Advertisement

Gadag; ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 4 ಜೋಡಿಗಳು ಲೋಕ ಅದಾಲತ್ ನಲ್ಲಿ ಒಂದಾದರು

04:33 PM Jul 13, 2024 | Team Udayavani |

ಗದಗ: ಜಿಲ್ಲೆಯಲ್ಲಿ ಶನಿವಾರ ನಡೆದ ಲೋಕ ಅದಾಲತ್ ನಲ್ಲಿ ವಿವಿಧ ಕಾರಣಗಳಿಂದ ಬೇರ್ಪಟ್ಟಿದ್ದ ನಾಲ್ಕು ವಿವಾಹಿತ ಜೋಡಿಗಳನ್ನು ರಾಜಿ ಸಂಧಾನದ ಮೂಲಕ ಒಂದುಗೂಡಿಸಿ, ಮುಂದೆ ಕೋರ್ಟ್ ಮೆಟ್ಟಿಲೇರದಂತೆ ಬುದ್ದಿವಾದ ಹೇಳಿದ ಘಟನೆ ನಗರದ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯಿತು.

Advertisement

ಸಮಸ್ಯೆಗಳನ್ನು ಪರಿಹರಿಸಿಕೊಂಡು ಒಂದಾದ ಜೋಡಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು, ಸಿಹಿ ತಿನ್ನಿಸುವ ಮೂಲಕ ಒಂದಾದರು. ಜಿಲ್ಲಾ, ಕೌಟುಂಬಿಕ ಹಾಗೂ ನ್ಯಾಯಾಧೀಶರು ಒಂದಾದ ಜೋಡಿಗಳಿಗೆ ಪುಷ್ಪ ಹಾಕುವ ಮೂಲಕ ಒಂದಾಗಿ ಬಾಳುವಂತೆ ಹಾರೈಸಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ, ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡರ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀರರಾದ ಕಾಶಿಂ ಚುರಿಖಾನ, ಖಾದರಸಾಬ್ ಬೆನಕಟ್ಟಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಂ.ಐ. ಹಿರೇಮನಿಪಾಟೀಲ ಸೇರಿ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next