Advertisement

ಜಿ. ಪರಮೇಶ್ವರಪ್ಪ ಎಪಿಎಂಸಿ ಅಧ್ಯಕ್ಷ

06:38 AM Jun 01, 2020 | Suhan S |

ಕೊಟ್ಟೂರು: ಕೊಟ್ಟೂರು ಕೃಷಿ ಉತ್ಪನ್ನ ಮಾರುಕಟ್ಟೆ ಚುನಾವಣೆಯಲ್ಲಿ ಇಲ್ಲಿನ ಜಿ. ಪರಮೇಶ್ವರಪ್ಪ ಅಧ್ಯಕ್ಷ ಸ್ಥಾನಕ್ಕೆ ಮತ್ತು ಎನ್‌.ವಿ. ತಮ್ಮಣ್ಣ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿ ಕಾರಿಯಾದ ಜಿ. ಅನಿಲ್‌ಕುಮಾರ ತಹಶೀಲ್ದಾರ್‌ ಕೊಟ್ಟೂರು ಪ್ರಕಟಪಡಿಸಿದರು.

Advertisement

ಕೊಟ್ಟೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಚುನಾವಣೆ ಶನಿವಾರ ಬೆಳಗ್ಗೆ 11ರ ಸುಮಾರಿಗೆ ಫಲಿತಾಂಶ ಪ್ರಕಟವಾಯಿತು. ಈ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಜಿ. ಪರಮೇಶ್ವರಪ್ಪ 2 ನಾಮಪತ್ರ ಸಲ್ಲಿಸಿದ್ದರು. ಎಸ್‌. ಮಲ್ಲಿಕಾರ್ಜುನ ಹಾಗೂ ಕೆ.ಸಿದ್ದಪ್ಪ ಇವರು ಸೂಚಕರಾಗಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಎನ್‌.ವಿ. ತಮ್ಮಣ್ಣ ಇವರು ನಾಮಪತ್ರ ಸಲ್ಲಿಸಿದ್ದರು. ಇವರಿಗೆ ಜಿ. ಯಲ್ಲಪ್ಪ ಸೂಚಕರಾಗಿರುತ್ತಾರೆ. ಕೃಷಿ ಉತ್ಪನ್ನ ಮಾರುಕಟ್ಟೆಗೆ 14 ಜನ ಸದಸ್ಯರೊಳಗೊಂಡಂತೆ ರಚನೆಯಾಗಿದೆ.

ಅವಿರೋಧವಾಗಿ ಆಯ್ಕೆಯಾದ ಜಿ. ಪರಮೇಶ್ವರಪ್ಪ ಮತ್ತು ಎನ್‌.ವಿ. ತಮ್ಮಣ್ಣರವರನ್ನು ಇಲ್ಲಿನ ಸದಸ್ಯರನ್ನೊಳಗೊಂಡಂತೆ ಪ್ರಮುಖರು ಹೂವಿನ ಮಾಲೆ ಹಾಕುವುದರ ಮೂಲಕ ಸಂತಸ ವ್ಯಕ್ತಪಡಿಸಿ ಸಿಹಿ ಹಂಚಿದರು.

ಪಿಎಸ್‌ಐ ಕಾಳಿಂಗ, ಬೂದಿ ಶಿವಕುಮಾರ ಅಧ್ಯಕ್ಷರು, ಪ್ರಭಾರಿ ಕಾರ್ಯದರ್ಶಿಯಾದ ಎ.ಕೆ. ವೀರಣ್ಣ, ಶೆಟ್ಟಿ ಮಲ್ಲಿಕಾರ್ಜುನ, ತಿಪ್ಪೇಸ್ವಾಮಿ ಬೋರ್‌ವೆಲ್‌ ಚನ್ನಬಸವನಗೌಡ ಗುಂಡುಮುಣುಗು ತಿಪ್ಪೇಸ್ವಾಮಿ, ಎಂ.ಎಂ. ಜೆ. ಹರ್ಷವರ್ಧನ, ಸುಧಾಕರಗೌಡ, ಬಿ.ಡಿ. ಸೋಮಣ್ಣ, ರಾಜಣ್ಣ ನಾಗರಕಟ್ಟೆ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next