Advertisement

G20 Summit: : ಪ್ರಧಾನಿ ನರೇಂದ್ರ ಮೋದಿ, ಬೈಡೆನ್‌ ಚರ್ಚೆ

12:10 AM Nov 19, 2024 | Team Udayavani |

ರಿಯೋ ಡಿ ಜನೈರೋ: ತ್ರಿರಾಷ್ಟ್ರ ಪ್ರವಾಸದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬ್ರೆಜಿಲ್‌ನ ರಿಯೋ ಡಿ ಜನೈರೋ ತಲುಪಿ­ದ್ದಾರೆ. ಇಲ್ಲಿ ಜಿ20 ಶೃಂಗಸಭೆ ಆರಂಭವಾಗಿದ್ದು, ಸಭೆಯಲ್ಲಿ ಮೋದಿ ಭಾಗಿಯಾಗಿದ್ದಾರೆ.

Advertisement

ಬ್ರೆಜಿಲ್‌ಗೆ ತಲುಪಿದ ಮೋದಿ ಅವರನ್ನು ಅಧ್ಯಕ್ಷ ಲುಲಾ ಡ ಸಿಲ್ವಾ ಅವರು ಸ್ವಾಗತಿಸಿದರು. ಈ ವೇಳೆ “ಜೈ ಶ್ರೀ ಕೃಷ್ಣಾ’, “ವಂದೇ ಮಾತರಂ’ ಘೋಷಣೆಗಳು ಮೊಳಗಿದವು. ಬಳಿಕ ಜಿ20 ಶೃಂಗಸಭೆಯಲ್ಲಿ ಮೋದಿ ಭಾಗಿಯಾದರು. ಈ ವೇಳೆ ಅವರು ಅಮೆರಿಕ ಅಧ್ಯಕ್ಷ ಬೈಡೆನ್‌ ಪಕ್ಕದಲ್ಲಿ ಕುಳಿತು ಕೆಲಕಾಲ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಇಂದು ದ್ವಿಪಕ್ಷೀಯ ಮಾತುಕತೆ: ಚೀನ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸೇರಿ ಹಲವು ಪ್ರಮುಖ ನಾಯಕರು ಜಿ20 ಸಭೆಯಲ್ಲಿ ಭಾಗಿ ಯಾಗಿದ್ದು, ಮಂಗಳವಾರ ಇವರೊಂದಿಗೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ನೈಜೀರಿಯಾ ಪ್ರಧಾನಿಗೆ ಪಂಚಾಮೃತ ಕಳಶ ಗಿಫ್ಟ್
ನೈಜೀರಿಯಾ ಪ್ರವಾ ಸದ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ, ಅಲ್ಲಿನ ಅಧ್ಯಕ್ಷ ಬೋಲಾ ಅಹ್ಮದ್‌ ತಿನುಬು ಅವರಿಗೆ ಸಿಲೋಫ‌ರ್‌ ಪಂಚಾಮೃತ ಕಳಶವನ್ನು ಉಡುಗೊರೆಯಾಗಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next