Advertisement

G20 ಯಶಸ್ಸು; ಪ್ರಧಾನಿ ಮೋದಿಯಾರನ್ನು ಅಭಿನಂದಿಸಲು ಕೇಂದ್ರ ಸಚಿವ ಸಂಪುಟ ನಿರ್ಣಯ

06:49 PM Sep 13, 2023 | Team Udayavani |

ಹೊಸದಿಲ್ಲಿ: ಅದ್ಧೂರಿಯಾಗಿ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಯನ್ನು ಯಶಸ್ವಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಡೀ ದೇಶದ ಪರವಾಗಿ ಅಭಿನಂದನೆಗಳು ಮತ್ತು ಧನ್ಯವಾದಗಳನ್ನು ತಿಳಿಸುವ ನಿರ್ಣಯವನ್ನು ಕೇಂದ್ರ ಸಂಪುಟ ಬುಧವಾರ ಅಂಗೀಕರಿಸಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

Advertisement

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಠಾಕೂರ್, ಇಂಟರ್ ನ್ಯಾಶನಲ್ ಸೋಲಾರ್ ಅಲೈಯನ್ಸ್ ಮತ್ತು ಮಿಷನ್ ಲೈಫ್ ((Lifestyle for Environment) ಗೆ ಸಂಬಂಧಿಸಿದ ಹಿಂದಿನ ಯಶಸ್ಸಿನ ನಂತರ ಜಾಗತಿಕ ಜೈವಿಕ ಇಂಧನ ಒಕ್ಕೂಟದ ಉಡಾವಣೆಯನ್ನು ಉಲ್ಲೇಖಿಸಿ, ಪ್ರಧಾನಿ ಮೋದಿ “ಜಾಗತಿಕ ಮೈತ್ರಿಗಳ ವ್ಯಕ್ತಿ” ಯಾಗಿ ಹೊರಹೊಮ್ಮಿದ್ದಾರೆ ಎಂದರು.

ಜಿ20 ಶೃಂಗಸಭೆಗೆ ಸಂಬಂಧಿಸಿದ ನಿರ್ಣಯವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಡಿಸಿದರು ಮತ್ತು ಸರ್ವಾನುಮತದಿಂದ ಅಂಗೀಕರಿಸಲಾಯಿತು ಎಂದು ತಿಳಿಸಿದರು.

ಜಿ 20 ಶೃಂಗಸಭೆಯ ಯಶಸ್ಸಿನಿಂದ ದೇಶದ ಸಣ್ಣ ರೈತರು ಮತ್ತು ಇತರ ನಾಗರಿಕರಿಗೆ ಏನು ಸಿಗುತ್ತದೆ ಎಂಬ ವಿರೋಧ ಪಕ್ಷಗಳ ಪ್ರಶ್ನೆಗಳ ಬಗ್ಗೆ ಕೇಳಿದಾಗ, “ಜಗತ್ತಿನಾದ್ಯಂತ ಸಿರಿಧಾನ್ಯಗಳ ಬಗ್ಗೆ ಮಾತನಾಡುವಾಗ ಸಣ್ಣ ರೈತರು ಸಹ ಪ್ರಯೋಜನ ಪಡೆಯುತ್ತಾರೆ. ದ್ವಿ ಇಂಧನ ಮೈತ್ರಿಯಿಂದ ನಮ್ಮ ರೈತರಿಗೆ ಪ್ರಯೋಜನವಿಲ್ಲವೇ, ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್‌ನಿಂದ ನಮ್ಮ ಸಣ್ಣ ವ್ಯಾಪಾರಿಗಳು ಮತ್ತು ರೈತರಿಗೆ ಪ್ರಯೋಜನವಿಲ್ಲವೇ? ಎಂದು ಮರು ಪ್ರಶ್ನಿಸಿ ವಿಪಕ್ಷಗಳಿಗೆ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next