Advertisement
ಬೆಟಗೇರಿಯ ಹೆಲ್ತ್ ಕ್ಯಾಂಪ್‌ನಲ್ಲಿ 10 ಮೀಟರ್ ವ್ಯಾಸ, 15 ಡಿಗ್ರಿ ಕೋನದಲ್ಲಿ ಇರಿಸಲ್ಪಟ್ಟ ಡೋಮ್ (ಗುಮ್ಮಟ)ಆಕೃತಿಯಲ್ಲಿ ನಿರ್ಮಾಣಗೊಂಡಿರುವ ಡಿಜಿಟಲ್ ಆ್ಯಕ್ಟಿವ್ 3ಡಿ ತಾರಾಲಯ ವಿಶಿಷ್ಟವಾಗಿದ್ದು, ಪ್ರದರ್ಶನಗಳು ವೀಕ್ಷಕರಿಗೆ ನೈಜ ಅನುಭವ ನೀಡಲಿವೆ. ಆಕಾಶಕಾಯಗಳು, ಮೋಡಗಳು ಹಾಗೂ ನಿಹಾರಿಕೆಗಳ ಚಲನವಲಗಳನ್ನು 3ಡಿ ಎಫೆಕ್ಟ್‌ನಲ್ಲಿ ವೀಕ್ಷಿಸಬಹುದಾಗಿದ್ದು, ಆಧುನಿಕ ಮತ್ತು ಐತಿಹಾಸಿಕ ಬಾಹ್ಯಾಕಾಶ ನೌಕೆ, ಧೂಮಕೇತುಗಳು, ಕ್ಷುದ್ರ ಗ್ರಹಗಳು, ಗ್ಯಾಲಕ್ಸಿಗಳನ್ನು ಅತೀ ಸಮೀಪದಿಂದ ಕಣ್ತುಂಬಿಕೊಳ್ಳಬಹುದಾಗಿದೆ.
Related Articles
Advertisement
65 ಆಸನ ವ್ಯವಸ್ಥೆ: ಹವಾ ನಿಯಂತ್ರಿತ ಡಿಜಿಟಲ್ ಆ್ಯಕ್ಟಿವ್ 3ಡಿ ತಾರಾಲಯ 65 ಆಸನಗಳನ್ನು ಹೊಂದಿದ್ದು, ಅರ್ಧ ಗಂಟೆ ಅವ ಧಿಯ ದೃಶ್ಯಾವಳಿಗಳನ್ನು ಒಂದು ಅವಧಿಯಲ್ಲಿ 65 ಜನರು ವೀಕ್ಷಿಸಬಹುದಾಗಿದೆ. ಪ್ರತಿಯೊಬ್ಬರಿಗೂ ಆ್ಯಕ್ಟಿವ್ 3ಡಿ ಗ್ಲಾಸ್ ಲಭ್ಯವಿದ್ದು, ದೃಶ್ಯಾವಳಿಗಳ ಜೊತೆಗೆ ಸಾಗಿದ ಅನುಭವ ಉಂಟಾಗಲಿದೆ.
ರಾಜ್ಯದಲ್ಲೇ ಎರಡನೇ ತಾರಾಲಯ: ಮಂಗಳೂರಿನ ಪಿಲಿಕುಳದಲ್ಲಿ 180 ಆಸನಗಳುಳ್ಳ 18 ಮೀಟರ್ ವ್ಯಾಸದ, 15 ಡಿಗ್ರಿ ಕೋನದಲ್ಲಿ ಇರಿಸಲ್ಪಟ್ಟ ಡೋಮ್ (ಗುಮ್ಮಟ) ಆಕೃತಿಯಲ್ಲಿ ನಿರ್ಮಾಣಗೊಂಡಿರುವ 3ಡಿ ತಾರಾಲಯ ರಾಜ್ಯದ ಮೊದಲ ಸ್ಥಾನ ಪಡೆದಿದ್ದರೆ, ಗದುಗಿನಲ್ಲಿ 65 ಆಸನಗಳುಳ್ಳ 18 ಮೀಟರ್ ವ್ಯಾಸದ, 15 ಡಿಗ್ರಿ ಕೋನದಲ್ಲಿ ಇರಿಸಲ್ಪಟ್ಟ ಡೋಮ್ (ಗುಮ್ಮಟ) ಆಕೃತಿಯಲ್ಲಿ ನಿರ್ಮಾಣಗೊಂಡಿರುವ ಡಿಜಿಟಲ್ ಆಕ್ಟಿವ್ 3ಡಿ ತಾರಾಲಯ ಎರಡನೇ ಸ್ಥಾನ ಪಡೆದಿದೆ. ರಾಜಧಾನಿ ಬೆಂಗಳೂರಿನಲ್ಲಿಯೇ 3ಡಿ ತಾರಾಲಯ ಇಲ್ಲದಿರುವುದು ಅಚ್ಚರಿಯ ಸಂಗತಿ.
ಗದಗ ನಗರದಲ್ಲಿ ಡಿಜಿಟಲ್ ಆ್ಯಕ್ಟಿವ್ 3ಡಿ ತಾರಾಲಯ ನಿರ್ಮಾಣಗೊಂಡಿರುವುದು ಹೆಮ್ಮೆಯ ಸಂಗತಿ. 3ಡಿ ತಾರಾಲಯ ಆದಷ್ಟು ಬೇಗ ಲೋಕಾರ್ಪಣೆಗೊಳ್ಳಲಿದ್ದು, ವಿದ್ಯಾರ್ಥಿಗಳ, ಪಾಲಕರ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಕಡಿಮೆ ದರದಲ್ಲಿ ಲಭ್ಯವಾಗುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಚ್.ಕೆ. ಪಾಟೀಲ, ಶಾಸಕರು
ಶಾಸಕ ಎಚ್.ಕೆ. ಪಾಟೀಲ ಅವರ ಆಸಕ್ತಿ, ಇಚ್ಛಾಶಕ್ತಿ ಹಾಗೂ ಪ್ರೋತ್ಸಾಹದ ಫಲವಾಗಿ ಗದಗ ನಗರದಲ್ಲಿ ಡಿಜಿಟಲ್ ಆ್ಯಕ್ಟಿವ್ 3ಡಿ ತಾರಾಲಯ ನಿರ್ಮಾಣಗೊಂಡಿದೆ. 4.8 ಕೋಟಿ ರೂ. ವೆಚ್ಚದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಹಾಗೂವಿಜ್ಞಾನಿಗಳಿಗೆ ಅನುಕೂಲವಾಗಲಿದೆ.
ದಿನೇಶ ಬಾಡಗಂಡಿ, ವರ್‍ನಾಜ್ ಟೆಕ್ನಾಲಜಿ ಸಂಸ್ಥಾಪಕರು *ಅರುಣಕುಮಾರ ಹಿರೇಮಠ