Advertisement

ಗದಗ: ಮಾದರಿಯಾಗಲಿ ಸೈನಿಕ ಸಮುದಾಯ ಭವನ

06:25 PM Mar 25, 2023 | Team Udayavani |

ಗದಗ: ಸೈನಿಕ ಸಮುದಾಯ ಭವನ ಮಾದರಿಯಾಗಲಿ. ಸೈನಿಕರಾಗಲಿಚ್ಛಿಸುವ ಯುವ ಜನಾಂಗಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ದೇಶಾಭಿಮಾನ ಸ್ಪುರಿಸುವ ನಿಟ್ಟಿನಲ್ಲಿ ಈ ತರಬೇತಿ ಕೇಂದ್ರ ಸದುಪಯೋಗವಾಗಲಿ ಎಂದು ಶಾಸಕ ಎಚ್‌.ಕೆ. ಪಾಟೀಲ ಹೇಳಿದರು.

Advertisement

ತಾಲೂಕಿನ ಕಳಸಾಪೂರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಆದಿತ್ಯ ನಗರದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದಿಂದ ನಿರ್ಮಾಣಗೊಳ್ಳಲಿರುವ ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗದಗ ಜಿಲ್ಲಾ ಮಾಜಿ ಸೈನಿಕರ ಸಂಘ ಗದಗ ಜಿಲ್ಲೆಯಲ್ಲಿ ಅತ್ಯಂತ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಹಲವಾರು ರಚನಾತ್ಮಕ ಕಾರ್ಯಗಳ ಮೂಲಕ ಜನಮನ ಸೆಳೆದಿದೆ. ಇದೀಗ ಇನ್ನೊಂದು ಹೆಜೆc ಮುಂದೆ ಹೋಗಿ ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಅಭಿನಂದನೀಯ ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಮಾತನಾಡಿ, ನೂತನವಾಗಿ ನಿರ್ಮಾಣಗೊಳ್ಳಲಿರುವ ಈ ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರ ಸುಸಜ್ಜಿತವಾಗಿ ಶೀಘ್ರವಾಗಿ ನಿರ್ಮಾಣಗೊಳ್ಳಲಿ. ಈ ಕೇಂದ್ರದಿಂದ ಮಾಜಿ ಸೈನಿಕರಿಂದ, ಹಿರಿಯ ಅಧಿಕಾರಿಗಳಿಂದ ಯುವ ಜನಾಂಗಕ್ಕೆ ಮಾರ್ಗದರ್ಶಿ ತರಬೇತಿ ನಡೆಯಲಿ. ಸೈನ್ಯಕ್ಕೆ ಸೇರಲಿಚ್ಛಿಸುವ ಯುವಕ, ಯುವತಿಯರಿಗೆ ಸೂಕ್ತ ತಿಳಿವಳಿಕೆ, ತರಬೇತಿ ನೀಡುವಂತಾಗಲಿ ಎಂದರು.

ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಪ್ಪ ಪಲ್ಲೇದ ಮಾತನಾಡಿ, ಪ್ರಾಧಿಕಾರದಿಂದ ಕಳಸಾಪೂರ ಗ್ರಾಪಂ ವ್ಯಾಪ್ತಿಯಲ್ಲಿ ಲೇಔಟ್‌ಗಳನ್ನು ನಿರ್ಮಾಣ ಮಾಡುತ್ತಿದ್ದು, ಜಮೀನಾªರರು ಸಹಕಾರ ನೀಡಬೇಕು. ಈ ಮೂಲಕ ಅಭಿವೃದ್ಧಿ ಕಾರ್ಯ, ಅಭಿವೃದ್ಧಿಗೆ ಪೂರಕವಾಗಿರುವ ಕಟ್ಟಡಗಳ ನಿರ್ಮಾಣಕ್ಕೆ ಸಹಕಾರ ನೀಡಬೇಕೆಂದರು.ಮಲ್ಲಸಮುದ್ರ ಹಿರೇ ಮಠದ ಫಕೀರೇಶ್ವರ ಪಟ್ಟಾಧ್ಯಕ್ಷರು ಸಾನ್ನಿಧ್ಯ ವಹಿಸಿ ಮಾತನಾಡಿ, ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರ ನಿರ್ಮಾಣಗೊಳ್ಳುತ್ತಿರುವುದು ಬಹು ವರ್ಷದ ಕನಸು, ಬೇಡಿಕೆ ಈಡೇರಿದಂತಾಗಿದೆ. ಈ ಕಾರ್ಯಕ್ಕೆ ಶ್ರಮಿಸಿದವರು ಅಭಿನಂದನಾರ್ಹರು ಎಂದರು.

Advertisement

ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗೂಳಯ್ಯ ಮಾಲಗಿತ್ತಿಮಠ ಅಧ್ಯಕ್ಷತೆ ವಹಿಸಿದ್ದರು. ಪಿ.ವಿ. ಕೊರಗಲ್ಲಮಠ, ಕಳಸಾಪೂರ ಗ್ರಾಪಂ ಅಧ್ಯಕ್ಷೆ ರತ್ನಾ ನಾಯ್ಕರ್‌, ಸದಸ್ಯ ಕಿರಣಕುಮಾರ ಕೋಪರ್ಡೆ, ಅಭಿವೃದ್ಧಿ ಅಧಿ ಕಾರಿ ಕೊಟ್ರೇಶ ಓಲಿ, ಮುಖಂಡರಾದ ಜೆ.ಸಿ. ರೇಶ್ಮಿ, ಅಂದಾನಪ್ಪ ಯರಗೇರಿ, ಎಚ್‌.ವಿ. ಬೆಟಗೇರಿ ಇದ್ದರು. ಜಯಶ್ರೀ ಪೀನಾಕಿಮಠ ಪ್ರಾರ್ಥಿಸಿದರು. ಎ.ಎಂ. ತಹಶೀಲ್ದಾರ್‌ ಸ್ವಾಗತಿಸಿದರು. ಸು ಧೀರಸಿಂಗ್‌ ಘೋರ್ಪಡೆ ನಿರೂಪಿಸಿದರು. ಎಸ್‌.ಆರ್‌. ಪಾಟೀಲ ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next