Advertisement

Gadag; ಯಶಸ್ಸು ಸಾಧಿಸಲು ಸತತ ಪ್ರಯತ್ನ ಅಗತ್ಯ:  ಬಸವರಾಜ ಹೊರಟ್ಟಿ

05:22 PM Feb 03, 2024 | Team Udayavani |

ಗದಗ: ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಅತೀ ಅವಶ್ಯ. ಸಂಸ್ಕಾರವಂತ ಯವಕರ ಕೊರತೆ ಸಮಾಜವನ್ನು ಕಾಡುತ್ತಿದ್ದು ಮಕ್ಕಳಿಗೆ ಪಠ್ಯ ಪುಸ್ತಕಗಳ ಬೋಧನೆ ಜೊತೆಗೆ ನೈತಿಕ ಶಿಕ್ಷಣವನ್ನು ಬೋಧಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಶಿಕ್ಷಕರಿಗೆ ಸಲಹೆ ನೀಡಿದರು.

Advertisement

ತಾಲೂಕಿನ ಹುಲಕೋಟಿಯ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನಲ್ಲಿ ಕರ್ನಾಟಕ ಪತ್ರಗಾರ ಇಲಾಖೆ ಹಾಗೂ ಕೆ.ಎಚ್.ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜು  ಸಹಯೋಗದಲ್ಲಿ ಶನಿವಾರ ಜರುಗಿದ ಕರ್ನಾಟಕ ಏಕೀಕರಣ ಚಳುವಳಿ  ಹಾಗೂ ವಿಚಾರ ಸಂಕೀರಣ ಉದ್ಘಾಟಿಸಿ ಅವರು ಮತನಾಡಿದರು.

ತಂದೆ ತಾಯಿಗಳು ತಮ್ಮ ಸರ್ವಸ್ವವನ್ನು ತ್ಯಜಿಸಿ ಮಕ್ಕಳ ಭವಿಷ್ಯ ರೂಪಿಸಲು ಬದುಕಿನ ಬಂಡಿ ದೂಡುತ್ತಾರೆ. ಅವರ ಆಶಯಕ್ಕೆ ಧಕ್ಕೆ ಬಾರದಂತೆ ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಂಡು ಹೆತ್ತವರ ಹೆಸರು ತರಬೇಕು. ಕಳೆದುಕೊಂಡ ನಂತರ ಹುಡುಕುವುದು ಕಷ್ಟ. ಅದಕ್ಕೂ ಮುಂಚೆಯೇ ಎಚ್ಚರ ವಹಿಸಿಕೊಳ್ಳಬೇಕು. ಸುಶಿಕ್ಷಿತರಾಗಿ ಉತ್ತಮ ಜೀವನ ತಮ್ಮದಾಗಿಸಿಕೊಳ್ಳಬೇಕು. ಯಶಸ್ಸು ಸಾಧಿಸಲು ಸತತ ಪ್ರಯತ್ನ ಅಗತ್ಯವಿದೆ. ಕಾಲ ಬದಲಾದಂತೆ ಶೈಕ್ಷಣಿಕ ವ್ಯವಸ್ಥೆಯು ಬದಲಾಗುತ್ತಿದೆ. ಬದಲಾವಣೆ ಮಧ್ಯೆಯು ಮಕ್ಕಳು ಪಾಲಕರಿಗೆ, ಪೋಷಕರಿಗೆ, ಕಲಿಸಿದ ಗುರುಗಳಿಗೆ ಗೌರವ ನೀಡುವದರ ಜೊತೆಗೆ ಹುಟ್ಟಿದ ಊರು, ಕಷ್ಟ ಕಾಲದಲ್ಲಿ ಸಹಾಯವಾದವರನ್ನು ಎಂದೂ ಮರೆಯಬಾರದು ಎಂದು ಹೇಳಿದರು.

ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಅನೇಕ ಮಹನೀಯರು ಹೋರಾಟ ಮಾಡಿದ್ದಾರೆ. ಅದರಲ್ಲಿ ಗದಗ ಜಿಲ್ಲೆಯ ಪಾತ್ರ ಬಹು ಪ್ರಮುಖವಾಗಿದೆ. ಪತ್ರಗಾರ ಇಲಾಖೆಯು ಮಹತ್ವದ ದಾಖಲೆಗಳನ್ನು ಪ್ರದರ್ಶನಕ್ಕೆ ಇಟ್ಟಿದೆ. ವಿಧ್ಯಾರ್ಥಿಗಳು ದಾಖಲೆಗಳ ಬಗ್ಗೆ ಅರಿತುಕೊಂಡು ಜ್ಞಾನ ಬೆಳೆಸಿಕೊಳ್ಳುವದರ ಮೂಲಕ ಸಧೃಡ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗುವಂತೆ ಬಸವರಾಜ ಹೊರಟ್ಟಿ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next