Advertisement

G-20 ಶೃಂಗಸಭೆ: ಇಂದಿನಿಂದ ಶೆರ್ಪಾ ತಂಡದ ಸಭೆ

09:31 PM Jul 12, 2023 | Team Udayavani |

ಹೊಸಪೇಟೆ: ಪುರಾತನ ದೇವಾಲಯಗಳ ಮಹಾಗುತ್ಛ ಎಂಬ ಖ್ಯಾತಿ ಹೊಂದಿರುವ ವಿಶ್ವಪರಂಪರೆ ತಾಣ ಹಂಪಿಯಲ್ಲಿ ಮೂರು ದಿನಗಳಿಂದ ನಡೆದ ಜಿ 20 ಶೃಂಗಸಭೆ 3ನೇ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆ ಮಂಗಳವಾರ ಸಂಪನ್ನಗೊಂಡಿದ್ದು, ಜು.13ರಂದು ಶೆರ್ಪಾ ತಂಡದ ಸಭೆ ಆರಂಭವಾಗಲಿದೆ.

Advertisement

ಹಿಂದೆ ನಡೆದ ಎರಡು ಸಿಡಬ್ಲೂಜಿ ಸಭೆಗಳ ಶಿಫಾರಸುಗಳ ಮೇಲೆ ಸಹಮತ ಮೂಡಿಸಿ, ಹೆಚ್ಚಿನ ಒತ್ತು ನೀಡಲು ಹಂಪಿಯಲ್ಲಿ ನಡೆದ 3ನೇ ಸಿಡಬ್ಲೂಜಿ ಸಭೆ ಬೆಳಕು ಚೆಲ್ಲಿದೆ. ಭಾರತದ ಜಿ 20 ಅಧ್ಯಕ್ಷತೆಯಲ್ಲಿ ಖಜುರಾಹೊ ಮತ್ತು ಭುವನೇಶ್ವರದಲ್ಲಿ ಆಯೋಜಿಸಲಾಗಿದ್ದ ಹಿಂದಿನ ಎರಡು ಸಿಡಬ್ಲೂಜಿ ಸಭೆಗಳಲ್ಲಿ ಚರ್ಚಿಸಲಾದ ಶಿಫಾರಸುಗಳ ಮೇಲೆ ಒಮ್ಮತ ಸಾಧಿ ಸುವಲ್ಲಿ 3ನೇ ಸಿಡಬ್ಲೂಜಿ ಸಭೆ ಮಹತ್ವದ ಹೆಜ್ಜೆ ಇರಿಸಿದೆ.

ಭಾರತವು ಸೇರಿದಂತೆ 19 ಸದಸ್ಯ ರಾಷ್ಟ್ರಗಳು, 9 ಅತಿಥಿ ರಾಷ್ಟ್ರಗಳು ಹಾಗೂ 4 ಅಂತಾರಾಷ್ಟ್ರೀಯ ಸಂಸ್ಥೆಗಳ ಅತ್ಯುನ್ನತ ಪ್ರತಿನಿಧಿಗಳ ನೇತೃತ್ವದಲ್ಲಿ ಪ್ರತಿದಿನ ಎರಡು ಹಂತಗಳಲ್ಲಿ ಚರ್ಚೆಗಳನ್ನು ನಡೆಸಲಾಯಿತು. ಬುಧವಾರ ನಡೆದ ಚರ್ಚೆಯಲ್ಲಿ 3ನೇ ಸಾಂಸ್ಕೃತಿಕ ಕಾರ್ಯಕಾರಿ ಸಭೆಯ ಅಂತಿಮ ಅಧಿವೇಶನವು ಆ.26ರಂದು ವಾರಣಾಸಿಯಲ್ಲಿ ನಡೆಯಲಿದ್ದು, ಸಮಾರೋಪ ಸಭೆಯ ನವೀಕರಣ ಹಾಗೂ ಕೈಗೊಳ್ಳಬೇಕಾದ ಅಭಿವೃದ್ಧಿ ಕ್ರಮಗಳ ಬಗ್ಗೆ ಚರ್ಚೆ ನಡೆಸುವ ಮೂಲಕ ಮುಕ್ತಾಯಗೊಂಡಿತು.

ಪ್ರತಿನಿಧಿಗಳು ತಾವು ಭೇಟಿ ನೀಡಿದ ಸವಿನೆನಪಿಗಾಗಿ ಸಸಿಗಳನ್ನು ನೆಟ್ಟರು. ಬುಧವಾರ ಹಂಪಿಯ ಹಜಾರರಾಮ ದೇವಸ್ಥಾನದಲ್ಲಿ ಜಿ 20 ಅತ್ಯುನ್ನತ ಪ್ರತಿನಿಧಿಗಳು ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪ್ರತಿನಿ ಧಿಗಳಿಗೆ ಸೂರ್ಯೋದಯದ ಸಮಯದಲ್ಲಿ ವಿವಿಧ ಆಸನಗಳು ಹಾಗೂ ಅವುಗಳ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡಲಾಯಿತು. ಬುಧವಾರ ಮಧ್ಯಾಹ್ನದ ವೇಳೆಯಲ್ಲಿ ಜಿ 20 ಮೂರನೇ ಸಾಂಸ್ಕೃತಿಕ ಕಾರ್ಯಕಾರಿ ತಂಡ ಮರಳಿತು.

Advertisement

Udayavani is now on Telegram. Click here to join our channel and stay updated with the latest news.

Next