ಗದಗ: ದೇಶ ಕಟ್ಟುವ, ಸೃಜನಶೀಲ ಸಮಾಜ ನಿರ್ಮಿಸುವ, ಮಾನವೀಯ ಮೌಲ್ಯಗಳಿಗೆ ಮನ್ನಣೆ ನೀಡುವ ಶಿಷ್ಯರನ್ನು ಅರ್ಪಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಿ ಸೇವಾ ನಿವೃತ್ತರಾಗುತ್ತಿರುವ ಪ್ರಾಚಾರ್ಯ ಡಾ| ಎಸ್.ಎಫ್.
ಸಿದೆ°ಕೊಪ್ಪ ಅವರ ಕಾರ್ಯ ಪ್ರಶಂಸನೀಯ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
Advertisement
ತಾಲೂಕಿನ ನಾಗಸಮುದ್ರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ಡಾ| ಎಸ್.ಎಫ್. ಸಿದೆ°ಕೊಪ್ಪ ಹೃದಯಸ್ಪರ್ಶಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ಶಿಕ್ಷಕರು ತಮ್ಮ ತ್ಯಾಗ ಮತ್ತು ಸಮರ್ಪಣಾ ಮನೋಭಾವದಿಂದಲೇ ತಮ್ಮ ಶಿಷ್ಯರ ಮನಃ ಪಟಲದಲ್ಲಿ ಸದಾ ಕಾಲ ನಿಲ್ಲುತ್ತಾರೆ. ಇವತ್ತು ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ನಿರ್ಮಾಣ ಶಿಕ್ಷಕರಿಂದಲೇ ಸಾಧ್ಯ. ಆ ಹಿನ್ನೆಲೆಯಲ್ಲಿ ಶ್ರಮಿಸಿರುವ ಸಿದೆ°àಕೊಪ್ಪ ದೀರ್ಘ ಸೇವೆ ಜನಮಾನಸದಲ್ಲಿ ನೆಲೆ ನಿಲ್ಲುವಂತಹದು ಎಂದರು.
Related Articles
Advertisement
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರಕಾಶ ಹೊಸಮನಿ, ಪ್ರಾಚಾರ್ಯ ಖಲೀಲ ಅಹ್ಮದ್ ಚಿಕ್ಕೇರೂರ, ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಾಬರ್ಜಿ, ಜಿಲ್ಲಾ ನೋಂದಣಾಧಿಕಾರಿ ಶಿವಕುಮಾರ ಅಪರಂಜಿ, ಪ್ರಾಚಾರ್ಯ ಶಿವಪ್ಪ ಕುರಿ, ಪ್ರಾಚಾರ್ಯ ಎಂ.ಯು. ಹಿರೇಮಠ, ಡಾ| ಅಪ್ಪಣ್ಣ ಹಂಜೆ, ಡಾ| ರಮೇಶ ಕಲ್ಲನಗೌಡರ, ಕಾಲೇಜು ಸಮಿತಿ ಸದಸ್ಯ ಆರ್.ಎಚ್. ಏಕಬೋಟೆ, ಶಂಕರಸಿಂಗ್ ರಜಪೂತ ಇದ್ದರು.