Advertisement

ಮುಂಗಾರು ಹಂಗಾಮು-ಗರಿಗೆದರಿದ ಕೃಷಿ ಚಟುವಟಿಕೆ : ಬಿತ್ತನೆ ಬೀಜ-ರಸಗೊಬ್ಬರಕ್ಕಿಲ್ಲ ಕೊರತೆ

06:54 PM Jun 03, 2021 | Team Udayavani |

ಗದಗ: ಸತತ ಐದು ವರ್ಷಗಳಿಂದ ಅನಾವೃಷ್ಟಿ, ಅತಿವೃಷ್ಟಿಯಿಂದ ರೈತಾಪಿ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಈ ಬಾರಿ
ಮುಂಗಾರು ಪೂರ್ವದಲ್ಲೇ ಮಳೆ ಚುರುಕುಗೊಂಡಿದೆ. ಹೊಸ ಭರವಸೆಯೊಂದಿಗೆ ರೈತರು ಮತ್ತೆ ಜಮೀನುಗಳತ್ತ ಮುಖ ಮಾಡಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮುಂಗಾರು ಬಿತ್ತನೆಗೆ ಸಜ್ಜುಗೊಳ್ಳುತ್ತಿದ್ದಾರೆ.

Advertisement

ಸತತ 5 ವರ್ಷಗಳಿಂದ ಜಿಲ್ಲೆಯ ರೈತರು ಒಂದಿಲ್ಲೊಂದು ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. 2018ರ ವರೆಗೂ ಜಿಲ್ಲೆಯನ್ನು ಬರಗಾಲ ಆವರಿಸಿದ್ದರೆ, 2019 ಮತ್ತು 2020 ರಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದ ರೈತರು ನಲುಗಿದ್ದಾರೆ.

ಈ ನಡುವೆ ಆವರಿಸಿರುವ ಕೊರೊನಾ ಆತಂಕದ ಮಧ್ಯೆಯೇ ರೈತರು ಕೃಷಿ ಚಟುಕವಟಿಕೆಗಳಿಗೆ ಸಿದ್ಧತೆ ನಡೆಸಿದ್ದಾರೆ. ಅಲ್ಲದೇ,
ಈ ಬಾರಿ ಮುಂಗಾರು ಆರಂಭಕ್ಕೂ ಮುನ್ನವೇ ಜಿಲ್ಲೆಯಲ್ಲಿ ಮಳೆ ಚುರುಕೊಂಡಿದ್ದು, ಕೃಷಿಕರಲ್ಲಿ ಹೊಸ ಚೈತನ್ಯ ಮೂಡಿಸಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಬಿತ್ತನೆ ಗುರಿ?: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಒಟ್ಟು 300600 ಹೆ. ಪ್ರದೇಶದಲ್ಲಿ
ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಪ್ರಮುಖವಾಗಿ ಗೋವಿನ ಜೋಳ 82600 ಹೆ., ಹೆಸರು 1,27,800 ಹೆ., ಶೇಂಗಾ 39,000
ಹೆ., ಸೂರ್ಯಕಾಂತಿ 9000 ಹೆ. ಹಾಗೂ ಹತ್ತಿ 33000 ಹೆ. ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಇದನ್ನೂ ಓದಿ :ಕೋವಿಡ್ ನಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಸ್ಥರಿಗೆ 2 ಲಕ್ಷ ರೂ. ಸಹಾಯಧನ ಘೋಷಿಸಿದ ಸರ್ಕಾರ

5710 ಕ್ವಿಂ. ಬಿತ್ತನೆ ಬೀಜ ದಾಸ್ತಾನು: ಜಿಲ್ಲೆಯಲ್ಲಿ ಮುಂಗಾರಿಗೆ ಆಗಬಹುದಾದ ಬಿತ್ತನೆ ಪ್ರಮಾಣಕ್ಕೆ ತಕ್ಕಂತೆ ಬಿತ್ತನೆ ಬೀಜ
ದಾಸ್ತಾನು ಮಾಡಿಕೊಳ್ಳಲಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಹೆಸರು 12 ಸಾವಿರ ಹೈಬ್ರಿಡ್‌ ಜೋಳ, ಮುಸುಕಿನ ಜೋಳ, ಸಜ್ಜೆ, ಹೆಸರು, ತೊಗರಿ, ಶೇಂಗಾ, ಸೂರ್ಯಕಾಂತಿ, ಹೈಬ್ರಿಡ್‌ ಹತ್ತಿ ತಳಿಗಳ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. ಜಿಲ್ಲೆಯ
ರೈತ ಸಂಪರ್ಕ ಕೇಂದ್ರಗಳಲ್ಲಿ 5710 ಕ್ವಿಂಟಲ್‌ ವಿವಿಧ ಬೆಳೆಗಳ ಬಿತ್ತನೆ ಬೀಜದ ದಾಸ್ತಾನಿದೆ.

Advertisement

ರೈತರ ಅನುಕೂಲಕ್ಕಾಗಿ ಬಿತ್ತನೆ ಬೀಜ ವಿತರಿಸಲು 11 ರೈತ ಸಂಪರ್ಕ ಕೇಂದ್ರಗಳ ಜೊತೆಗೆ 6 ಹೆಚ್ಚುವರಿ ವಿತರಣಾ
ಕೇಂದ್ರಗಳನ್ನು ವ್ಯವಸ್ಥೆ ಮಾಡಿದೆ.

ರಸಗೊಬ್ಬರಕ್ಕಿಲ್ಲ ಕೊರತೆ: ಜಿಲ್ಲೆಯಲ್ಲಿ ಬಿತ್ತನೆ ಪ್ರದೇಶಕ್ಕೆ ಅನುಗುಣವಾಗಿ ರಸಗೊಬ್ಬರ ಪೂರೈಕೆಗೆ ಕ್ರಮ ವಹಿಸಲಾಗಿದೆ.
ಒಟ್ಟು 20604 ಮೇ. ಟನ್‌ ರಸಗೊಬ್ಬರ ದಾಸ್ತಾನಿನಲ್ಲಿ 11896 ವಿತರಣೆ ಮಾಡಲಾಗಿದ್ದು, 8708 ಟನ್‌ ಉಳಿದಿದೆ. ಅದರಲ್ಲಿ
ಯೂರಿಯಾ 2399, ಡಿಎಪಿ 779, ಎಂಒಪಿ 1819, ಕಾಂಪ್ಲೆಕ್ಸ್‌ 3711 ಟನ್‌ ಲಭ್ಯವಿದೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಮುಂದಿನ ಮಳೆ ಪ್ರಮಾಣ ಹಾಗೂ ರೈತರ ಬೇಡಿಕೆಗೆ ಅನುಗುಣವಾಗಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಮತ್ತಷ್ಟು ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳಲಾಗುವುದು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು. ರೈತರು ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಖರೀದಿಸುವಾಗ ಕಡ್ಡಾಯವಾಗಿ ರಶೀದಿ ಪಡೆದುಕೊಳ್ಳಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

11 ಕಡೆ ರೈತ ಸಂಪರ್ಕ ಕೇಂದ್ರ
ರೈತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ 11 ರೈತ ಸಂಪರ್ಕ ಕೇಂದ್ರಗಳ ಜತೆಗೆ ಹೆಚ್ಚುವರಿಯಾಗಿ 6 ಕಡೆ ವಿತರಣಾ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದೆ. ಗದಗ ತಾಲೂಕಿನ ಮುಳಗುಂದ, ಸೊರಟೂರು, ರೋಣ ತಾಲೂಕಿನ ಬೆಳವಣಕಿ, ಗಜೇಂದ್ರಗಡ, ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಬಿತ್ತನೆ ಬೀಜಗಳ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next