Advertisement

ಸ್ವಾಭಿಮಾನಕ್ಕೆ ಉದಾಹರಣೆ ಕನಕದಾಸರು: ಪಣ್ಣೇನಹಳ್ಳಿ ಕನಕ ಜಯಂತಿಯಲ್ಲಿ ಡಾ.ಪರಮೇಶ್ವರ್ ಹೇಳಿಕೆ

09:25 PM Dec 13, 2022 | Team Udayavani |

ಕೊರಟಗೆರೆ: ಸ್ವಾಭಿಮಾನಕ್ಕೆ ಪ್ರಾಮಾಣಿಕತೆಗೆ ಉದಾಹರಣೆಗೆ ತೆಗೆದುಕೊಂಡರೆ ಅದು ಕನಕದಾಸರು ಮಾತ್ರ. ನಮ್ಮ ದೇಶ ಹಾಗೂ ರಾಜ್ಯದಲ್ಲಿ ಅನೇಕ ಜನ ಮಹಾಪುರುಷರು ಹುಟ್ಟಿದ್ದಾರೆ. ಅಂತಹ ಮಹಾಪುರುಷರ ಸಾಲಿಗೆ ಸೇರಿದವರು ಕನಕದಾಸರು.ಅವರಿಗೆ ಇದ್ದ ಭಕ್ತಿ ಎಷ್ಟು ಎಂದರೆ ಧರ್ಮ ಮತ್ತು ಭಕ್ತಿಯ ವಿಚಾರದಲ್ಲಿ 535 ವರ್ಷ ಕಳೆದರೂ ಕನಕದಾಸರನ್ನೂ ನಾವು ಮರೆಯುವಂತಿಲ್ಲ ಎಂದು ಡಾ.ಜಿ ಪರಮೇಶ್ವರ ತಿಳಿಸಿದರು.

Advertisement

ಅವರು ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಪಣ್ಣೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ 535ನೇ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಕ್ತಿ ತ್ಯಾಗಕ್ಕೆ ಮತ್ತೊಂದು ಹೆಸರೆ ಭಕ್ತ ಕನಕದಾಸರು. ಮಡಿವಂತಿಕೆ ಸಮಾಜದಲ್ಲಿ ಕನಕದಾಸರು ದಾಸ ಸಾಹಿತ್ಯ ಮೈಗೂಡಿಸಿಕೊಳ್ಳುವಲ್ಲಿ ಬಹಳ ಶ್ರಮ‌ವಹಿಸಿದ್ದು, ದೇವರನ್ನು ಪ್ರತ್ಯಕ್ಷವಾಗಿ ಕಂಡಂತಹ ಏಕೈಕ ವ್ಯಕ್ತಿ ಕನಕದಾಸರು.ಭಕ್ತಿ , ಜ್ಞಾನ, ತ್ಯಾಗದ ಆದರ್ಶವಾದವನ್ನು ಪ್ರಸಕ್ತ ಸನ್ನಿವೇಶದಲ್ಲಿ ಸಮಾಜದ ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ.ಅವರ ಆದರ್ಶ ಮತ್ತು ತತ್ವ ಸಿದ್ದಾಂತವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು

ಪಣ್ಣೇನಹಳ್ಳಿಯಲ್ಲಿ ಸಿಸಿ ರಸ್ತೆ,ಚರಂಡಿ ಕಾಮಗಾರಿ ಸೇರಿದಂತೆ ಟೆಂಡರ್ ಕೆಲಸ ಮುಗಿದಿದೆ .ಇನ್ನು 15 ದಿನಗಳಲ್ಲಿ ಕೆಲಸ ಪ್ರಾರಂಭಿಸುತ್ತಾರೆ. 5 ಲಕ್ಷ ರೂ ವೆಚ್ಚದಲ್ಲಿ ಚರಂಡಿ ಕಾಮಗಾರಿ ಮತ್ತು 4 ಲಕ್ಷ ರೂ ಸಿಸಿ ರಸ್ತೆ ಮಾಡಲಾಗುವುದು. ಗ್ರಾಮದಲ್ಲಿ ಬಗರ್ ಹುಕುಂ ಜಮೀನಿನ ತಕರಾರು ಇದೆ ಅದನ್ನು ಆದಷ್ಟು ಬೇಗ ಬಗೆಹರಿಸಿ ಅನುಭವದಲ್ಲಿರುವ ರೈತರಿಗೆ ಅನುಕೂಲ ಮಾಡಲು ಈಗಾಗಲೇ ತಹಶೀಲ್ದಾರ್ ರವರಿಗೆ ತಿಳಿಸಿದ್ದೇನೆ. ನಿಮ್ಮ ಜೊತೆ ನಾನು ಸದಾ ಇರುತ್ತೇನೆ. ನಾನು ಶಾಸಕನಾದ ಮೇಲೆ ನಮ್ಮ ಕೊರಟಗೆರೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗಂಗರಾಜು ಪಿ.ಸಿ . ನಾರಾಯಣಪ್ಪ, ರಂಗಧಾಮಯ್ಯ, ವೀರನಾಗಯ್ಯ, ದೊಡ್ಡಯ್ಯ, ಮಹೇಶ್, ರಾಜಣ್ಣ, ಚಿಕ್ಕರಾಜು, ಹನುಮಂತರಾಜು, ಶಿವಣ್ಣ, ಚಿಕ್ಕಣ್ಣ ,ಕುಮಾರ್, ಸುರೇಶ್ ,ರಾಮಣ್ಣ, ನಂಜುಂಡಯ್ಯ, ಲಕ್ಷ್ಮಿ ಪ್ರಸಾದ್, ರಘುನಂದನ್, ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.

Advertisement

ಇದನ್ನೂ ಓದಿ: ಕ್ಯಾನ್ಸರ್ ರೋಗಕ್ಕೆ ಭಯ ಪಡುವ ಅಗತ್ಯವಿಲ್ಲ: ಡಾ.ರಾಜಶೇಖರ್ ಸಿ. ಜಾಕಾ ಅಭಿಪ್ರಾಯ

Advertisement

Udayavani is now on Telegram. Click here to join our channel and stay updated with the latest news.

Next