Advertisement
ತಾ.ಪಂ.ನ ಹಾಲಿ ಕಟ್ಟಡವು ಶಿಥಿಲಾ ವಸ್ಥೆಯಲ್ಲಿರುವ ಜತೆಗೆ ಜಾಗದ ಕೊರತೆಯೂ ಅಲ್ಲಿದೆ. ಮಧ್ಯದಲ್ಲಿ ಹಳೆಯ ಕಟ್ಟಡವೊಂದಿದ್ದು, ಬಳಿಕ ಅದಕ್ಕೆ ಸಣ್ಣ ಸಣ್ಣ ಕಟ್ಟಡಗಳನ್ನು ಸೇರಿಸಲಾಗಿದ್ದು, ಒಟ್ಟಿನಲ್ಲಿ ಅದು ವ್ಯವಸ್ಥಿತ ಕಟ್ಟಡದಂತಿಲ್ಲ. ಹೀಗಾಗಿ ಒಂದು ಸುಸಜ್ಜಿತ ಕಟ್ಟಡಕ್ಕಾಗಿ ಹಲವು ವರ್ಷಗಳಿಂದ ಬೇಡಿಕೆ ಕೇಳಿಬಂದಿತ್ತು.
ನೂತನ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದರೂ ತಾಂತ್ರಿಕ ಮಂಜೂರಾತಿ ಇನ್ನೂ ಸಿಕ್ಕಿಲ್ಲ. ಹೀಗಾಗಿ ನಿರ್ದಿಷ್ಟವಾಗಿ ಇಂತಿಷ್ಟೇ ಚದರ ಅಡಿ ಕಟ್ಟಡ ನಿರ್ಮಾಣಗೊಳ್ಳಲಿದೆ ಎಂಬುದನ್ನು ಈಗಲೇ ಹೇಳುವಂತಿಲ್ಲ. ಆದರೆ ಪ್ರಸ್ತುತ ಸಿದ್ಧಗೊಂಡಿರುವ ಅಂದಾಜು ನಕಾಶೆಯ ಪ್ರಕಾರ ಒಟ್ಟು 19 ಸಾವಿರ ಚದರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಾಣಗೊಳ್ಳಲಿದೆ. ಕಟ್ಟಡದ ನೆಲ ಅಂತಸ್ತಿ ನಲ್ಲಿ 6,500 ಚ. ಅಡಿ, ಮೊದಲ ಮಹಡಿಯಲ್ಲಿ 6,500 ಚ. ಅಡಿ, ಎರಡನೇ ಅಂತಸ್ತಿನಲ್ಲಿ 6,000 ಚ. ಅಡಿ ವಿಸ್ತೀರ್ಣ ಕಟ್ಟಡ ನಿರ್ಮಾಣಗೊಳ್ಳಲಿದೆ. ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರಿಗೆ ಪ್ರತ್ಯೇಕ ಕೊಠಡಿ ಹಾಗೂ ವೀಡಿಯೋ ಕಾನ್ಫರೆನ್ಸ್ ಕೊಠಡಿ, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಾಯೀ ಸಮಿತಿ ಅಧ್ಯಕ್ಷರಿಗೆ ಪ್ರತ್ಯೇಕ ಕೊಠಡಿಗಳು ನಿರ್ಮಾಣಗೊಳ್ಳಲಿವೆ. ಜತೆಗೆ ಸದಸ್ಯರ ಚೇಂಬರ್ ಸಹಿತ ಹಾಲಿ ತಾ.ಪಂ.ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಲಾಖೆಗಳು ಹೊಸ ಕಟ್ಟಡದಲ್ಲಿರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
ಕಟ್ಟಡಕ್ಕೆ ಅನುದಾನ ಮಂಜೂರಾಗಿದ್ದರೂ ತಾಂತ್ರಿಕ ಅನುಮೋದನೆ ಇನ್ನೂ ಬಾಕಿ ಇದೆ. ಅದರ ಕಡತ ಪ್ರಸ್ತುತ ಬೆಂಗಳೂರಿನಿಂದ ದ.ಕ. ಜಿ.ಪಂ.ಗೆ ಬಂದಿದ್ದು, ಬೆಳ್ತಂಗಡಿ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್‌ಗಳು ಹೇಳುವ ಪ್ರಕಾರ, ವಾರದಲ್ಲಿ ತಾಂತ್ರಿಕ ಅನುಮೋದನೆ ಸಿಗಲಿದೆ. ತಾಂತ್ರಿಕ ಅನುಮೋದನೆ ಬಳಿಕ ಟೆಂಡರ್ ಕರೆಯಲಾಗುತ್ತದೆ. ಸುಮಾರು 40ರಿಂದ 45 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಜನವರಿ ತಿಂಗಳ 15ರ ಸುಮಾರಿಗೆ ನೂತನ ಕಟ್ಟಡದ ಕಾಮಗಾರಿ ಆರಂಭಗೊಳ್ಳಲಿದೆ.
Advertisement
ಸಾಮರ್ಥ್ಯ ಸೌಧಕ್ಕೆ ಶಿಫ್ಟ್ಹಾಲಿ ತಾ.ಪಂ. ಕಟ್ಟಡ ಇರುವ ಸ್ಥಳದಲ್ಲೇ ಹೊಸ ಕಟ್ಟಡ ನಿರ್ಮಾಣವಾಗುವುದರಿಂದ ಹಳೆ ಕಟ್ಟಡ ಕೆಡವುದು ಅನಿವಾರ್ಯವಾಗಿದೆ. ಹೀಗಾಗಿ ಸುಮಾರು ವರ್ಷಗಳ ಕಾಲ ಬೆಳ್ತಂಗಡಿ ತಾ.ಪಂ. ಸ್ಥಳೀಯ ಸಾಮರ್ಥ್ಯ ಸೌಧ ಕಟ್ಟಡದಲ್ಲಿ ಕಾರ್ಯಾಚರಿಸಲಿದೆ. ಅಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಹೊಸ ಕಟ್ಟಡ ಶೀಘ್ರ ನಿರ್ಮಾಣವಾಗುವ ಸಾಧ್ಯತೆ ಇದೆ. 1 ಕೋಟಿ ರೂ. ಬಿಡುಗಡೆ
ಮಂಜೂರುಗೊಂಡ 3.50 ಕೋ. ಅನುದಾನದಲ್ಲಿ ಈಗಾಗಲೇ 1 ಕೋ. ರೂ. ಬಿಡುಗಡೆಗೊಂಡಿದೆ. ಅದು ಮಾರ್ಚ್ ಒಳಗೆ ಮುಗಿಯಬೇಕಿರುವುದರಿಂದ ಜನವರಿಯಲ್ಲಿ ಕಾಮಗಾರಿ ಆರಂಭಿಸುವುದು ಅನಿವಾರ್ಯವಾಗಿದೆ. ಈ ಅನುದಾನ ಖರ್ಚಾದ ಬಳಿಕ ಮುಂದಿನ ಅನುದಾನ ಬಿಡುಗಡೆಯಾಗಲಿದೆ. ಶೀಘ್ರದಲ್ಲಿ ತಾಂತ್ರಿಕ ಅನುಮೋದನೆ
ಅನುದಾನ ಮಂಜೂರುಗೊಂಡು ಶೀಘ್ರದಲ್ಲಿ ತಾಂತ್ರಿಕ ಅನುಮೋದನೆ ಸಿಗಲಿದೆ. ಬಳಿಕ ಟೆಂಡರ್ ಪ್ರಕ್ರಿಯೆ ಆರಂಭಗೊಂಡು ಜ. 15ರ ಸುಮಾರಿಗೆ ಕಾಮಗಾರಿ ಆರಂಭಿಸಲಿದ್ದೇವೆ. ಪ್ರಸ್ತುತ 1 ಕೋ. ರೂ. ಬಿಡುಗಡೆಗೊಂಡಿದ್ದು, ಮಾರ್ಚ್ ಅಂತ್ಯದಲ್ಲಿ ಅದನ್ನು ಖರ್ಚು ಮಾಡುವುದು ಅನಿವಾರ್ಯವಾಗಿದೆ. ಎಲ್ಲರ ಸಹಕಾರ ಲಭಿಸಿದಲ್ಲಿ ಶೀಘ್ರದಲ್ಲಿ ಹೊಸ ಕಟ್ಟಡದ ಕಾಮಗಾರಿ ಪೂರ್ತಿಗೊಳ್ಳಲಿದೆ.
– ಚೆನ್ನಪ್ಪ ಮೊಯಿಲಿ ಎಇಇ,
ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗ, ಬೆಳ್ತಂಗಡಿ ಕಿರಣ್ ಸರಪಾಡಿ