Advertisement
ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್, ರಷ್ಯಾ ವಿದೇಶಾಂಗ ಸಚಿವ ಲಾರ್ವೋ, ಫ್ರಾನ್ಸ್‌ನ ಕ್ಯಾಥರೀನ್ ಕೊಲೊನ್ನಾ, ಚೀನದ ಕ್ವಿನ್ ಗಾಂಗ್, ಜರ್ಮನಿಯ ಅನ್ನಲೇನಾ , ಬ್ರಿಟನ್‌ನ ಜೇಮ್ಸ್ ಕ್ಲೆವರ್ಲೆ ಭಾಗವಹಿಸಲಿರುವುದು ಖಚಿತವಾಗಿದೆ. ಇದಲ್ಲದೆ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ವಿದೇಶಾಂಗ ಸಚಿವರೂ ಅದರಲ್ಲಿ ಭಾಗಿಗಳಾಗಲಿದ್ದಾರೆ.
ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಲಿರುವ ಚೀನ ವಿದೇಶಾಂಗ ಸಚಿವ ಕ್ವಿನ್ ಗಾಂಗ್ ವಿದೇಶಾಂಗ ಸಚಿವ ಎಸ್.ಜೈಶಂಕರ್ ಜತೆಗೆ ಮಾತುಕತೆ ನಡೆಸಲಿದ್ದಾರೆ. ಸಚಿವ ಕ್ವಿನ್ ಡಿಸೆಂಬ ರ್‌ನಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಅನಂತರ ಮೊದಲ ಬಾರಿಗೆ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ. 2019, 2022ರಲ್ಲಿ ಕ್ವಿನ್ ಅವರು ಹೊಸದಿಲ್ಲಿಗೆ ಆಗಮಿಸಿ ದ್ದರು. ಗಾಲ್ವನ್ ಗಲಾಟೆ ನಡೆದ ಬಳಿಕ ಭಾರತ-ಚೀನ ನಡುವಿನ ಉತ್ತಮ ಬಾಂಧವ್ಯ ಇಲ್ಲ.
Related Articles
Advertisement