Advertisement

ಗದಗ: ಹಗಲುಗನಸು ಕಾಣುತ್ತಿದ್ದಾರೆ ಬೊಮ್ಮಾಯಿ

05:05 PM Mar 21, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ದೇಶದ ಸರ್ವೋಚ್ಛ ನ್ಯಾಯಾಲಯ ಚುನಾವಣಾ ಬಾಂಡ್‌ ಹಗರಣ ಬಯಲಿಗೆಳೆಯುವ ಮೂಲಕ ಕೇಂದ್ರ ಸರಕಾರದ ಅಕ್ರಮವನ್ನು ಬೆಳಕಿಗೆ ತಂದಿದೆ. ದೇಶದ ಜನತೆಗೆ ಸುಳ್ಳು ಭರವಸೆ ನೀಡಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ
ಹೇಳಿ ಬಡತನವನ್ನು ಅಪಹಾಸ್ಯ ಮಾಡಿ ಎರಡು ಬಾರಿ ಮತಹಾಕಿಸಿಕೊಂಡಿರುವ ನರೇಂದ್ರ ಮೋದಿ ಅವರಿಗೆ ತಕ್ಕ ಶಾಸ್ತಿ
ಮಾಡಬೇಕಾಗಿದೆ ಎಂದು ಸಚಿವ ಎಚ್‌.ಕೆ. ಪಾಟೀಲ ಮನವಿ ಮಾಡಿದರು.

Advertisement

ನಗರದ ಕೆ.ಎಚ್‌. ಪಾಟೀಲ ಸಭಾಭವನದಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ದೇಶಕ್ಕೆ ಅದ್ಭುತವಾದ ಸಂವಿಧಾನ ನೀಡಿದ ಕೊಡುಗೆ ಕಾಂಗ್ರೆಸ್‌ಗೆ ಸಲ್ಲುತ್ತದೆ. ಆದರೆ, ಸರ್ವರಿಗೂ ಸಮಾನತೆ ಒದಗಿಸುವ ಸಂವಿಧಾನವನ್ನು ಬದಲಾಯಿಸುತ್ತೇವೆ, ತಿದ್ದುಪಡಿ ಮಾಡುತ್ತೇವೆ ಎಂದು ಹೇಳಿಕೆ ನೀಡುವ ಬಿಜೆಪಿಯವರಿಂದ ನಮ್ಮ ಸಂವಿಧಾನ ಕಾಪಾಡಿಕೊಂಡು, ಮೀಸಲಾತಿ ಉಳಿಸಿಕೊಳ್ಳಬೇಕಾಗಿದೆ ಎಂದರು.

ಮನಮೋಹನಸಿಂಗ್‌ ಪ್ರಧಾನಿ ಆಗಿದ್ದ ಕಾಲದಲ್ಲಿ 72 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಲಾಗಿದೆ. ಆದರೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತಮ್ಮ ಅವಧಿಯಲ್ಲಿ 726 ಶ್ರೀಮಂತರ 6.50 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇದು ಹೀಗೆ ಮುಂದುವರಿದರೆ ಆರ್ಥಿಕತೆಗೆ ಹೊಡೆತ ಬೀಳಲಿದೆ. ದೇಶ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಾವೇರಿ ಲೋಕಸಭಾ ಕ್ಷೇತ್ರ ಸೇರಿ ದೇಶದೆಲ್ಲೆಡೆ ಆ ಅಲೆ ಇದೆ. ಈ ಅಲೆ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಸಮುದ್ರ  ಅಂದ ಮೇಲೆ ಅಲೆ ಇದ್ದೇ ಇರುತ್ತದೆ. ಆ ಸಮುದ್ರದಲ್ಲಿ ಈಜಿ ದಡ ಸೇರುತ್ತೇನೆ ಎಂಬ ವಿಶ್ವಾಸವಿದೆ.
ಆನಂದಸ್ವಾಮಿ ಗಡ್ಡದೇವರಮಠ,
ಕಾಂಗ್ರೆಸ್‌ ಅಭ್ಯರ್ಥಿ

ಸಭೆಯಲ್ಲಿ ಭಾಗವಹಸಿದ್ದ 2500ಕ್ಕೂ ಹೆಚ್ಚು ಜನರಿಗೆ ಚುನಾವಣಾ ಹೇಗೆ ಮಾಡಬೇಕು. ಯಾವ ರೀತಿ ಜನರನ್ನು ಭೇಟಿ ಮಾಡಿ ಸಮಾಲೋಚನೆ ಮಾಡಬೇಕು ಎಂಬುದನ್ನು ತಿಳಿಸಿದ್ದೇವೆ. ಗ್ಯಾರಂಟಿ ಸಮಾವೇಶಗಳನ್ನು ಮಾಡಿದ್ದೇವೆ. ಸಮಾವೇಶದಲ್ಲಿ ಸಹಸ್ರಾರು ಜನ ಸೇರಿದ್ದರು. ಮಹಿಳೆಯರು ನಮ್ಮ ಬೆನ್ನಿಗೆ ಇದ್ದೇವೆ ಎಂಬುದನ್ನು ಸಾಬೀತು ಪಡಿಸಿದ್ದು, ಗೆಲುವಿನ ಬಗ್ಗೆ ಆತ್ಮವಿಶ್ವಾಸ ಮೂಡಿದೆ.
ಎಚ್‌.ಕೆ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next