ಹೊಸದಿಲ್ಲಿ: ಜಿ-20 ಸಮ್ಮೇಳನ ನಡೆಸಲು ಭಾರತ ಸಿದ್ದತೆ ನಡೆಸುತ್ತಿದ್ದು, ಸೆ.9-10ರಂದು ಸಮ್ಮೇಳನ ನಡೆಯಲಿದೆ. ಹಲವು ದೇಶಗಳ ಪ್ರಧಾನಿ, ಅಧ್ಯಕ್ಷರು ಸೇರಿ ಹಲವು ಗಣ್ಯರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ರಾಷ್ಟ್ರದ ಮುಖ್ಯಸ್ಥರು ಮತ್ತು ವಿಶ್ವ ನಾಯಕರಿಗೆ ವಿಶೇಷ ಸ್ವಾಗತವನ್ನು ನೀಡಲು ಸಿದ್ದತೆ ನಡೆಸಲಾಗುತ್ತಿದೆ. ನವ ದೆಹಲಿಯ ಐಷಾರಾಮಿ ಹೋಟೆಲ್‌ಗಳು ವಿವಿಐಪಿಗಳಿಗೆ ವಿಶಿಷ್ಟವಾದ ಭೋಜನದ ಅನುಭವವನ್ನು ನೀಡಲು ಸಿದ್ಧವಾಗಿವೆ. ಸೊಗಸಾದ ಬೆಳ್ಳಿ ಮತ್ತು ಚಿನ್ನದ ಲೇಪಿತ ಪಾತ್ರೆಗಳ ಮೇಲೆ ಊಟವನ್ನು ನೀಡಲಾಗುತ್ತದೆ, ಇದು ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಒಂದು ನೋಟವನ್ನು ವಿದೇಶಿ ಗಣ್ಯರಿಗೆ ನೀಡುತ್ತದೆ.
ಜೈಪುರ ಮೂಲದ ಮೆಟಲ್ ವೇರ್ ಸಂಸ್ಥೆ, IRIS-ಜೈಪುರ್, ಜಿ-20 ಪ್ರತಿನಿಧಿಗಳ ಅಗತ್ಯತೆಗಳನ್ನು ಪೂರೈಸುವ, ದೆಹಲಿಯ ಐಷಾರಾಮಿ ಹೋಟೆಲ್ ಗಳಿಗೆ ಚಿನ್ನ ಮತ್ತು ಬೆಳ್ಳಿ ಲೇಪಿತ ಟೇಬಲ್ ವೇರ್‌ಗಳನ್ನು ಪೂರೈಸುವ ಕಾರ್ಯವನ್ನು ವಹಿಸಿಕೊಂಡಿದೆ. ಕಂಪನಿಯು ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ G20 ಶೃಂಗಸಭೆಯಲ್ಲಿ ಭಾಗವಹಿಸುವ ಗಣ್ಯ ಅತಿಥಿಗಳಿಗೆ ಸೇವೆ ಸಲ್ಲಿಸಲು ವಿಶೇಷವಾಗಿ ವಿನ್ಯಾಸಗೊಳಿಸಿದ ತನ್ನ ಸಾಂಪ್ರದಾಯಿಕ ಕಟ್ಲರಿಗಳನ್ನು ಪ್ರದರ್ಶಿಸಿತು.
ಇದನ್ನೂ ಓದಿ:Chikkamagaluru: ಬಸ್ಸಿಗಾಗಿ ಕಾಯುತ್ತಿದ್ದ ಮಕ್ಕಳ ಮೇಲೆ ಹರಿದ ಬಸ್, ಇಬ್ಬರ ಸ್ಥಿತಿ ಗಂಭೀರ
ಲೀಲಾ ಪ್ಯಾಲೇಸ್, ಐಟಿಸಿ ಹೊಟೇಲ್ ಗಳು (ಇದರಲ್ಲಿ ಪ್ರತಿಷ್ಠಿತ ಐಟಿಸಿ ಮೌರ್ಯ ಸೇರಿದೆ), ತಾಜ್ ಪ್ಯಾಲೇಸ್, ಒಬೆರಾಯ್ ಹೊಟೇಲ್‌ಗಳು, ದಿ ಲೋಧಿ, ಹಯಾತ್ ರೀಜೆನ್ಸಿ, ಶಾಂಗ್ರಿ-ಲಾ, ಹೋಟೆಲ್ ಅಶೋಕ, ರಾಡಿಸನ್ ಬ್ಲೂ ಪ್ಲಾಜಾ, ಜೆಡಬ್ಲ್ಯೂ ಮ್ಯಾರಿಯೊಟ್, ಶೆರಾಟನ್, ಮತ್ತು ದ ಲೀಲಾ ಆಂಬಿಯೆನ್ಸ್ ಕನ್ವೆನ್ಷನ್ ಸೇರಿದಂತೆ ಹಲವೆಡೆ ಈ ಉತ್ಕೃಷ್ಟ ಹೋಟೆಲ್ ಗಳು ಈ ಬಾರಿ ಆತಿಥ್ಯ ವಹಿಸಲಿದೆ.