Advertisement
2023-24ರಲ್ಲಿ ವರ್ಷದಲ್ಲಿ ರೋಣ ತಾಲೂಕು ಪಂಚಾಯತಿ 24 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 6,43,733 ಮಾನವ ದಿನಗಳನ್ನು ಸೃಜಿಸುವ ಮೂಲಕ 1880.05 ಲಕ್ಷ ರೂ. ಆರ್ಥಿಕ ಪ್ರಗತಿ ಸಾಧನೆ ಮಾಡಿರುವುದು ಕೂಡ ರಾಜ್ಯ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿದೆ.
ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 100 ದಿನಗಳ ಕೆಲಸ ಪಡೆಯುವ ಹಕ್ಕು ನೀಡುವುದಷ್ಟೇ ಅಲ್ಲದೇ, ಸಾಕಷ್ಟು ರೈತರಿಗೆ ತಮ್ಮದೇ ಜಮೀನಿನಲ್ಲಿ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಉತ್ತೇಜಿಸುವ ಕೆಲಸಗಳನ್ನು ಮಾಡಿಕೊಂಡು ಅವರ ಜಮೀನಿನ ಉತ್ಪಾದಕತೆ ಹೆಚ್ಚಿಸಿ, ಕುಟುಂಬದ ಜೀವನೋಪಾಯ ಮಾರ್ಗಗಳನ್ನು ಬಲಪಡಿಸಲು ಸಹ ನರೇಗಾ ಯೋಜನೆ ಸಹಕಾರಿಯಾಗಿದೆ. ರೋಣ ತಾಲೂಕಿನ 24 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ದನದ ಕೊಟ್ಟಿಗೆ, ಬಚ್ಚಲು ಗುಂಡಿ, ಕೋಳಿ ಶೆಡ್, ಕುರಿ ಶೆಡ್, ಕೃಷಿ ಬಾವಿ, ಕೃಷಿ ಹೊಂಡ, ಕಲ್ಯಾಣಿಗಳ ಪುನಃಶ್ಚೇತನ, ಅರಣ್ಯೀಕರಣ ಸೇರಿದಂತೆ ಕಾಮಗಾರಿಗಳನ್ನು ಅನುಷ್ಠಾನಕ್ಕೆ ಕ್ರಿಯಾ ಯೋಜನೆ ಮಾಡಲಾಗಿದೆ.
Related Articles
Advertisement
ರೋಣ ತಾಲೂಕಿನ ಆರ್ಥಿಕ ವರ್ಷ ಮಾನವ ದಿನ ಸೃಜನೆ2019-20ನೇ ಸಾಲಿನಲ್ಲಿ 8,85,737
2020-21ನೇ ಸಾಲಿನಲ್ಲಿ 6,11,574
2021-22ನೇ ಸಾಲಿನಲ್ಲಿ 9,29,521
2022-23ನೇ ಸಾಲಿನಲ್ಲಿ 4,98,878
2023-24ನೇ ಸಾಲಿನಲ್ಲಿ ಈವರೆಗೆ 6,43,733 ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ಸಾಧನೆ ಮಾಡಿದೆ. ನರೇಗಾ ಯೋಜನೆಯ ಅರ್ಹ ಫಲಾನುಭವಿಗಳು
ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಬಡತನ ರೇಖೆ ಕೆಳಮಟ್ಟದಲ್ಲಿ ಇರುವ ಇತರೆ ಕುಟುಂಬಗಳು ಸ್ತ್ರೀ ಪ್ರಧಾನ ಕುಟುಂಬಗಳು
ಭೂ-ಸುಧಾರಣಾ ಫಲಾನುಭವಿಗಳು ಇಂದಿರಾ ಆವಾಸ್ ಯೋಜನೆಯ ಫಲಾನುಭವಿಗಳು ಅರಣ್ಯ ಹಕ್ಕು ಕಾಯ್ದೆಯ ಫಲಾನುಭವಿಗಳು ವಿಕಲಚೇತನ ಪ್ರಧಾನ ಕುಟುಂಬಗಳು ಬುಡಕಟ್ಟು ಹಾಗೂ ಅಲೆಮಾರಿ ಜನಗಳು ಸಣ್ಣ ಮತ್ತು ಅತೀ ಸಣ್ಣ ರೈತರು. ಗ್ರಾಮೀಣ ಭಾಗದ ಕೂಲಿಕಾರರಿಗೆ ನರೇಗಾ ಯೋಜನೆಯಡಿ ಪ್ರತಿದಿನ ಹೆಣ್ಣು ಮತ್ತು ಗಂಡಿಗೆ ಸಮಾನವಾಗಿ 316 ರೂ. ಕೂಲಿ
ನೀಡಲಾಗುತ್ತಿದೆ. 2023-24ರಲ್ಲಿ ಎರಡೇ ತಿಂಗಳಲ್ಲಿ ರೋಣ ತಾಪಂ ನಿಗದಿತ ಗುರಿ ಸಾ ಧಿಸಿದ್ದು ಶ್ಲಾಘನೀಯ. ರೋಣ ನರೇಗಾ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
ಡಾ| ಸುಶೀಲಾ ಬಿ., ಜಿಪಂ ಸಿಇಒ, ಗದಗ ಮೊದಲ ದಿನದಿಂದಲೇ ರೋಣ ತಾಲೂಕಿನ ನರೇಗಾ ಸಿಬ್ಬಂದಿ ಆರ್ಥಿಕ ವರ್ಷದಲ್ಲಿ ಉತ್ತಮ ಪ್ರಗತಿ ಸಾಧಿಸುವ ಗುರಿ ಹೊಂದಿದ್ದರು. ಹಾಗಾಗಿ, ಅವರು ಬೇಗ ಗುರಿ ಸಾಧಿಸಿದ್ದಾರೆ.
ಬಸವರಾಜ ಅಡವಿಮಠ,
ಉಪ-ಕಾರ್ಯದರ್ಶಿ, ಜಿಪಂ, ಗದಗ *ಅರುಣಕುಮಾರ ಹಿರೇಮಠ