Advertisement

ಗದಗ: ಭೀಷ್ಮ ಕೆರೆಗೆ ಸಚಿವ ಎಚ್‌.ಕೆ. ಪಾಟೀಲ ಬಾಗಿನ ಅರ್ಪಣೆ

02:59 PM Nov 04, 2024 | Team Udayavani |

■ ಉದಯವಾಣ ಸಮಾಚಾರ
ಗದಗ: ನಗರದ ಭೀಷ್ಮ ಕೆರೆಯಿಂದ ನಗರದ ಸೌಂದರ್ಯ ಜತೆಗೆ ನಗರದ ಅಂತರ್ಜಲ ಹೆಚ್ಚಾಗಿ ಜನರಿಗೆ ನೆಮ್ಮದಿ ತಂದಿದೆ ಎಂದು
ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

Advertisement

ಜಿಲ್ಲಾಡಳಿತ, ನಗರಸಭೆ ಸಂಯುಕ್ತ ಆಶ್ರಯದಲ್ಲಿ ರವಿವಾರ ನಗರದ ಭೀಷ್ಮ ಕೆರೆ ದಂಡೆಯ ಮೇಲೆ ಏರ್ಪಡಿಸಿದ್ದ ಭೀಷ್ಮ ಕೆರೆಯ
ಗಂಗಾ ಪೂಜೆ ನೆರವೇರಿಸಿ ಹಾಗೂ ಬಾಗಿನ ಅರ್ಪಿಸಿ ಮಾತನಾಡಿದ ಅವರು,ಭೀಷ್ಮ ಕೆರೆಯ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆ
ಕಾರ್ಯಕ್ರಮದಲ್ಲಿ ಸರ್ವಧರ್ಮ ಪೂಜ್ಯರು ಪಾಲ್ಗೊಂಡಿದ್ದರಿಂದ ಪೂಜೆಯ ವಿಶೇಷತೆ ಹೆಚ್ಚಾಗಿದೆ. ಗದಗಿನ ಅಂತರ್ಜಲ ಹೆಚ್ಚಿಸಿರುವ ಜಲ ಸಂಗ್ರಹ ಎಲ್ಲರಿಗೂ ಸಮಾಧಾನ, ನೆಮ್ಮದಿ, ಅನುಕೂಲ ಒದಗಿಸಿದೆ ಎಂದರು.

70 ಕಿಲೋ ಮೀಟರ್‌ ದೂರದ ತುಂಗಭದ್ರ ನದಿಯಿಂದ ನೀರನ್ನು ತಂದು ಭೀಷ್ಮ ಕೆರೆ ತುಂಬಿಸಿ ಈ ಪ್ರದೇಶದ ಜನರಿಗೆ ಅನುಕೂಲ
ಕಲ್ಪಿಸಲಾಗಿದೆ. ಹೀಗಾಗಿ ಬಾಗಿನ ಅರ್ಪಿಸಿದ್ದೇವೆ. ಹೀಗೆ ಸದಾಕಾಲ ಭೀಷ್ಮ ಕೆರೆ ತುಂಬಿ ನಗರದ ಜನರಿಗೆ ಆಶೀರ್ವಾದ ನೀಡಲಿ ಎಂದು ಪಾರ್ಥಿಸಿದರು.

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಪುತ್ಥಳಿ ಉಪಸ್ಥಿತಿ ಮೂಲಕ ಈ ಭೀಷ್ಮ ಕೆರೆ ಸೌಂದರ್ಯದಿಂದ, ಆಧ್ಯಾತ್ಮ ದಿಂದ, ಮನಶಾಂತಿ ದೃಷ್ಟಿಯಿಂದ ಈ ಪ್ರದೇಶದ ಮಹತ್ವ ಹೆಚ್ಚಾಗಿದೆ ಎಂದರು.

ಡಾ|ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ನೀರು ಮನುಷ್ಯ ನಿಗೆ ಅತ್ಯಂತ ಮುಖ್ಯ. ಪಂಚಭೂತಗಳಾದ ಅಗ್ನಿ, ಭೂಮಿ, ವಾಯು, ಆಕಾಶ, ನೀರಿನಿಂದ ಮಾನವ ಶರೀರ ನಿರ್ಮಿತವಾಗಿದ್ದನ್ನು ನಮ್ಮ ಹಿರಿಯರು ಗಮನಿಸಿ ಪಂಚಭೂತಗಳಿಗೆ ಪ್ರಾರಂಭದಿಂದಲೂ ಗೌರವ ನೀಡಿದ್ದಾರೆ ಎಂದರು.

Advertisement

ವಿವಿಧ ಧರ್ಮ ಗುರುಗಳು, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ,ಕೆಡಿಪಿ ಸದಸ್ಯ ಡಿ.ಆರ್‌. ಪಾಟೀಲ, ಜಿಲ್ಲಾ ಗ್ಯಾರಂಟಿ
ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಬಿ.ಬಿ.ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಎಸ್‌. ಎನ್‌. ಬಳ್ಳಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌. ನೇಮಗೌಡ ಸೇರಿದಂತೆ ಹಲವರು ಹಾಜರಿದ್ದರು. ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ಮಹೇಶ ಪೊತದಾರ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next