Advertisement

ಪೊಲೀಸ್‌ ಇಲಾಖೆ ಪರಿಸರ ಪ್ರೇಮ

04:11 PM Dec 08, 2019 | Naveen |

ಪ್ರಹ್ಲಾದಗೌಡ ಗೊಲ್ಲಗೌಡರ
ಗದಗ:
ನಗರದ ಜಿಲ್ಲಾ ಪೊಲೀಸ್‌ ಕಚೇರಿಗೆ ಪ್ರವೇಶಿಸುತ್ತಿದಂತೆ ಔಷಧಿ ಸಸ್ಯಗಳ ಪರಿಮಳ ಘಮ ಘಮಿಸುತ್ತದೆ. ಅರೇ ಇದೇನಿದು ಎಂದು ಕುತೂಹಲದಿಂದ ಸ್ವಲ್ಪ ಅತ್ತ ಸಾಗಿ ನೋಡಿದರೆ ವಿವಿಧ ಬಗೆಯ ಗಿಡಮೂಲಿಕೆಗಳ ಸಸ್ಯಗಳು ನಮ್ಮನ್ನು ಸ್ವಾಗತಿಸುತ್ತವೆ!

Advertisement

ಹೌದು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಆಸಕ್ತಿ, ಅಭಿಲಾಷೆಯಂತೆ ಇಲ್ಲಿ ಸಸ್ಯ ವನ ಸೃಷ್ಟಿಯಾಗಿದೆ. ಕಚೇರಿ ಆವರಣ ಪರಿಸರ ಸ್ನೇಹಿಯಾಗಿ ರೂಪಗೊಂಡಿದೆ. ವಿವಿಧ ಬಗೆಯ ಗಿಡ-ಮರಗಳು ತುಂಬಿ ಹಸಿರಿನಿಂದ ಕಂಗೊಳಿಸುತ್ತಿದೆ. ಎಲ್ಲಕ್ಕಿಂತಲೂ ಹೆಚ್ಚು ಗಮನ ಸೆಳೆಯುವುದು ಇಲ್ಲಿನ ಔಷಧಿ ಸಸ್ಯಗಳು.

ಕಪ್ಪತಗುಡ್ಡ ಶ್ರೇಣಿಯ ಔಷಧಿ ಸಸ್ಯಗಳನ್ನು ಇಲ್ಲಿ ಕಾಣಬಹುದು. ಜನರಿಗೆ ಔಷಧಿ ಸಸ್ಯಗಳ ಮಾಹಿತಿಗಾಗಿ ಪ್ರತಿ ಸಸ್ಯದ ಎದುರು ಅವುಗಳ ಹೆಸರುಳ್ಳ ಫಲಕ ಅಳವಡಿಸಲಾಗದೆ. ಜತೆಗೆ ಫಲಕದಲ್ಲಿ ವೈಜ್ಞಾನಿಕ ಹೆಸರನ್ನೂ ಗುರುತಿಸಲಾಗಿದೆ. ಎಸ್ಪಿ ಶ್ರೀನಾಥ ಜೋಶಿ ಅವರ ಸಲಹೆಯಂತೆ ಕಳೆದ ಐದು ತಿಂಗಳಿಂದ ಆವರಣದಲ್ಲಿ ಔಷಧಿ ಸಸ್ಯ ಬೆಳೆಯಲಾಗಿದೆ. ಪರಿಸರದ ಬಗ್ಗೆ ಸಾಕಷ್ಟು ಕಾಳಜಿ ಹಾಗೂ ಜ್ಞಾನ ಹೊಂದಿರುವ ಎಸ್ಪಿ ಶ್ರೀನಾಥ ಜೋಶಿ ಅವರು ಸ್ವತಃ ಸಸ್ಯಗಳ ಬಗ್ಗೆ ನಿಗಾವಹಿಸಿದ್ದಾರೆ. ಬಿಡುವಿನ ವೇಳೆ ಸಸ್ಯೋದ್ಯಾನಕ್ಕೆ ತೆರಳಿ ಗಿಡಗಳ ಆರೈಕೆ ಕುರಿತು ಮಾಹಿತಿ-ಸಲಹೆ ನೀಡುತ್ತಾರೆ.

ಸಸಿಗಳ ಮೇಲ್ವಿಚಾರಣೆಗೆ ಇಬ್ಬರು ಸಿಬ್ಬಂದಿ ನೇಮಿಸಲಾಗಿದ್ದು, ಅವರು ಸಸ್ಯ ಪೋಷಣೆಯಲ್ಲಿ ತೊಡಗಿದ್ದಾರೆ. ಕಪ್ಪತಗುಡ್ಡ ಹಾಗೂ ಬೇರೆ ಬೇರೆ ಪ್ರದೇಶಗಳಿಂದ ಔಷಧಿ ಸಸ್ಯಗಳನ್ನು ತಂದು ಇಲ್ಲಿ ನೆಡಲಾಗಿದೆ. ವಿವಿಧ ಬಗೆಯ ಗಿಡಮೂಲಿಕೆಗಳು ಒಂದಡೆ ಇರುವುದರಿಂದ ಇಲ್ಲಿ ಸುಗಂಧದ ಪರಿಮಳ ಸದಾ ಘಮ ಘಮಿಸುತ್ತದೆ. ಸುಮಾರು 62 ಬಗೆಯ ಔಷಧಿ ಸಸ್ಯಗಳನ್ನು ಇಲ್ಲಿ ಬೆಳೆಸಲಾಗಿದೆ.

ಅಂದಾಜು ನಾಲ್ಕು ಎಕರೆ ಪ್ರದೇಶ ವ್ಯಾಪ್ತಿಯ ಕಚೇರಿ ಸ್ಥಳದಲ್ಲಿ ಔಷಧಿ ಸಸ್ಯ ಸೇರಿದಂತೆ ಸ್ಥಳೀಯವಾಗಿ ಸಿಗುವ 150ಕ್ಕೂ ಹೆಚ್ಚು ವಿವಿಧ ಗಿಡ ಮರಗಳನ್ನೂ ಬೆಳೆಸಲಾಗಿದೆ. ಎರಡು ಕೊಳವೆಬಾವಿಯಿಂದ ನೀರುಣಿಸಲಾಗುತ್ತಿದೆ. ಸ್ಥಳೀಯವಾಗಿ ಬೆಳೆಯುವ ಹುಲ್ಲನ್ನೇ ಆವರಣದಲ್ಲಿ ಬೆಳೆಸಲಾಗಿದೆ.

Advertisement

ಪಕ್ಕದ ಕಪ್ಪತಗುಡ್ಡದ ಔಷಧಿ ಸಸ್ಯಗಳಿಗೆ ಖ್ಯಾತಿ ಪಡೆದಿದೆ. ಅಲ್ಲಿ ಸಿಗುವ ಗಿಡಮೂಲಿಕೆಗಳನ್ನು ಇಲ್ಲಿಯೂ ಬೆಳೆಸಬಹುದು ಎಂಬ ಸದುದ್ದೇಶದಿಂದ ಕಳೆದ ಐದು ತಿಂಗಳಿಂದ ಕಚೇರಿ ಆವರಣದಲ್ಲಿ ವಿವಿಧ ಬಗೆಯ ಔಷಧಿ ಸಸಿ ಬೆಳೆಸಿದ್ದೇವೆ.

ಔಷಧಿ ಸಸ್ಯಗಳು ಎಲ್ಲೆಂದರಲ್ಲಿ ಸಿಗುವುದು ತುಂಬಾ ವಿರಳ. ಅವುಗಳ ಪೋಷಣೆ ಜತೆಗೆ ಸಂರಕ್ಷಿಸುವ ಉದ್ದೇಶ ನಮ್ಮದಾಗಿದೆ ಎನ್ನುತ್ತಾರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ.

Advertisement

Udayavani is now on Telegram. Click here to join our channel and stay updated with the latest news.

Next