Advertisement

Gadag; 40 ಲಕ್ಷ ರೂ ಮೌಲ್ಯದ ಕಳ್ಳತನ ವಸ್ತುಗಳನ್ನು ಮರಳಿ ಮಾಲಿಕರಿಗೆ ಮರಳಿಸಿದ ಪೊಲೀಸ್ ಇಲಾಖೆ

01:09 PM Jan 24, 2024 | Team Udayavani |

ಗದಗ: ಜಿಲ್ಲೆಯಲ್ಲಿ ಕಳ್ಳತನವಾದ ಅಂದಾಜು 40 ಲಕ್ಷ ರೂ ಮೌಲ್ಯದ ಮೊಬೈಲ್, ಟ್ರಾಕ್ಟರ್ ಟ್ರೇಲರ್ ಹಾಗೂ ಬೈಕ್ ಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮರಳಿ ಮಾಲೀಕರಿಗೆ ಬುಧವಾರ ಹಸ್ತಾಂತರಿಸಲಾಯಿತು. ಎಡಿಜಿಪಿ ಮುರುಗನ್ ಅವರು ವಿತರಿಸಿದರು

Advertisement

ಜಿಲ್ಲೆಯಲ್ಲಿ ಕಳ್ಳತನಗೊಂಡ 35 ಲಕ್ಷ ರೂ. ಮೊತ್ತದ 210 ಮೊಬೈಲ್ ಗಳು, ಮುಂಡರಗಿ ತಾಲೂಕಿನ ಡಂಬಳ, ಕಲಕೇರಿ ಹಾಗೂ ಮೇವುಂಡಿ ಗ್ರಾಮದ 6 ಲಕ್ಷ ರೂ. ಮೊತ್ತದ ಮೂರು ಟ್ರ್ಯಾಕ್ಟರ್ ಟ್ರೈಲರ್ ಗಳು, ರೋಣ ಪೊಲೀಸ್ ಠಾಣೆಯ ವ್ಯಾಪ್ತಿಯ 3,45,000 ಮೌಲ್ಯದ 10 ಬೈಕ್ ಗಳು ಹಾಗೂ ಗದಗ ಗ್ರಾಮೀಣ ಠಾಣೆಯ ವ್ಯಾಪ್ತಿಯ ಹುಲಕೋಟಿ ಗ್ರಾಮದ ಹನಮಂತಗೌಡ ಮೂಗನೂರ ಅವರ ಮನೆಕಳ್ಳತನ ಪ್ರಕರಣವನ್ನು ಬೇಧಿಸಿ ವಶಪಡಿಸಿಕೊಂಡ 1.12 ಲಕ್ಷ ರೂ. ಮೊತ್ತದ ಬಂಗಾರ, ಬೆಳ್ಳಿ ಆಭರಣಗಳನ್ನು ಮರಳಿ ಮಾಲೀಕರಿಗೆ ಹಸ್ತಾಂತರಿಸಲಾಯಿತು.

ಎಡಿಜಿಪಿ ಮುರುಗನ್ ಮಾತನಾಡಿ, ಸಿಇಐಆರ್ ತಂತ್ರಾಂಶ ಉಪಯೋಗಿಸಿಕೊಂಡು ಕಳುವಾಗಿರುವ ಮೊಬೈಲ್ ಪೋನ್ ಗಳನ್ನು ಪತ್ತೆ ಮಾಡುವಲ್ಲಿ ಪೊಲೀಸ್ ಇಲಾಖೆ ಅತ್ಯಂತ ಯಶಸ್ವಿಯಾಗಿದೆ. ಈ ತಂತ್ರಾಂಶ ಬಳಸಿಕೊಂಡು ಕಳ್ಳತನವಾಗಿರುವ ಮೊಬೈಲ್ ಗಳನ್ನು ವಶಪಡಿಸಿಕೊಂಡ ಪ್ರಕರಣಗಳ ಪೈಕಿ ರಾಜ್ಯದಲ್ಲಿ ಬೆಂಗಳೂರು ನಂತರ ಗದಗ ಎರಡನೇ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಜಿಲ್ಲಾ ಪೊಲೀಸರ ಸತತ ಪ್ರಯತ್ನದ ಫಲವಾಗಿ ಮಾಲೀಕರಿಗೆ ಮೊಬೈಲ್ ಫೋನ್ ಗಳನ್ನು, ಟ್ರ್ಯಾಕ್ಟರ್ ಟ್ರೇಲರ್ ಗಳನ್ನು ಹಾಗೂ ದ್ವಿಚಕ್ರ ವಾಹನಗಳನ್ನು ಮರಳಿ ನೀಡಲಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸೇರಿ ಇಲಾಖೆಯಿಂದ ಉತ್ತಮ ಕೆಲಸಗಳಾಗುತ್ತಿವೆ. ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳನ್ನು ಅಭಿನಂದಿಸಿದರು.

ಉತ್ತರ ವಲಯದ ಐಜಿಜಿ ವಿಕಾಸಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಹೆಚ್ಚುವರಿ ಎಸ್ಪಿ ಎಂ.ಬಿ. ಸಂಕದ ಸೇರಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next