Advertisement
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಆನಂದ ಕೆ. ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯ ಮತ್ತಿತರ ಇಲಾಖೆಗಳ ಅಧಿಕಾರಿಗಳು ಇದ್ದರು.
ಗಣೇಶ ಕೊಡಕೇರಿ, ಗ್ರಾಮ ಲೆಕ್ಕಾಧಿಕಾರಿ ಶಬ್ಬೀರ ನಿಶಾನದಾರ, ಉಮೇಶ ಅರಳಿಗಿಡದ, ಆರ್.ಎಸ್. ಜಯರಾಮ್, ಎಸ್.ಕೆ. ಗೌಡರ, ಸಾವಿತ್ರಿಬಾಯಿ ಕುಂದಗೋಳ, ರಾಜೇಶ್ವರಿ ಶೆಟ್ಟಿ, ವೈಭವಿ, ಶಾಹೀನ ಗುರಿಕಾರ, ಕಳಕಪ್ಪ ಸ್ವಾಮಿ ಇತರರಿದ್ದರು. ಬಿಎಎಂಎಸ್ ಕಾಲೇಜಿನಲ್ಲಿ: ಪಟ್ಟಣದ ಭಗವಾನ್ ಮಹಾವೀರ ಜೈನ್ ಆಯುರ್ವೇದಿಕ ಮೆಡಿಕಲ್ ಕಾಲೇಜಿನಲ್ಲಿ 24ನೇ ತೀರ್ಥಂಕ ಮಹಾವೀರರ 2618ನೇ ಜಯಂತ್ಯುತ್ಸವ ಆಚರಿಸಲಾಯಿತು. ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ದೇವಿಚಂದ ಪಾರಸಮಲ್ಲಜಿ ಜೈನ ಕುಟುಂಬದ ವತಿಯಿಂದ ಮಹಾವೀರ ಜಯಂತಿಯ ಅಂಗವಾಗಿ ನಿರ್ಗತಿಕ ಕುಟುಂಬಳಿಗೆ ಉಪಹಾರ ವಿತರಿಸಲಾಯಿತು.
Related Articles
Advertisement
ಗ್ರಾಪಂ ಉಪಾದ್ಯಕ್ಷರಾದ ರಮೇಶ ನಿರ್ವಾಣಶೆಟ್ಟರ, ಸದಸ್ಯರಾದ ಮೋಹನ ಗುತ್ತೆಮ್ಮನವರ, ಕೊಟ್ರೇಶ ಸಜ್ಜನರ ಹಾಗೂ ದೇವಿಚಂದ ಜೈನ ಕುಟುಂಬದವರಿದ್ದರು. ಮುಂಡರಗಿ: ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಮಹಾವೀರ ಜಯಂತಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ತಹಶೀಲ್ದಾರ್ ಡಾ| ವೆಂಕಟೇಶ ನಾಯಕ ಮಹಾವೀರರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದರು. ಎಸ್.ಎಸ್. ಬಿಚ್ಚಾಲಿ, ಲಿಂಗರಾಜಗೌಡ ಪಾಟೀಲ, ಪವನ ಛೋಪ್ರಾ, ಅಡಿವೆಪ್ಪ ಛಲವಾದಿ, ಪ್ರಕಾಶ ಅಳವಂಡಿ, ಮಂಜುನಾಥ ಮುಧೋಳ, ಸಿದ್ದು ದೇಸಾಯಿ ಇತರರಿದ್ದರು.
ಮುಳಗುಂದ: ಪಟ್ಟಣ ಪಂಚಾಯತ್ ನಲ್ಲಿ ಮಹಾವೀರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಾಗರಾಜ ದೇಶಪಾಂಡೆ, ಷಣ್ಮುಖಪ್ಪ ಬಡ್ನಿ, ಬಸವರಾಜ ಹಾರೋಗೇರಿ, ವಿ.ಎಸ್.ನೀಲಗುಂದ, ಎಂ.ಎಸ್. ಬೆಂತೂರ ಸೇರಿದಂತೆ ಇತರರು ಭಾಗವಹಿಸಿದ್ದರು.