ಗದಗ: ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಭಾರತದ ಅಧ್ಯಾತ್ಮದ ಶಕ್ತಿ ಪರಿಚಯಿಸಿದವರು ಸ್ವಾಮಿ ವಿವೇಕಾನಂದರು. ಸ್ವಾಮಿ ವಿವೇಕಾನಂದರ ವಿಶ್ವ ವಿಖ್ಯಾತ ಶಿಕಾಗೋ ಭಾಷಣ ಮಾಡಿದ ದಿನವಾದ ಸೆ. 11ರಂದು ಜಿಲ್ಲೆಯ ಗ್ರಾಮೀಣಾಭಿವೃದ್ಧಿ
ಪಂಚಾಯತ್‌ರಾಜ್ ವಿವಿ ನಾಗಾವಿ ಕ್ಯಾಂಪಸ್‌ನಲ್ಲಿ ಸ್ವಾಮಿ ವಿವೇಕಾನಂದರ 39.5 ಅಡಿ ಎತ್ತರದ ಪುತ್ಥಳಿ ಅನಾವರಣಗೊಳಿಸುವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವಿ ಕುಲಪತಿ ಡಾ| ಸುರೇಶ ನಾಡಗೌಡರ ಹೇಳಿದರು.
Advertisement
ನಗರದ ಆರ್‌ಡಿಪಿಆರ್ ವಿವಿಯ ಕೌಶಲ್ಯ ವಿಕಾಸ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ನೇಹ ಸಹೋದರತ್ವ ಭಾವನೆ ಪ್ರತೀಕ ವಿಶ್ವದ ಗಮನ ಸೆಳೆದ ಮಹಾನ್ ಚೇತನ, ಭಾರತೀಯ ಚಿಂತನ ಶೈಲಿ ಮಹತ್ವ ವಿಶ್ವಮಾನ್ಯಗೊಳಿಸಿದವರು ಸ್ವಾಮಿ ವಿವೇಕಾನಂದರು. ಇಂತಹ ಆದರ್ಶ ವ್ಯಕ್ತಿತ್ವದ ಪ್ರತಿಕೃತಿ ಸ್ಥಾಪಿಸುವುದರ ಮೂಲಕ ವಿವಿಯಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಲ್ಲಿ ವಿವೇಕಾನಂದರ ಪ್ರಸ್ತುತಿ ಪ್ರಚುರಪಡಿಸಲು ವಿಶ್ವವಿದ್ಯಾಲಯದ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಭವ್ಯ ಕಂಚಿನ ಪುತ್ಥಳಿಯನ್ನು ಕಲ್ಕತ್ತಾದ ಸ್ವಾಮಿ ವಿವೇಕಾನಂದ ರಾಮಕೃಷ್ಣ ಮಿಷನ್ ಅವರು ಒದಗಿಸಿದ್ದಾರೆ ಎಂದರು.