Advertisement

ಮೀಸಲಾತಿಯಿಂದ ಕೆಲವರಿಗೆ ಬರಸಿಡಿಲು

09:07 PM Jul 04, 2021 | Team Udayavani |

ವೀರೇಂದ್ರ ನಾಗಲದಿನ್ನಿ

Advertisement

ಗದಗ: ಮುಂಬರುವ ಜಿಪಂ ಚುನಾವಣೆಗೆ ಸಿದ್ಧತೆ ನಡೆಸಿರುವ ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ಜಿಪಂ ಕ್ಷೇತ್ರಗಳ ಮೀಸಲಾತಿಯಿಂದ ಜಿಪಂ ಮಾಜಿ ಸದಸ್ಯರು, ಅಧ್ಯಕ್ಷ, ಉಪಾಧ್ಯಕ್ಷರಿಗೆ ಬರಸಿಡಿಲು ಬಡಿದಂತಾಗಿದೆ.

ಜಿಲ್ಲೆಯ 24 ಕ್ಷೇತ್ರಗಳ ಪೈಕಿ ಬಹುತೇಕ ಕ್ಷೇತ್ರಗಳ ಮೀಸಲಾತಿ ಬದಲಾವಣೆಯಾಗಿದ್ದು, ಬಹುತೇಕರು ಜಿಪಂಗೆ ಪುನರಾಯ್ಕೆ ಆಸೆಯನ್ನೇ ಕೈಬಿಡುವಂತಾಗಿದ್ದರೆ, ಇನ್ನಿತರರು ಕ್ಷೇತ್ರ ಹುಡುಕಾಡುವಂತಾಗಿದೆ. ಮೀಸಲಾತಿ ಸಂಕಟ: ಶತಾಯಗತಾಯ ಈ ಬಾರಿ ಜಿಪಂ ಪ್ರವೇಶಿಸಬೇ ಕೆಂದು ಕನಸು ಕಂಡವರಿಗೆ ಮೀಸಲಾತಿ ಸಂಕಟ ಎದುರಾಗಿದೆ.

ಗದಗ ಜಿಪಂ ವ್ಯಾಪ್ತಿಯ ಒಟ್ಟು 24 ಕ್ಷೇತ್ರಗಳಲ್ಲಿ 13 ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಿವೆ. ಜತೆಗೆ ಸಾಮಾನ್ಯ 12 ಸ್ಥಾನಗಳಲ್ಲಿ 6 ಕ್ಷೇತ್ರಗಳು ಮಹಿಳೆಯರ ಪಾಲಾಗಿವೆ. ಅನುಸೂಚಿತ ಜಾತಿಗೆ ಒಟ್ಟು 4 ಕ್ಷೇತ್ರಗಳು ಲಭ್ಯವಾಗಿದ್ದು, ಅದರಲ್ಲಿ 3 ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಿವೆ. ಅನುಸೂಚಿತ ಪಂಗಡದ 2 ಕ್ಷೇತ್ರಗಳಲ್ಲಿ 1ಮಹಿಳಾ ಮೀಸಲಾಗಿದೆ. ಹಿಂದುಳಿದ ವರ್ಗ “ಅ’ ಸಮುದಾಯದವರಿಗೆ 5 ಕ್ಷೇತ್ರಗಳಲ್ಲಿ 2 ಮಹಿಳೆಯರಿಗೆ ಲಭಿಸಿವೆ. ಹಿಂದುಳಿದ ವರ್ಗ “ಬ’ ಕ್ಕೆ ಸಿಕ್ಕಿರುವ ಒಂದೇ ಒಂದು ಕ್ಷೇತ್ರ ಮಹಿಳೆಗೆ ಮೀಸಲಾಗಿದೆ.

ಕ್ಷೇತ್ರ ಹುಡುಕುವ ಅನಿವಾರ್ಯತೆ: 2016-2021ರ ಜಿಪಂ ಅಧಿ ಕಾರ ಅವ ಧಿಯಲ್ಲಿ ಬಹುಮತ ಪಡೆದಿದ್ದ ಕಾಂಗ್ರೆಸ್‌ ಪಕ್ಷದಿಂದ ಐವರು ಜಿಪಂ ಅಧ್ಯಕ್ಷ-ಉಪಾಧ್ಯಕ್ಷರಾಗಿದ್ದರು. ವಾಸಣ್ಣ ಕುರಡಗಿ, ಎಸ್‌.ಪಿ.ಬಳಿಗಾರ, ಸಿದ್ದು ಪಾಟೀಲ, ರಾಜೂಗೌಡ ಕೆಂಚನಗೌಡ್ರ, ಈರಪ್ಪ ಈಶ್ವರಪ್ಪ ನಾಡಗೌಡ್ರ ಅವರು ಅಧ್ಯಕ್ಷರಾಗಿದ್ದರು. ಇದೇ ಅವಧಿ ಯಲ್ಲಿ ಕ್ರಮವಾಗಿ ರೂಪಾ ಅಂಗಡಿ, ಶಕುಂತಲಾ ರವೀಂದ್ರ ಮೂಲಿಮನಿ, ಮಲ್ಲವ್ವ ಬಿಚ್ಚಾರ, ಮಂಜಳಾ ಹುಲ್ಲಣ್ಣವರ ಅವರು ಉಪಾಧ್ಯಕ್ಷರಾಗಿದ್ದರು. ಅದರೊಂದಿಗೆ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ವಿಪಕ್ಷ ಸ್ಥಾನದಲ್ಲಿ ಗುರುತಿಸಿಕೊಂಡಿದ್ದವರಿಗೂ ಕ್ಷೇತ್ರ ಕೈತಪ್ಪಿದಂತಾಗಿದೆ. ಹೀಗಾಗಿ ಕೆಲವರು ತಮಗೆ ಅನುಕೂಲಕರವಾದ ಕ್ಷೇತ್ರಗಳತ್ತ ಪಲಾಯನ ಬಯಸಿದ್ದಾರೆ. ಇನ್ನು ಕೆಲವರು ಮಹಿಳಾ ಮೀಸಲಾತಿಯ ತಮ್ಮ ಕ್ಷೇತ್ರಗಳಿಗೆ ಕುಟುಂಬದ ಮಹಿಳಾ ಸದಸ್ಯರನ್ನು ಚುನಾವಣಾ ಅಖಾಡಕ್ಕಿಳಿಸಲು ಚಿಂತನೆ ಆರಂಭಿಸಿದ್ದಾರೆ. ಈ ಬಗ್ಗೆ ಕುಟುಂಬಸ್ಥರೊಂದಿಗೆ ಚರ್ಚೆಗಳು ಬಿರುಸಾಗಿ ಸಾಗಿವೆ ಎಂದೇ ಹೇಳಲಾಗಿದೆ.

Advertisement

ಮೀಸಲು ತಂದ ಅದೃಷ್ಟ: ಈ ಬಾರಿ ಜಿಪಂ ಚುನಾವಣೆಗೆ ಉದ್ದೇಶಿತ ಕರಡು ಮೀಸಲಾತಿ ಕೆಲವರ ಪಾಲಿಗೆ ಅದೃಷ್ಟ ಮತ್ತೂಮ್ಮೆ ಮನೆ ಬಾಗಿಲಿಗೆ ಬಂದಂತಾಗಿದೆ. ಕಳೆದ ಬಾರಿ ಹಿಂದುಳಿದ “ಬ’ ವರ್ಗಕ್ಕೆ ಮೀಸಲಾಗಿದ್ದ ಶಿಗ್ಲಿ ಜಿಪಂ ಕ್ಷೇತ್ರ ಈ ಬಾರಿ “ಸಾಮಾನ್ಯ’ವಾಗಿದೆ. ಹೆಬ್ಟಾಳ ಸಾಮಾನ್ಯ ಕ್ಷೇತ್ರ ಈಗ ಇಟಗಿ(ಹೆಬ್ಟಾಳ) ಸಾಮಾನ್ಯ ಕ್ಷೇತ್ರವಾಗಿದೆ. ಕಳೆದ ಬಾರಿ ಸಾಮಾನ್ಯ ಮಹಿಳೆಯಾಗಿದ್ದ ಬೆಳ್ಳಟ್ಟಿ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಇದು ಆಯಾ ಕ್ಷೇತ್ರದ ಪ್ರತಿನಿಧಿಗಳಿಗೆ ಅನುಕೂಲಕರವಾಗಿದ್ದರೆ, ಇನ್ನಿತರರ ಕಣ್ಣು ಕೆಂಪಾಗಿಸಿರುವುದು ಸುಳ್ಳಲ್ಲ.

Advertisement

Udayavani is now on Telegram. Click here to join our channel and stay updated with the latest news.

Next