮೇಲಾಗಿ, ಗದಗ-ಕೃಷ್ಣಾವರ ಹೊಸ ರೈಲ್ವೆ ಮಾರ್ಗದ ಸರ್ವೇ ಕಾರ್ಯ ಪೂರ್ಣಗೊಂಡು ರೈಲ್ವೆ ಬೋರ್ಡ್‌ಗೆ ವರದಿ ಸಲ್ಲಿಕೆಯಾಗಿದೆ. ಮುಂಬರುವ ಬಜೆಟ್‌ನಲ್ಲಿ ಗದಗ-ಕೃಷ್ಣಾವರ ನೂತನ ರೈಲ್ವೆ ಮಾರ್ಗಕ್ಕೆ ಹಸಿರು ನಿಶಾನೆ ದೊರೆಯುವ ವಿಶ್ವಾಸವಿದೆ. -ಶಿವಕುಮಾರ ಉದಾಸಿ, ಸಂಸದರು
ಅರುಣಕುಮಾರ ಹಿರೇಮಠ