ಗಂಗಾವತಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಪ್ರಮುಖ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದು, ಈಗಾಗಲೇ ಪಕ್ಷದ ಟಿಕೇಟ್ ಗಾಗಿ ಆಕಾಂಕ್ಷಿಗಳು ಸಂಪರ್ಕ ಮಾಡುತ್ತಿದ್ದಾರೆ. ಜ.15ರ ನಂತರ ಪಕ್ಷ ಪ್ರಣಾಳಿಕೆ ಮ್ಯಾನಿಫೆಸ್ಟ್ ಬಿಡುಗಡೆ ಮಾಡುವುದಾಗಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ತಿಳಿಸಿದರು.
ಅವರು ಬುಧವಾರ ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೂತನ ಪಕ್ಷ ಘೋಷಣೆ ನಂತರ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆಯ ಮಾಡುವ ಕುರಿತು ಆಪ್ತರ ಜತೆ ಮಾತುಕತೆ ನಡೆಸಿ ತೀರ್ಮಾನಿಸಲಾಗುತ್ತದೆ ಎಂದರು.
ಗಂಗಾವತಿಯಲ್ಲಿ ಸ್ಪರ್ಧೆ ಮಾಡಲಿದ್ದು, ಈ ಕ್ಷೇತ್ರದ ಅಭಿವೃದ್ಧಿ ಮತ್ತು ಕಿಷ್ಕಿಂಧಾ ಅಂಜನಾದ್ರಿ ಸೇರಿ ಪ್ರವಾಸೋದ್ಯಮ ಬೆಳವಣಿಗೆ ಕುರಿತು ವಿಷನ್ ಇಟ್ಟುಕೊಂಡಿದ್ದು ಗೆದ್ದ ನಂತರ ಅನುಷ್ಠಾನಕ್ಕೆ ಕಾರ್ಯ ರೂಪಿಸಲಾಗಿದೆ. ಸದ್ಯ ಗಂಗಾವತಿಯಲ್ಲಿ ಹಾಲುಮತ, ಅಲ್ಪಸಂಖ್ಯಾತರು, ಎಸ್ಟಿ ಸಮುದಾಯ ಸೇರಿ ಎಲ್ಲ ವರ್ಗದವರು ಅಭಿಮಾನ ತೋರಿಸುತ್ತಿದ್ದು ನನ್ನ ಮೇಲೆ ಅಭಿಮಾನವಿಟ್ಟುಕೊಂಡಿದ್ದಕ್ಕೆ ಅಭಿನಂದನೆಗಳು ಎಂದರು.
ಶ್ರೀ ಚನ್ನಬಸವಸ್ವಾಮಿ ಜಾತ್ರೆಯ ನಿಮಿತ್ತ ಗಾಲಿ ಜನಾರ್ದನ ರೆಡ್ಡಿ ತಾತಾನ ಮಠ ಹಾಗೂ ಗ್ರಾಮ ದೇವತೆ ದುರುಗಮ್ಮ ದೇವಿ ದೇವಾಲಯಕ್ಕೆ ತೆರಳಿ ದರ್ಶನ ಪಡೆದರು.